ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗಾಗಿ ಐಕ್ಯತಾ ಸಮಾವೇಶ : ಅಂಬೇಡ್ಕರ್ ಸ್ವಾಭಿಮಾನಿ ಸೇನೆ

Oct 15, 2025 - 17:15
 0  2
ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗಾಗಿ ಐಕ್ಯತಾ ಸಮಾವೇಶ : ಅಂಬೇಡ್ಕರ್ ಸ್ವಾಭಿಮಾನಿ ಸೇನೆ

  ಬೆಂಗಳೂರಿನ ಪುರಭವನದಲ್ಲಿ ದಿನಾಂಕ 10/10/2025 ರ ಶುಕ್ರವಾರ ದಂದು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಪ್ರಜಾಪ್ರಭುತ್ವ ಹಕ್ಕುಗಳ ರಕ್ಷಣೆಗಾಗಿ ಐಕ್ಯತಾ ಸಮಾವೇಶವನ್ನು ರಾಜ್ಯಾಧ್ಯಕ್ಷರಾದ ಡಾ.ಕೋದಂಡ ರಾಮ್ ರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. 

ಸಂಘಟನೆ ವತಿಯಿಂದ ಪ್ರತಿ ವರ್ಷ ನಡೆಯುವ ಈ ಕಾರ್ಯಕ್ರಮ ಒಂದೊಂದು ವಿಚಾರ ಆಧಾರಿತ ಅಂಶಗಳನ್ನು ಒಳಗೊಂಡ ಸಮಾವೇಶ ವಾಗಿರುತ್ತದೆ. 

 

1500 ಜನಕ್ಕೂ ಮೇಲ್ಪಟ್ಟು ಸೇರಿದ್ದ ಈ ಈ ಐಕ್ಯತಾ ಸಮಾವೇಶದಲ್ಲಿ IAS ಅಧಿಕಾರಿಗಳ ಜೊತೆ ಪೂಜ್ಯ ಜ್ಞಾನ ಪ್ರಕಾಶ್ ಸ್ವಾಮೀಜಿ. ವಿಧಾನಪರಿಷತ್ ನ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ  ಅಂಬೇಡ್ಕರ್ ವಿಚಾರವಾದಿಗಳು ಆದ ಶ್ರೀಧರ ಕಲಿವೀರ ರವರೊಂದಿಗೆ ರಾಜ್ಯದ ಅನೇಕ ಸಂಘಟನೆಗಳ ರಾಜ್ಯಾಧ್ಯಕ್ಷರುಗಳೊಂದಿಗೆ ರಾಜ್ಯದೆಲ್ಲೆಡೆಯಿಂದ ಬಂದ ಅನೇಕ ಕಾರ್ಯಕರ್ತರು ಹರ್ಷೋಲ್ಲಾಸದಿಂದ ಭಾಗವಹಿಸಿದ್ದರು. 

ಸಮಾವೇಶದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಪೂಜ್ಯನೀಯ ಜ್ಞಾನಪ್ರಕಾಶ್ ಸ್ವಾಮೀಜಿಯವರು ಎಲ್ಲರನ್ನೂ ಉದ್ದೇಶಿಸಿ ಮಾತ್ನಾಡುತ್ತಾ  ನಾವೆಲ್ಲರೂ ಸಂವಿಧಾನದ ಗುಲಾಮರೇ ಹೊರತು ಯಾರ ಗುಲಾಮರಲ್ಲ ಹಾಗೆಯೇ ಈರಾಜ್ಯದಲ್ಲಿ ಅತಿ ಹೆಚ್ಚಿನ ಜನ ಸಂಖ್ಯೆ ಇರುವ ಪರಿಶಿಷ್ಟ ಜಾತಿ / ವರ್ಗದವರನ್ನು ಈ ರಾಜ್ಯದ ಚುಕ್ಕಾಣಿ ಹಿಡಿಯುವ ಮುಖ್ಯಮಂತ್ರಿಯನ್ನಾಗಿಯೇ ಮಾಡಲೇ ಬೇಕು ಎಂದು ಸಮುದಾಯಕ್ಕೆ ಕಿವಿಮಾತು ಹೇಳಿದರು. 

ವಿಧಾನಪರಿಷತ್ ನ ವಿರೋಧಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ  ರವರು ಮಾತ್ನಾಡುತ್ತಾ ಪಕ್ಷ ಯಾವುದೇ ಇರಲಿ ಸಮುದಾಯಕ್ಕೆ ಅನ್ಯಾಯವಾದಾಗ ನಾವೆಲ್ಲರೂ ಒಂದಾಗಬೇಕು ಜೊತೆಗೆ ಅನ್ಯಾಯದ ವಿರುದ್ಧ ಹೋರಾಟಮಾಡಬೇಕು ಹೊಲೆಯ ಮಾದಿಗರು ಎರಡು ಸಮುದಾಯದವರು ಸಮಾನರು ಇವರಲ್ಲಿ ಯಾರು ಹೆಚ್ಚು ಕಡಿಮೆ ಇಲ್ಲ ಹಾಗಾಗಿ ನಾವೆಲ್ಲರೂ ಒಂದಾಗಿರಬೇಕೆಂದು ಕಾರ್ಯಕರ್ತರಲ್ಲಿ ಸೂಚಿಸಿದರು. 

ಕೆಜಿಎಫ್ ನ ಮಾಜಿ ಶಾಸಕರಾದ ವೈ ಸಂಪಂಗಿ ರವರು ಮಾತ್ನಾಡುತ್ತಾ ಸಂಘಟನೆಗಳು ಯಾವ ರಾಜಕೀಯ ಪಕ್ಷಕ್ಕೂ ಸೇರದೆ ಸಮುದಾಯದ ಪರ ನಿಲ್ಲಬೇಕಿದೆ ಎಂದು ನೆರೆದಿದ್ದ ನಾಯಕರುಗಳಿಗೆ ತಿಳಿಸಿದರು.  

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ರಾಜ್ಯಾಧ್ಯಕ್ಷರಾದ ಡಾ.ಕೋದಂಡ ರಾಮ್ ಮಾತ್ನಾಡುತ್ತಾ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯು ರಾಜ್ಯದ 25 ಜಿಲ್ಲೆಗಳಲ್ಲಿ ತನ್ನ ಘಟಕಗಳನ್ನು ಹೊಂದಿದ್ದು ಪ್ರತಿಯೊಂದು ಘಟಕದ ಕಾರ್ಯಕರ್ತರು ನಿರಂತರವಾಗಿ ಚಳುವಳಿಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಂಘಟನೆಯನ್ನು ರಾಜ್ಯದ ಮೊದಲ ಸಾಲಿನಲ್ಲಿ ನಿಲ್ಲುವಂತೆ ಮಾಡಿದ್ದಾರೆ ಆ ಮೂಲಕ ತಮ್ಮನ್ನು ತಾವುಗಳು ನಾಯಕರನ್ನಾಗಿ ರೂಪಿಸಿಕೊಂಡಿದ್ದಾರೆ ಎಂದು ವಿವರಿಸುತ್ತಾ 15 ಅಂಶಗಳ ಐಕ್ಯತಾ ಸಮಾವೇಶದ ನಿರ್ಣಯಗಳನ್ನು ಸರಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಪತ್ರವನ್ನು ಸಲ್ಲಿಸಲಾಯಿತು. 
ಈ ಸಂದರ್ಭದಲ್ಲಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆಯ  ರಾಜ್ಯ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ  ಆರ್ ರಾಮ ಮೂರ್ತಿ , ರಾಜ್ಯ ಕಾರ್ಯಾಧ್ಯಕ್ಷರಾದ ಎಂ ಆನಂದ್ ಕುಮಾರ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಎಂ ಕೆ. ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ್. ರಾಜ್ಯ ಕಾರ್ಯದರ್ಶಿಗಳಾದ ಕಾಶಿನಾಥ್ ನಾಟೇಕರ್. ರಾಜೇಂದ್ರ ಬಾಬು. ಶರಣು ಜಮಖಂಡಿ. ಮಹಿಳಾ ಘಟಕ ಪ್ರಧಾನ ಕಾರ್ಯದರ್ಶಿ ಗಾಯತ್ರಿ ವರ್ತೂರು.  ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಆರ್ ರವರೊಂದಿಗೆ ರಾಜ್ಯಡೆಲ್ಲೆಡೆಯಿಂದ ಬಂದ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಅದರಲ್ಲೂ ಮಹಿಳೆಯರು ಪ್ರಧಾನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0