"ರಾಜ್ಯ ಮಟ್ಟದ ಉತ್ತಮ ಮುಖ್ಯೋಪಾಧ್ಯಾಯರೆಂಬ ಪ್ರಶಸ್ತಿ"

"ರಾಜ್ಯ ಮಟ್ಟದ ಉತ್ತಮ ಮುಖ್ಯೋಪಾಧ್ಯಾಯರೆಂಬ ಪ್ರಶಸ್ತಿ"

Jan 24, 2024 - 13:28
 0  5
"ರಾಜ್ಯ ಮಟ್ಟದ ಉತ್ತಮ ಮುಖ್ಯೋಪಾಧ್ಯಾಯರೆಂಬ ಪ್ರಶಸ್ತಿ"

ಶಿಕ್ಷಣ ಇಲಾಖೆಯ ನಕಾಶೆಯಲ್ಲಿ ಇದ್ದ ಯಕ್ಕುಂಡಿ ಪ್ರೌಢಶಾಲೆಯನ್ನು ಇಲ್ಲೊಂದು ಶಾಲೆ ಇದೆ ಎಂದು ಪಾಲಕರಲ್ಲಿ ಹಾಗೂ  ಜನರೆಲ್ಲಿ ಗುರುತಿಸುವ ಹಾಗೆ ಮಾಡಿದ ಆದರ್ಶ ಮುಖ್ಯೋಪಾಧ್ಯಾಯ  ಸಂತೋಷಕುಮಾರ ಬೀಳಗಿ ಅವರು ವಾಗ್ಮಿ  , ಚಾಣಕ್ಯ , ಅಭಿವೃದ್ಧಿ ಹರಿಕಾರ. 16 ವರ್ಷದ  ಈ ಪುಟ್ಟ  ಪ್ರೌಢ ಶಾಲೆಯನ್ನು ಎಲ್ಲರೂ  ಹುಬ್ಬೇರಿಸಿ ನೋಡುವ ಹಾಗೆ ಮಾಡಿದ ಮಾಣಿಕ್ಯ .ಪ್ರೌಢ ಶಾಲೆಗೆ ಸಕಲ ಸೌಲಭ್ಯ ಒದಗಿಸಿಕೊಟ್ಟು ಮಕ್ಕಳ ಹಾಗೂ ಯಕ್ಕುಂಡಿ ಗ್ರಾಮದ ಜನತೆಯ ಪ್ರೀತಿ ಪಾತ್ರದಾರಿಗಳು .   ಇಪ್ಪತ್ತೆರಡು ತಿಂಗಳ ಅವಧಿಯಲ್ಲಿ ಅವರು ಪಂಚಾಯತ ನೆರವಿನಿಂದ ವಿದ್ಯಾರ್ಥಿಗಳಿಗೆ ಶುದ್ದ ನೀರಿನ  60 ಲೀಟರ  ಸಾಮರ್ಥ್ಯದ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ, ಶೌಚಾಲಯ ನಿರ್ಮಾಣ, ಗ್ರಂಥಾಲಯ ಕೋಣೆ, ಎಲ್ಲಾ ಕೊಠಡಿಗಳಿಗೆ ಗೋಡೆ ಗಡಿಯಾರ , ಕೊಠಡಿಗಳ ದುರಸ್ತಿ ಕಾರ್ಯ ,ಲೈಟ್ , ಫ್ಯಾನ, ಅರ್ಧಕ್ಕೆ ನಿಂತಿದ್ದ ಪ್ರೌಢ ಶಾಲೆಯ ಮುತ್ತ ತಡಗೋಡೆಯ ಕಾರ್ಯ ಪೂರ್ಣ ಗೊಳಿಸುವದು ,ವಿದ್ಯಾರ್ಥಿಗಳಿಗೆ ರುಚಿ ಶುಚಿ ಉತ್ತಮವಾದ ಮಧ್ಯಾಹ್ನದ ಬಿಸಿ ಊಟ ಹಾಗೂ ತಯಾರಿಸಲು ಒಂದು ದಿನ ಇಡ್ಲಿ ಮಾಡಲು  ಇಡ್ಲಿ ಪಾತ್ರೆ, ಗ್ರಾಯಿಂಡರ ,ತೂಕದ ಯಂತ್ರ , ಅಗತ್ಯ ಆಟದ ಸಾಮಗ್ರಿಗಳು,ವಿಧ್ಯಾರ್ಥಿಗಳಿಗೆ ಬಿಸಿ ಊಟದ ತಟ್ಟೆ  ಹಾಗೂ ಗ್ಲಾಸ , ಇನ್ನಿತರ ಭೌತಿಕ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ,ಗ್ರಾಮ ಪಂಚಾಯತ ಸಹಾಯದಿಂದ ಒದಗಿಸಿಕೊಟ್ಟಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಇವರು ಬೇಡುವುದು ಕಡಿಮೆ, ಬಂದವರೇ ಸಾರ್ ತಮ್ಮ ಪ್ರೌಢ ಶಾಲೆಗೆ ಏನಾದರೂ ಕೊಡಿಸಿ ಕೊಡುತ್ತೇವೆ ಎಂದು ತಾವುಗಳೇ ಹೇಳಿ ಕೊಡಿಸುವಂತಹ ಸೋಜಿಗದ ಸಂಗತಿ .ಭೌತಿಕ ಸೌಲಭ್ಯ ಗಳಷ್ಟೇ ಅಲ್ಲದೆ ಮಕ್ಕಳ ಭೌದ್ದಿಕಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಇವರು ಕಾರ್ಯೋನ್ಮುಖರಾಗಿದ್ದು ಸ್ವತ: ತಾವೇ ಮಕ್ಕಳಿಗೆ ಪಾಠ ಮಾಡುವದು ಅವರ ವ್ಯಕ್ತಿತ್ವಕ್ಕೆ ಇನ್ನೊಂದು ಗರಿ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಶಿಕ್ಷಕರಿಗೆ ಯಾವುದೇ ಕೊಂದು ಕೊರತೆಗಳು ಆಗದಂತೆ ಪ್ರೊಜೆಕ್ಟರಗಳ ಮೂಲಕ ಬೋಧನೆ, ಟೇಪ್ ರೆಕಾರ್ಡರ್,ಕಂಪ್ಯೂಟರ ಬಳಕೆ, ಪ್ರಾರ್ಥನಾ  ಅವಧಿಯಲ್ಲಿ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಓದಲು  ಸೌಂಡ್ ಬಾಕ್ಸ್ ಹಾಗೂ ಮೈಕ್ ಸೆಟ್ ಮಕ್ಕಳಿಗೆ ಒದಗಿಸಿ ಕೊಟ್ಟಿದ್ದಾರೆ. ಎಸ್. ಎಸ್.ಎಲ್. ಸಿ ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳಿಗೆ ಹಲವಾರು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನವನ್ನು ಕೊಡಿಸುತ್ತಿದ್ದಾರೆ .ಅದರ ಜೊತೆಗೆ ವಿಶೇಷವಾದಂತಹ ಕ್ರಿಯಾ ಯೋಜನೆಗಳನ್ನು ಶಿಕ್ಷಕರಿಗೆ  ಹಾಕಿಕೊಟ್ಟಿದ್ದಾರೆ. ಇಷ್ಟೇ ಅಲ್ಲದೆ ಮಕ್ಕಳಿಗಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳಲು ಪ್ರೋತ್ಸಾಹಿಸಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರೋತ್ಸಾಹಿಸುತ್ತಿದ್ದಾರೆ. ಶಾಲೆಯ ಭೌತಿಕ ಮತ್ತು ಬೌದ್ಧಿಕ ಗುಣಮಟ್ಟವನ್ನು ಕಂಡು ಬೆರಗಾಗಿ ಪಕ್ಕದ ಊರಿನ ಮಕ್ಕಳು ಸಹ ಈ ಶಾಲೆಯಲ್ಲಿ ದಾಖಲಾತಿ ಪಡೆದುಕೊಳ್ಳುತ್ತಿರುವುದು ಶಾಲಾ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಅವರ ಮತ್ತೊಂದು ನಿದರ್ಶನ.ಹೊಸ ಹೊಸ ಯೋಜನೆಗಳ ಕಣಜ ಇವರು. ಯಾವುದೇ ಆಮಿಷಕ್ಕೆ ಒಳಗಾಗದೆ , ಯಾರಿಗೂ ಬಗ್ಗದೆ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವ ಈ ಶ್ರಮಯೋಗಿ ಯನ್ನು ಗುರುತಿಸಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯು ರಾಜ್ಯಮಟ್ಟದ ಉತ್ತಮ ಮುಖ್ಯೋಪಾಧ್ಯಾಯರು ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಇಂದು ಜರುಗಿದ ಪ್ರಶಸ್ತಿ ವಿತರಣಾ ಸಮಾರಂಭ ಕಾರ್ಯಕ್ರಮದಲ್ಲಿ  ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯದ ಸರ್ವ ಶಿಕ್ಷಣ ಕರ್ನಾಟಕದ ಜಿಲ್ಲಾ ಉಪಯೋಜನಾಕಾರಿಯಾದ ಎಂ .ಎಂ .ಗುಳೇದಗುಡ್ಡ ಚಡಚಣ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಎಸ್  ಜಿ .ನಾಯಕ, ಇಸ್ರೋ ಸಂಸ್ಥೆಯ ಹಿರಿಯ ವಿಜ್ಞಾನಿ ಚಂದ್ರ ವಿಜ್ಞಾನ 3 ಪ್ರಾಜೆಕ್ಟ್ ಡೈರೆಕ್ಟರಾದ ವಿಲಾಸ್ ರಾಠೋಡ  ,ಕರ್ನಾಟಕ  ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷರಾದ ಗಣೇಶ ಕಾಂಭಳೆ ,ಕಾರ್ಯದರ್ಶಿಯಾದ ರಮೇಶ ನಾಯಕ, ಕಾಂತಾ ನಾಯಕ,ಗೌರವಾಧ್ಯಕ್ಷರಾದ ಪ್ರಭುಗೌಡ ಪಾಟೀಲ,  ಸಿದ್ದು ರಾಯಣ್ಣ ,ಕರ್ನಾಟಕ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಆಪ್ತ ಸಮಾಲೋಚಕರಾದ ಭಾರತಿ ಪಾಟೀಲ ,ಪ್ರಶಾಂತ್ ಝಂಡೆ ಮುದುಕಪ್ಪ ಚಲವಾದಿಯವರಂತಹ ಮೇರು ವ್ಯಕ್ತಿತ್ವ ಗಳ ಹಸ್ತದಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಪ್ರಶಸ್ತಿಗೆ ಭಾಜನರಾದ ಶ್ರೀ ಸಂತೋಷ್ ಕುಮಾರ ಬೀಳಗಿ  ಅವರಿಗೆ ಸರ್ಕಾರಿ ಪ್ರೌಢಶಾಲೆ ಯಕ್ಕುಂಡಿಯ ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ಹಾಗೂ ಶಾಲಾ ಸಿಬ್ಬಂದಿಯ ಪರವಾಗಿ ಮುದ್ದು ವಿದ್ಯಾರ್ಥಿಗಳ ಪರವಾಗಿ ಅಭಿನಂದನೆಗಳು ತಿಳಿಸಲು ಹೆಮ್ಮಯ ವಿಷಯವಾಗಿದೆ.
ಬಸವರಾಜ ರಾ ಅಗಸರ
ಶಿಕ್ಷಕ ಮಕ್ಕಳ ಸಾಹಿತಿ 
ಸಿಂದಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ಮಾಜಿ ಗೌರವ ಕಾರ್ಯದರ್ಶಿಗಳು.

What's Your Reaction?

like

dislike

love

funny

angry

sad

wow