ಪಾಕ್ ವಿರುದ್ಧ 'ಆಪರೇಷನ್ ಸಿಂಧೂರ' ಕಾರ್ಯಚರಣೆ ಬಿಜೆಪಿಯಿಂದ ತಿರಂಗ ಯಾತ್ರೆ

ಕೆಜಿಎಫ್: ಪಾಕಿಸ್ತಾನ ವಿರುದ್ಧದ 'ಆಪರೇಷನ್ ಸಿಂಧೂರ'ಸೇನಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸೇನಾನಿಗಳಿಗೆ ಅಭಿನಂದನೆ ಸಲ್ಲಿಸಲು ಶುಕ್ರವಾರ ಬೆಳಗ್ಗೆ ಬಿಜೆಪಿ ತಿರಂಗಾ ಯಾತ್ರೆಯನ್ನು ಹಮ್ಮಿಕೊಂಡಿತ್ತು. ನಗರದ ಸ್ವರ್ಣಾನಗರ್ ವೆಂಕಟರಮಣ ಸ್ವಾಮಿ ದೇವಾಲಯದ ಆವರಣದಿಂದ ಸಲ್ಡನ ವೃತ್ತ ವರಗೆ ನಡೆದ ತಿರಂಗಾ ಯಾತ್ರೆಯಲ್ಲಿ ನಿವೃತ್ತ ಯೋಧರು. ನಾಗರಿಕರು. ಶಾಲಾ. ಕಾಲೇಜು ಮಕ್ಕಳು. ಮತ್ತು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು. ತ್ರಿವರ್ಣ ಧ್ವಜವನ್ನು ಹಿಡಿದು ಸೈನಿಕರು ಮತ್ತು ಕಾಲೇಜಿನ ಮಕ್ಕಳು ದೇಶದ ಪರ ಘೋಷಣೆಗಳನ್ನು ಕೂಗುತ್ತ ಸಾಗಿದರು. ಭಾರತ್ ಮಾತಾ ಕೀ ಜೈ. ಪಾಕಿಸ್ತಾನಕ್ಕೆ ಪಾಠ ಕಲಿಸಿದ ಭಾರತ ದೇಶಭಕ್ತ ಸೈನಿಕರಿಗೆ ಜೈ ಮತ್ತು ಭಾರತಕ್ಕೆ ವಿಶ್ವದಲ್ಲಿ ಗೌರವವನ್ನು ತಂದು ಕೊಟ್ಟಿರುವ ಸೇನಾನಿಗಳಿಗೆ ಜೈ. ಎಂಬ ಘೋಷವಾಕ್ಯಗಳನ್ನು ಕೂಗಲಾಯಿತು. ಯಾತ್ರೆಯ ಆರಂಭದಲ್ಲಿ ನಿವೃತ್ತ ಯೋಧ ಫ್ಯೂಚರ್ ವಾರಿಯರ್ ಆಫ್ (ಇಂಡಿಯನ್ ಆರ್ಮಿ) ಕೆಜಿಎಫ್ ಕೋಚ್ ವಿ.ಪ್ರಕಾಶ್ ಮಾತನಾಡಿ. ಆಪರೇಷನ್ ಸಿಂಧೂರ ಇನ್ನು ಮುಗಿದಿಲ್ಲ. ಮತ್ತೊಮ್ಮೆ ಉಗ್ರರ ದಾಳಿ ನಡೆದರೆ ಪಾಕಿಸ್ತಾನವೇ ನಿರ್ನಾಮವಾಗಲಿದೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದಾಗಲಿದೆ ಎಂದರು. ಮಾಜಿ ಸಂಸದರು ಎಸ್. ಮುನಿಸ್ವಾಮಿ ಮಾತನಾಡಿ. ಭಾರತದ ಮೇಲೆ ಉಗ್ರರ ಮೂಲಕ ನಿರಂತರ ದಾಳಿ ನಡೆಸುತ್ತಾ ಬಂದಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಬೇಕು ಎಂಬ ದೇಶದ ನಿಲುವು ನಮ್ಮ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಚ್ಚಾ ಶಕ್ತಿ ಪ್ರದರ್ಶಿ ಪಾಕಿಸ್ತಾನಕ್ಕೆ ನಮ್ಮ ಸೈನಿಕರನ್ನು ಕಳುಹಿಸಿ ಪಾಕಿಸ್ತಾನದ ಸೇನಾ ನೆಲೆಗಳನ್ನು ನಾಶಪಡಿಸಿದ್ದಾರೆ. ಪಾಕಿಸ್ತಾನಲ್ಲಿ ಜನತೆ ಭಿಕ್ಷೆ ಬೇಡೋ ಸ್ಥಿತಿಯಲ್ಲಿದೆ. ಅದನ್ನು ಸರಿಪಡಿಸಬೇಕು. ಅದನ್ನು ಬಿಟ್ಟು ಭಾರತದ ತಂಟೆಗೆ ಬಂದರೆ ಆದೇಶಕ್ಕೆ ಕುಡಿಯುವ ನೀರು ಸಿಗುವುದಿಲ್ಲ. ನಮ್ಮ ದೇಶದ ಪ್ರಧಾನಿ ಉಕ್ಕಿನ ಮನುಷ್ಯ ವಿಶ್ವ ನಾಯಕ ಯಾವ ದೇಶದ ನಾಯಕರ ಮಾತು ಕೇಳುವುದಿಲ್ಲ. ತಮ್ಮ ನಿಲುವು ಏನೇ ಇರಲಿ ತೆಗೆದುಕೊಳ್ಳುತ್ತಾರೆ. ಇದನ್ನು ಅರ್ಥಮಾಡಿಕೊಳ್ಳಬೇಕು. ಕಾರ್ಯಕ್ರಮದಲ್ಲಿ ಸೇರಿರುವುದು ಬಿಜೆಪಿ ಪಕ್ಷದ ಕಾರ್ಯಕರ್ತರ ಮಾತ್ರ ಅಲ್ಲ ಎಲ್ಲಾ ಜಾತಿಯ ಜನಾಂಗದ ಸಾರ್ವಜನಿಕರು ಭಾಗವಹಿಸಿದ್ದಾರೆ. ದೇಶದ ವಿಷಯ ಬಂದರೆ ಹಿಂದೂ .ಮುಸ್ಲಿಂ. ಕ್ರೈಸ್ತ. ಯಾರೇ ಆಗಿರಲಿ ಈ ದೇಶದಲ್ಲಿ ಹುಟ್ಟಿದವರು. ದೇಶಕ್ಕಾಗಿ ಪ್ರಾಣ ಕೊಡಲು ಸಿದ್ದರಾಗಬೇಕು ಎಂದರು. ಈ ಸಂದರ್ಭದಲ್ಲಿ. ಮಾಜಿ ಶಾಸಕ ವೈ ಸಂಪಂಗಿ. ಬಿಜೆಪಿ ನಗರ ಅಧ್ಯಕ್ಷ ಸುರೇಶ್ ಬಾಬು. ಗ್ರಾಮಾಂತರ ಅಧ್ಯಕ್ಷರು ಲಕ್ಷ್ಮಿ ನಾರಾಯಣ್. ಬಿಜೆಪಿ ನಗರ ಮುಖಂಡರು ಕಮಲನಾಥ್. ಬುಜ್ಜಿ ನಾಯ್ಡು. ದಾಮೋದರ್ ರೆಡ್ಡಿ. ಗಾಂಧಿ. ಪಾಂಡೆಯನ್. ವಿಜಯಕುಮಾರ್. ಹಲವಾರು ಮುಖಂಡರು ಭಾಗವಹಿಸಿದ್ದರು.
What's Your Reaction?






