ರಂಗೋಲಿ ಸ್ಪರ್ಧೆಯಲ್ಲಿ ಗ್ರಾಮೀಣ ಪ್ರದೇಶದ ಜನಬಾಗಿ ಪೂರಿ ಭಟ್ಟಿ ಮಂಜಣ್ಣ

ಚನ್ನರಾಯಪಟ್ಟಣ ಶ್ರೀ ಪ್ರಸನ್ನ ಗಣಪತಿ ಆಸ್ಥಾನ ಮಂಟಪದಲ್ಲಿ 74 ನೇ ಗಣೇಶೋತ್ಸವ ಕಾರ್ಯಕ್ರಮದ ಒಂದು ದಿನದ ಸೇವೆಯಲ್ಲಿ ಚನ್ನರಾಯಪಟ್ಟಣದ ಉದ್ಯಮಿ ಅನ್ನದಾತ ಪ್ರಭು ಎಂದೇ ಸಮಾಜ ಮುಖಿಯಾಗಿ ಗುರುತಿಸಿಕೊಂಡಿರುವ ಪುರಿ ಭಟ್ಟಿ ಮಂಜಣ್ಣ ರವರ ಕುಟುಂಬದ ವತಿಯಿಂದ 1 ದಿನದ ಸೇವೆಯಲ್ಲಿ ಮುಂಜಾನೆ ಪೂಜೆ ಮಧ್ಯಾಹ್ನ 5 ಸಾವಿರಕ್ಕೂ ಹೆಚ್ಚು ಜನರಿಗೆ ಇಡ್ಲಿ ಪಲಾವ್ ಪಾಯ್ಸ ಸೇರಿದಂತೆ 5 ಬಗೆಯ ಅಡಿಗೆಯೊಂದಿಗೆ ಅನ್ನದಾನವನ್ನು ಏರ್ಪಡಿಸಿದರು ನೆರೆದಿದ್ದ ಭಕ್ತರು ರುಚಿಕರವಾದ ಭೋಜನವನ್ನು ಸವಿಯುದರ ಮೂಲಕ ಹರ್ಷ ವ್ಯಕ್ತಪಡಿಸಿದರು
ಸಂಜೆ ತಾಲೂಕು ಮಟ್ಟದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ತೀರ್ಪುಗಾರರಾಗಿ ಭಾಗವಹಿಸಿದ ಸುಮಿತ್ರ ವಿಶ್ವನಾಥ್, ಮಮತಾ,ಶೃತಿ, ರಾಣಿ, ದೀಪ ಸೇರಿದಂತೆ 6 ಜನ ತೀರ್ಪಿನಂತೆ ಪ್ರಥಮ ದ್ವಿತೀಯ ತೃತೀಯ ನಗದು ಬಹುಮಾನವನು ವಿತರಿಸಿದರು
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಆಗಮಿಸಿದ ಡಾ. ಸುರೇಶ್ ಮತ್ತು ತಂಡ ಹಾಗೂ ಚನ್ನರಾಯಪಟ್ಟಣದ ಶ್ರೀ ನಾಟ್ಯಭೈರವಿ ನೃತ್ಯ ಶಾಲೆಯ ಕಲಾವಿದರಿಂದ ಅಮೋಘ ಭರತನಾಟ್ಯ ಕಾರ್ಯಕ್ರಮ ಜರುಗಿತು
ಎಲ್ಲಾ ಕಲಾವಿದರಿಗೂ ಶ್ರೀ ವಿನಾಯಕ ಪ್ರಶಸ್ತಿ ನೀಡಿ ಗೌರವಿಸಿದರು ಹಾಗೂ ಗಣಪತಿ ಆಸ್ಥಾನದಲ್ಲಿ ಪ್ರತಿ ದಿವಸ ಊಟ ಮಾಡಿದ ಎಲೆ ಎತ್ತುವುದು ಪೆಂಡಲನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವ ಬಡ ಮಹಿಳೆ ಸಣ್ಣಪ್ಪ ನಾಗರತ್ನ ಇವರನ್ನು ಮಂಜಣ್ಣನವರು ಗುರುತಿಸಿ ಸನ್ಮಾನಿಸಿದ್ದು ವಿಷಯವಾಗಿತ್ತು ಈ ಕಾರ್ಯಕ್ರಮವನ್ನು ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ. ಕೆ. ಪ್ರಕಾಶ್ ಭಾರದ್ವಾಜ್ ನಿರೂಪಿಸಿದರು ಹಾಗೂ ಇದೇ ಸಂದರ್ಭದಲ್ಲಿ ಪ್ರಸನ್ನ ಗಣಪತಿ ಸಮಿತಿಯ ಅಧ್ಯಕ್ಷರಾದ ಚಾ. ನ. ಅಶೋಕ್ ಗೌರವ ಅಧ್ಯಕ್ಷರಾದ ನಿ.ಪ್ರಾಂಶುಪಾಲರಾದ ಲಕ್ಷ್ಮಿ ನರಸಿಂಹಮೂರ್ತಿ, ಮನೋಹರ್, ಕಲಾವಿದರಾದ ರವೀಂದ್ರ, ಸೋಮಶೇಖರ್ ರಕ್ಷಿತ್, ಮಹಾದೇವ, ಕಲಾವಿದರಾದ ವೆಂಕಟೇಶ್ ಇತರರು ಉಪಸ್ಥಿತರಿದ್ದರು
What's Your Reaction?






