ರಾಮದುರ್ಗಾ ಶಾಲೆಗೆ ತಾ.ಪಂ ಇಓ, ತಹಶೀಲ್ದಾರ್ ಭೇಟಿ ಶೀಘ್ರ ಕೊಠಡಿ ದುರಸ್ತಿಗೆ ಕ್ರಮ : ತಾ.ಪಂ ಇಓ ರಾಜಶೇಖರ್

ಕನಕಗಿರಿ: ತಾಲೂಕಿನ ರಾಮದುರ್ಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶಿಥಿಲಗೊಂಡ ಹಿನ್ನೆಲೆ ಶನಿವಾರ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ರಾಜಶೇಖರ್ ಹಾಗೂ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಶಾಲಾ ಕೊಠಡಿಯನ್ನು ಪರಿಶೀಲಿಸಿ, ತಾ.ಪಂ ಅನುದಾನದಲ್ಲಿ ದುರಸ್ತಿಗೊಳಿಸುವುದಾಗಿ ತಿಳಿಸಿದರು. ಜೊತೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಜಾಗವನ್ನು ಪರಿಶೀಲಿಸಿ ಸರ್ವೆ ಮಾಡಿ ವರದಿಯನ್ನು ಸಲ್ಲಿಸಲು ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಭೂಮಾಪಕರು, ಮಾಜಿ ತಾ.ಪಂ ಅಧ್ಯಕ್ಷ ಬಸವಂತಗೌಡ ಸೇರಿದಂತೆ ಶಾಲಾ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.
What's Your Reaction?






