ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ವತಿಯಿಂದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಯಿತು

ಭೀಮ್ ಆರ್ಮಿ ಭಾರತ್ ಎಕ್ತಾ ಮಿಷನ್ ವತಿಯಿಂದ ಕ್ಷೇತ್ರ ಶಿಕ್ಷಣ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಯಿತು ಸಿಂಧನೂರು ತಾಲೂಕಿನ ಗಾಂಧಿನಗರ ದಲ್ಲಿರುವ ಶ್ರೀ ಗುರು ಸಿದ್ದೇಶ್ವರ ಶಾಲೆಯವರು ಪ್ರೌಢ ಶಾಲೆ ಪರವಾನಗಿ ಹೊಂದಿದ್ದು ಅಲ್ಲಿ ಅಧಿಕೃತವಾಗಿ ಎಲ್ ಕೆಜಿ ಯು ಕೆಜಿ ಮತ್ತು 1-7 ನೇ ತರಗತಿ ವರೆಗೆ ಬೇರೊಂದು ಶಾಲೆಗಳಿಗೆ ಟ್ಯಾಗ್ ಕೊಟ್ಟು ಶಾಲೆ ನಡೆಸುತ್ತಿದ್ದೂ ಅದರ ವಿರುದ್ಧ ನಾವು 23/07/2025 ರಂದು ಮನವಿ ಸಲ್ಲಿಸಿದ್ದು ಅದರ ಮೇಲೆ ತನಿಖೆ ಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ ದುರುದಾರರನ್ನು ಕರೆಯದೆ ಶಾಲೆ ಮಂಡಳಿಯ ಅನುಕೂಲಕೆ ತಕ್ಕಂತೆ ವಲಯ ಶಿಕ್ಷಣ ಸಂಯೋಜಕರು ವರದಿ ನೀಡಿದ್ದು ಕಾನೂನು ಬಾಹಿರ ಮತ್ತು ಅಧಿಕಾರಿಗಳು ಖಾಸಗಿ ಶಾಲೆಗೆ ಸಹಕಾರ ನೀಡುತ್ತಿದ್ದರಿಂದ ಸರಕಾರಿ ಶಾಲೆ ಗಳು ಮುಚ್ಚುವಂತ ಪರಿಸ್ಥಿತಿ ಬಂದಿದೆ ಆದ್ದರಿಂದ ವರದಿ ಯನ್ನು ತನಿಖೆ ಮಾಡದೇ ನೀಡಿದ್ದು ಆ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಹಾಗೆ ಶ್ರೀ ಗುರು ಸಿದ್ದೇಶ್ವರ ಪ್ರೌಢ ಶಾಲೆ ಪರವಾನಗಿ ರದ್ದು ಪಡಿಸಿ ಅಧಿಕೃತ ಶಾಲೆ ನಡೆಯದಂತೆ ನೋಡಿಕೊಳ್ಳಬೇಕೆಂದು ಇಂದು ಕ್ಷೇತ್ರ ಶಿಕ್ಷಣ ಅಧಿಕಾರಿಗಳ ಕಚೇರಿ ಮುಂದೆ ಹೋರಾಟ ಮಾಡಿ ಎಚ್ಚರಿಕೆ ನೀಡಲಾಯಿತು ಈ ಸಂದರ್ಭದಲ್ಲಿ ಭೀಮ್ ಆರ್ಮಿ ಅಧ್ಯಕ್ಷರು ಪ್ರವೀಣ್ ದುಮತಿ ಗೌರವ ಅಧ್ಯಕ್ಷ ಹುಲ್ಲೇಶ್ ಮುದಗಲ್ ರಮೇಶ್ ತಡಕಲ್ ಸಿಪಿಎಂಲ್ ಸಂಘದ ಎಂ ಗಂಗಾಧರ್ ಬಸವಲಿಂಗ ಸಂಜು ಸುಕಲಪೇಟೆ ಹನುಮೇಶ್ ಮಲ್ಲೇಶ್ ವಿನಯ ಇತರರು ಇದ್ದರು
What's Your Reaction?






