ಪತ್ರಕರ್ತ ವಿಜಯವಾಣಿ ಮಂಜಣ್ಣ ಪುತ್ರ ಕುಶಾಲ್ ರೆಡ್ಡಿ ಅಪಘಾತದಲ್ಲಿ ದುರ್ಮರಣ

ಬಾಗೇಪಲ್ಲಿ: ಹಿರಿಯ ಪತ್ರಕರ್ತ ವಿಜಯವಾಣಿ ಮಂಜುನಾಥ್ ರೆಡ್ಡಿ ಅವರ ಪುತ್ರ ಕುಶಾಲ್ ರೆಡ್ಡಿ 22 ವರ್ಷ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ವರದಿಯಾಗಿದೆ.
ಪಟ್ಟಣದ 9ನೇ ವಾರ್ಡಿನ ನಿವಾಸಿ ಮಂಜುನಾಥ್ ರೆಡ್ಡಿ ಸುಮಾರು 16 ವರ್ಷಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸೊ ಮೂಲಕ ವಿಜಯವಾಣಿ ಮಂಜಣ್ಣ ಎಂದೇ ಹೆಸರವಾಸಿಯಾಗಿರುವ ತಾಲೂಕಿನ ರಾಚ್ಚೇರುವು ಗ್ರಾಮ ಪಂಚಾಯಿತಿ ಪ್ಯಾಯಲೋಲಪಲ್ಲಿ ಮಂಜುನಾಥ್ ರೆಡ್ಡಿ ಅವರಿಗೆ ಒಬ್ಬನೇ ಮಗನಾದ ಕುಶಾಲ್ ರೆಡ್ಡಿ ಸದ್ಯಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರತಿಷ್ಠಿತ ನಾಗಾರ್ಜುನ ಇಂಜಿನಿಯರ್ ಕಾಲೇಜುನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ ಎನ್ನಲಾಗಿದೆ.
ಆದರೆ ನಿನ್ನೆ ಸಂಜೆ ಕಾಲೇಜು ಮುಗಿಸಿಕೊಂಡು ನಾಗಾರ್ಜುನ ಕಾಲೇಜು ಕಡೆಯಿಂದ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ದೇವನಹಳ್ಳಿ ಕಡೆಗೆ ( R15 ) ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದಾಗ ವೆಂಕಟಗಿರಿಕೋಟೆ ಬಳಿ ಬಲಭಾಗದಿಂದ ಬಂದ ಟಿಪ್ಪರ್ ವಾಹಣವನ್ನು ತಪ್ಪಿಸಲು ಹೋಗಿ ದ್ವಿಚಕ್ರವಹಾನ ನಿಯಂತ್ರಣ ತಪ್ಪಿ ನಡು ರಸ್ತೆಯಲ್ಲಿರುವ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದಾನೆ.
ಕುಶಾಲ್ ರೆಡ್ಡಿ ಚಲಿಸುತ್ತಿದ್ದ' R15' ಬೈಕ್ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ತಲೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಯಲಹಂಕ ಸೂಪರ್ ಸ್ಪೆಷಾಲ್ಟಿ ಹಾಸ್ಪಿಟಲ್ ಆಷ್ಟರ್ ಹಾಸ್ಪತ್ರೆಗೆ ದಾಖಳಿಸಲಾಗಿದ್ದು ಚಿಕಿತ್ಸೆ ಪಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದ್ದು.
ಮೃತ ಪಟ್ಟ ಕುಶಾಲ್ ರೆಡ್ಡಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದ್ದು.ಮರಣೋತ್ತರ ಪರೀಕ್ಷೆ ನಂತರ ಕುಶಾಲ್ ರೆಡ್ಡಿ ಅಂತಿಮ ದರ್ಶನ ಪಡೆದ ಬಾಗೇಪಲ್ಲಿ ಶಾಸಕ. ಎಸ್. ಎನ್.ಸುಬ್ಬಾ ರೆಡ್ಡಿ, ಬಿಜೆಪಿ ಮುಖಂಡ ಸಿ. ಮುನಿರಾಜು, ಜೆಡಿಎಸ್ ಮುಖಂಡ ಜೆ. ಪಿ. ಚಂದ್ರ, ಸೇರಿದಂತೆ ವಿವಿಧ ಗಣ್ಯರು ಕುಶಾಲ್ ರೆಡ್ಡಿ ಕುಟುಂಬಕ್ಕೆ ಸಂತಾಪ ಸೂಚಿಸಿ ಧೈರ್ಯ ತುಂಬಿದ್ದಾರೆ..
What's Your Reaction?






