ಪ್ರತಿಯೊಬ್ಬರಿಗೂ ಕುಡಿಯುವ ನೀರು ಒದಗಿಸುವುದೇ ಪ್ರಧಾನಿ ಮೋದಿಜಿ ಅವರ ಕನಸು: ಸಂಸದ ಡಾ.ಕೆ.ಸುಧಾಕರ್

ಭಾಗ್ಯನಗರ: ದೇಶದ ಪ್ರತಿಯೊಂದು ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಮಹದಾಸೆಯನ್ನು ಹೊಂದಿರುವಂತಹ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಸಾಕಷ್ಟು ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಅದರ ಭಾಗವಾಗಿಯೇ ಜಲಜೀವನ್ ಮಿಷನ್ ಯೋಜನೆ ಹಾಗೂ ಅಮೃತ್ 2.0 ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಕೇಂದ್ರ ಪುರಸ್ಕೃತ ಅಮೃತ್ 2.0 ಯೋಜನೆಯಡಿ ಅಮಾನಿಬೈರಸಾಗರ ಕೆರೆಯ ಮೂಲದಿಂದ ಗುಡಿಬಂಡೆ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಯೋಜನೆಯ ಶಂಕು ಸ್ಥಾಪನೆ ಕಾರ್ಯಕ್ರಮದ ಶಂಕುಸ್ಥಾಪನೆಯ ಬಳಿಕ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ದೇಶದ ಬಡವರ ಪರ ಕೆಲಸ ಮಾಡುವ ಏಕೈಕ ಸರ್ಕಾರ ನರೇಂದ್ರ ಮೋದಿ ಸರ್ಕಾರ ಎಂದು ಹೇಳಬಹುದು.
ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆ ಮನೆಗೂ ನಲ್ಲಿ ಮೂಲಕ ನೀರು ಕೊಡುವಂತಹ ಕೆಲಸ ಬಹುತೇಕ ಪೂರ್ಣಗೊಳ್ಳುತ್ತಿದೆ. ಅದರ ಮುಂದುವರೆದ ಭಾಗವಾಗಿ ನಗರ ಹಾಗೂ ಪಟ್ಟಣದ ವ್ಯಾಫ್ತಿಯಲ್ಲಿ ವಾಸಿಸುವಂತಹ ಜನರಿಗ ಅನುಕೂಲವಾಗುವ ನಿಟ್ಟಿನಲ್ಲಿ ಅಮೃತ್ 2.0 ಯೋಜನೆಯ ಮೂಲಕ ನಲ್ಲಿ ಮೂಲಕ ನೀರು ಒದಗಿಸುವ ಯೋಜನೆಯಾಗಿದೆ. ನಗರ ಅಥವಾ ಪಟ್ಟಣಗಳಲ್ಲಿ ವ್ಯಾಪ್ತಿಯಲ್ಲಿ ಅಥವಾ ಹತ್ತಿರವಿರುವಂತ ಕೆರೆಗಳ ನೀರನ್ನು ಬಳಸಿಕೊಂಡು ಶುದ್ದಿಕರಣ ಘಟಕಗಳನ್ನು, ಟ್ಯಾಂಕ್ ಗಳನ್ನು ಸ್ಥಾಪನೆ ಮಾಡಿ ಪೈಪ್ ಲೈನ್ ಮೂಲಕ ಪ್ರತೀ ಮನೆ ಮನೆಗೂ ನೀರನ್ನು ಒದಗಿಸಲಾಗುತ್ತದೆ ಎಂದರು.
ಇನ್ನೂ ಈ ಯೋಜನೆಗೆ ಕೇಂದ್ರ ಸರ್ಕಾರದಿಂದ ಶೇ.50 ರಷ್ಟು, ರಾಜ್ಯ ಸರ್ಕಾರದಿಂದ ಶೇ.40 ಹಾಗೂ ಸ್ಥಳೀಯ ಸಂಸ್ಥೆಗಳಿಂದ ಶೇ.10 ರಷ್ಟು ಅನುದಾನ ಒದಗಿಸಲಾಗುತ್ತದೆ. ಈಗಾಗಲೇ ಈ ಯೋಜನೆಗಳು ಪೂರ್ಣಗೊಳ್ಳಬೇಕಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಗ್ರಾಮೀಣ ಅಥವಾ ನಗರ ಭಾಗಗಳಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ನಾನೂ ಸಹ ನೀರು ಒದಗಿಸುವ ಯೋಜನೆಯನ್ನು ತರುತ್ತೇನೆ ಎಂದು ಭರವಸೆ ನೀಡಿದ್ದೆ.
ಅದರಂತೆ ಇಂದು ಚಿಕ್ಕಬಳ್ಳಾಪುರ ಜಿಲ್ಲೆಗೆ ಸುಮಾರು 300 ಕೋಟಿಯಷ್ಟು ಅನುದಾನವನ್ನು ಕೇಂದ್ರ ಸರ್ಕಾರ ಕುಡಿಯುವ ನೀರಿನ ಯೋಜನೆಗೆ ನೀಡಿದೆ. ಈ ಯೋಜನೆಯನ್ನು ಒಂದೂವರೆ ವರ್ಷದೊಳಗೆ ಮುಗಿಸುತ್ತೇವೆ. ಜನರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನೂ ಈ ಯೋಜನೆಗೆ ಸ್ಥಳೀಯ ಸಚಿವರು, ಶಾಸಕರು ಬೆಂಬಲ ಹಾಗೂ ಸಹಕಾರ ನೀಡಿದ್ದಾರೆ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಸಚಿವ ಡಾ!ಎಂ.ಸಿ.ಸುಧಾಕರ್, ಸಂಸದ ಡಾ!ಕೆ.ಸುಧಾಕರ್,ಜಿಲ್ಲಾಧಿಕಾರಿ ಪಿ.ಎನ್.
ರವೀಂದ್ರ,ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ. ನವೀನ್ ಭಟ್,ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ,ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಸ್. ನರೇಂದ್ರ,ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು,ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ,ತಾಲ್ಲೂಕು ಪಂಚಾಯಿತಿ ಇಒ. ರಮೇಶ್,ಪಿ ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ,ಕೆ
. ಡಿ. ಪಿ. ಸದಸ್ಯ ಪಿ. ಮಂಜುನಾಥ್ ರೆಡ್ಡಿ, ಸದಸ್ಯ ಬಿ.ವಿ.ವೆಂಕಟರಮಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ! ಎ.ವಿ.ಪೂಜಪ್ಪ,ಪುರಸಭೆ ಮುಖ್ಯಧಿಕಾರಿ ಶ್ರೀನಿವಾಸ್, ಸದಸ್ಯ ಎ.ನಂಜುಂಡಪ್ಪ,ಎಸ್.ಟಿ.ಡಿ. ಮೂರ್ತಿ, ಗಡ್ಡಮ್ ರಮೇಶ್ ಸೇರಿದಂತೆ ಮತ್ತಿತರರು ಇದ್ದರು... ವರದಿ ಸುಬ್ಬು ಬಾಗೇಪಲ್ಲಿ
ಈ ಸಂಧರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ! ಎಂ.ಸಿ. ಸುಧಾಕರ್,ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ,ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ. ನವೀನ್ ಭಟ್,ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ,ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಸ್.ನರೇಂದ್ರ,ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು,ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ,ತಾಲ್ಲೂಕು ಪಂಚಾಯಿತಿ ಇಒ. ರಮೇಶ್,ಪಿ ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ,ಕೆ.ಡಿ.ಪಿ. ಸದಸ್ಯ ಪಿ. ಮಂಜುನಾಥ್ ರೆಡ್ಡಿ, ಸದಸ್ಯ ಬಿ.ವಿ.ವೆಂಕಟರಮಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ! ಎ.ವಿ.ಪೂಜಪ್ಪ,ಪುರಸಭೆ ಮುಖ್ಯಧಿಕಾರಿ ಶ್ರೀನಿವಾಸ್, ಸದಸ್ಯ ಎ.ನಂಜುಂಡಪ್ಪ,ಎಸ್.ಟಿ.ಡಿ. ಮೂರ್ತಿ, ಗಡ್ಡಮ್ ರಮೇಶ್ ಸೇರಿದಂತೆ ಮತ್ತಿತರರು ಇದ್ದರು...
What's Your Reaction?






