ಪಾರಂಡಹಳ್ಳಿ -ಕೆಜಿಎಫ್ ಪ್ರಮುಖ ಸಾರ್ವಜನಿಕ ರಸ್ತೆಗಳ ಚರಂಡಿಗಳ ಹೀನಾಯ ಖಂಡನೀಯ ಸ್ಥಿತಿ

ಪಾರಂಡಹಳ್ಳಿ: ಸ್ವರ್ಣನಗರ, ರಾಬರ್ಟ್ಸನ್ಪೇಟೆ - ಕೆಜಿಎಫ್ ಪ್ರಮುಖ ರಸ್ತೆಗಳ ದುಸ್ಥಿತಿ ಹೀನಾಯ ರಸ್ತೆಗಳ ಅಗಲ ತೀರ ಕಡಿಮೆ, ಟ್ರಾಫಿಕ್ ನಿಯಂತ್ರಣ ಇಲ್ಲವೇ ಇಲ್ಲ, ಪಾದಚಾರಿ ಪಥಗಳೆಲ್ಲಾ ಮಣ್ಣು ಗುಡ್ಡಗಳಿಂದ ಆವೃತಗೊಂಡಿವೆ, ಚರಂಡಿಗಳೆಲ್ಲ ಮಣ್ಣು ಕಸ ಕಡ್ಡಿ ಕಲ್ಲುಗಳಿಂದ ಮುಚ್ಚಿಹೋಗಿದ್ದಾವೆ, ಅನಾಗರೀಕರು ಅಪಾರಪ್ರಮಾಣದ ತ್ಯಾಜ್ಯ-ಗಾರ್ಬೇಜ್ ತಂದು ಪಬ್ಲಿಕ್ ರಸ್ತೆ, ರಸ್ತೆಗಳ ಇಬ್ಬದಿಗಳಲ್ಲಿರುವ ಚರಂಡಿಗಳಲ್ಲಿ ಸುರಿಯು ತಿರುತ್ತತಾರೆ, ಕೆಲವು ಅಂಗಡಿ ಮುಂಗಟ್ಟುಗಳು ಪಾದಚಾರಿಪತಗಳನ್ನೆಲ್ಲ ಒತ್ತುವರಿಮಾಡಿಕೊಂಡು ಅಕ್ರಮಿಸಿಕೊಂಡಿರುತ್ತಾರೆ. ಸರಿಯಾದ ಸೂಕ್ತವಾದ ಸ್ಥಳಗಳಲ್ಲಿ ದಾರಿ ದೀಪಗಳ ಅಳವಡಿಕೆಯಾಗಿಲ್ಲ, ಈ ಅವಾಂತರಗಳಿಂದ ಸಾರ್ವಜನಿಕರಿಗೆ - ಪಾದಚಾರಿಗಳಿಗೆ - ವಾಹನಗಳ ಓಡಾಟಕ್ಕೆ ಹಾಗುತ್ತಿರುವ ಅಡಚಣೆ, ಕಿರುಕುಳ, ಸಂಕಷ್ಟ ಅಷ್ಟಿಷ್ಟಲ್ಲ, ಇದು ಕ್ಲಿಷ್ಟ ಪರಿಸ್ಥಿತಿಯ ಪರಮಾವಾದಿ. ಇಂತಹ ಖಂಡನೀಯ ದುಸ್ಥಿತಿಗಳು ಉದ್ಭವಿಸುವುದಕ್ಕೆ ಪಾರಂಡಹಳ್ಳಿ ಪಂಚಾಯತ್, ಕೆಜಿಎಫ್ ಸಿ ಎಮ್ ಸಿ, ಕೆಜಿಎಫ್ ಅರ್ಬನ್ ಡೆವಲಪ್ಮೆಂಟ್ ಪ್ರಾಧಿಕಾರಗಳು ಮೂಲ ಕಾರಣವೆಂದು ಸರ್ವಜನಿಕರು, ಮತದಾರರು ಜರೆಯುತಿದ್ದಾರೆ. ಇದರ ಬಗ್ಗೆ ಸಂಬಂಧಪಟ್ಟ ಪಂಚಾಯಿತಿ ಪಿಡಿಒ. ಅಧಿಕಾರಗಳು ಸೂಕ್ತವಾದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ.
What's Your Reaction?






