ಬೃಹತ್ ರಕ್ತದಾನ ಶಿಬಿರ 5 ಸಾವಿರ ಯೂನಿಟ್ ರಕ್ತ ಸಂಗ್ರಹ ಗುರಿ-ಎಸ್.ಎಸ್.ರಮೇಶ್‌ಬಾಬು

ಬಾಗೇಪಲ್ಲಿ: ಮೇ.7 ರಂದು ನಡೆಯುವ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವು ಗಿನ್ನೆಸ್ ದಾಖಲೆಯಾಗಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು ತಿಳಿಸಿದ್ದಾರೆ.
ತಾಲ್ಲೂಕಿನ ಗೂಳೂರು ಪಿಡಿಎಲ್ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದಾನಗಳಲ್ಲಿ ರಕ್ತದಾನ ಬಹಳ ಪ್ರಮುಖವಾಗಿದ್ದು ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡಬೇಕು ಶಾಸಕ ಸುಬ್ಬಾರೆಡ್ಡಿ ಅವರು ಇಡೀ ಕ್ಷೇತ್ರಕ್ಕೆ ತಮ್ಮ ತನು ಮನು ಎಲ್ಲವನ್ನು ಅರ್ಪಿಸುತ್ತಿದ್ದಾರೆ ಪಟ್ಟಣದಲ್ಲಿ ಅವರ ಹುಟ್ಟು ಹಬ್ಬ ಇದೇ ತಿಂಗಳ 7 ರಂದು ನಡೆಯುತ್ತಿದ್ದು ಪ್ರತಿಯೊಬ್ಬರೂ ಭಾಹವಹಿಸಬೇಕಾಗಿದೆ ಚಿಂತಾಮಣಿಯಲ್ಲಿ ಉಸ್ತುವಾರಿ ಸಚಿವ ಎಂ.ಸಿ.ಸುಧಾಕರ್ ಅವರ ತಂದೆ ದಿ.ಚೌಡರೆಡ್ಡಿ ಅವರ ಜ್ಞಾಪಕಾರ್ಥವಾಗಿ 3 ಸಾವಿರ ಕ್ಕೂ ಅಧಿಕ ಯೂನಿಟ್ ರಕ್ತ ಸಂಗ್ರಹವಾಗಿ ದಾಖಲೆಯಾಗಿದೆ ನಮ್ಮ ಶಾಸಕ ಸುಬ್ಬಾರೆಡ್ಡಿ ಅವರ ಹುಟ್ಟು ಹಬ್ಬ ಅಂಗವಾಗಿ 5 ಸಾವಿರ ಯೂನಿಟ್ ರಕ್ತ ಸಂಗ್ರಹವಾಗಬೇಕು ಈ ನಿಟ್ಟಿನಲ್ಲಿ ನಮ್ಮ ಗೂಳೂರು ಹೋಬಳಿಯ ಪ್ರತಿ ಹಳ್ಳಿಯಿಂದಲೂ ರಕ್ತವನ್ನು ದಾನ ಮಾಡಿ ಮಾನವೀಯತೆ ಮೆರೆಯಬೇಕು ಎಂದು ಮನವಿ ಮಾಡಿದರು.
ತಾಲ್ಲೂಕು ಗ್ಯಾರೆಂಟೀ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ನರೇಂದ್ರ ಮಾತನಾಡಿ ಇದೇ ಮೊದಲ ಬಾರಿಗೆ ಶಾಸಕರ ಜನ್ಮ ದಿನಾಚರಣೆ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದ್ದು ಇದರಲ್ಲಿ ಪ್ರತಿ ಯೊಬ್ಬರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಮಾನವ ರಕ್ತದಾನ ಮಾಡುವುದರಿಂದ ಹೃದಯಾಘಾತ, ಮದುಮೇಹ ನಂತಹ ಖಾಯಿಲೆಗಳನ್ನು ತಡೆಗಟ್ಟಲು ಸಾದ್ಯವಾಗುತ್ತದೆ ಹಾಗೂ ಹಳೆ ರಕ್ತ ದೇಹದಿಂದ ಹೋಗಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಆದ್ದರಿಂದ ಕ್ಷೇತ್ರದ ಅಭಿವೃದ್ದಿಗೆ ಪಣ ತೊಡೆಯುತ್ತಿರುವ ಶಾಸಕ ಸುಬ್ಬಾರೆಡ್ಡಿಯವರಿಗೆ ಹೆಗಲು ಕೊಡಲು ನಾವೆಲ್ಲಾ ಸೇರಿ ಒಂದು ಒಳ್ಳೆಯ ಕಾರ್ಯ ಮಾಡಲು ಸಂಕಲ್ಪ ಮಾಡೋಣ ಎಂದರು.
ಈ ಸಂದರ್ಭದಲ್ಲಿ ಧರಖಾಸ್ತು ಸಮಿತಿ ಸದಸ್ಯ ಬೂರಗಮಡುಗು ನರಸಿಂಹಪ್ಪ, ಜಿಲ್ಲಾ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಗೊರ್ತಪಲ್ಲಿ ಶಂಕರರೆಡ್ಡಿ, ಜಿಪಂ ಮಾಜಿ ಉಪಾಧ್ಯಕ್ಷ ಎ.ವಿ.ಪೂಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಸೋಮಶೇಖರ್, ಮುಖಂಡರಾದ ರಾಮನಾಥ, ವಿಷ್ಣುವರ್ದನರೆಡ್ಡಿ, ಗುಟ್ಟಪಾಳ್ಯ ಶ್ರೀನಿವಾಸ, ಕೆ.ವಿ.ಶ್ರೀನಿವಾಸ, ದೇವಿಕುಂಟೆ ಆನಂದ, ಸಿ.ಎನ್.ಬಾಬುರೆಡ್ಡಿ, ಸುಬ್ಬುರಾಮು, ಸದಾಶಿವರೆಡ್ಡಿ, ಶ್ರೀನಿವಾಸರೆಡ್ಡಿ, ಕೆ.ಆರ್.ನರೇಂದ್ರಬಾಬು, ಮುನ್ನಾಖಾನ್, ಟಿ.ನರಸಿಂಹಪ್ಪ, ಶಿವಪ್ಪ, ನಾಗರಾಜು ಸೇರಿದಂತೆ ನೂರಾರು ಮುಖಂಡರು ಹಾಜರಿದ್ದರು....
What's Your Reaction?






