ಬಾಗೇಪಲ್ಲಿ ಎಸ್ ಆರ್ ಟಿ ಸಿ ನಿವೃತ್ತ ನೌಕರರಿಂದ ಹುತಾತ್ಮ ವೀರಯೋಧ ಸ್ಮಾರಕ ದರ್ಶನ

ಬಾಗೇಪಲ್ಲಿ: ಎನ್.ಎ.ಸಿ. ಕರ್ನಾಟಕ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಬಿ.ಎಂ.ಟಿ.ಸಿ ನಿವೃತ್ತ ನೌಕರರ ಸಂಘದ ರಾಜ್ಯ ಪದಾಧಿಕಾರಿಗಳು ಇಂದು ಹುತಾತ್ಮ ವೀರಯೋಧ ಮುರಳಿ ನಾಯ್ಕ್ ಸ್ವಗ್ರಾಮವಾದ ನೆರೆಯ ಆಂಧ್ರ ಪ್ರದೇಶದ ಗೊರಂಟ್ಲ ಮಂಡಲದ ಕಳ್ಳಿತಾಂಡ ಗ್ರಾಮಕ್ಕೆ ಭೇಟಿ ನೀಡಿ ಅಮರವೀರ ಮುರಳಿ ನಾಯ್ಕ್ ಕುಟಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ತಿಳಿಸಿ ಹುತಾತ್ಮ ವೀರಯೋಧನ ಭಾವಚಿತ್ರಕ್ಕೆ ಪುಷ್ಪನಮನ ಮತ್ತು ಸ್ಮಾರಕಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಎನ್.ಎ.ಸಿ. ಕರ್ನಾಟಕ ಜಂಟಿ ಕಾರ್ಯದರ್ಶಿ ಮೇಲೂರು ಅಮರ್ ಮಾತನಾಡಿ ಪೆಹಾಲ್ಗಮ್ ನಲ್ಲಿ ನಡೆದ ಆಪರೇಷನ್ ಸಿಂಧೂರ ಸಮಯದಲ್ಲಿ ದೇಶಕ್ಕಾಗಿ ಪಾಕಿಸ್ತಾನ್ ಉಗ್ರರ ವಿರುದ್ಧ ಹೋರಾಡಿ ಯುದ್ಧದಲ್ಲಿ ವೀರಮರಣ ಹೊಂದಿದ ದೇಶ ಪ್ರೇಮಿ ಹುತಾತ್ಮರಾದ ವೀರಯೋಧ ಮುರಳಿ ನಾಯ್ಕ್ ಅವರ ಸ್ವಗ್ರಾಮಕ್ಕೆ ಭೇಟಿ ನೀಡಿರುವುದು ನಮಗೆ ಸಿಕ್ಕ ಇದೊಂದು ಸಮಯ ಪುಣ್ಯ ಸಮಯ ಎಂದು ಬಾವಿಸುತ್ತೇವೆ, ಪ್ರತಿಯೊಬ್ಬರೂ ಕಳ್ಳಿತಾಂಡ ಗ್ರಾಮಕ್ಕೆ ಭೇಟಿ ಮುರಳಿ ನಾಯಕ್ ಅವರ ಸ್ಮಾರಕ ವೀಕ್ಷಿಸೊ ಮೂಲಕ ನಮ್ಮ ದೇಶದ ಕೀರ್ತಿ ಎತ್ತಿಹಿಡಿಯೋಣ ಎಂದರು.
ಈ ಸಂಧರ್ಭದಲ್ಲಿ ಎನ್.ಎ.ಸಿ. ಕರ್ನಾಟಕ ಬೆಂಗಳೂರು ಕ್ಲಸ್ಟರ್ ಉಪಾಧ್ಯಕ್ಷ ಹಾಗೂ ಕೆ ಎಸ್ ಆರ್ ಟಿ ಸಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಿ.ಎನ್.ಶ್ರೀನಿವಾಸ್ ನಾಯ್ಡು,ಜಂಟಿ ಕಾರ್ಯದರ್ಶಿ ಜಿ. ಎಸ್. ನಾಗರಾಜು, ಜಿಲ್ಲಾ ಸಮಿತಿ ಸದಸ್ಯ ಅವುಳಪ್ಪ, ಪತ್ರಕರ್ತ ಸುಬ್ಬರಾಮ್,ವಿನೋದ್, ವಿಕ್ರಮ್, ಇದ್ದರು.
What's Your Reaction?






