ರಾಯರ ರಂಗ ಮಂದಿರದ ವತಿಯಿಂದ ಕರಾಟೆ ಪಟು ಸಿದ್ದಾರ್ಥ್ ಎಂ ಚಕ್ರವರ್ತಿರವರನ್ನು ಗೌರವಿಸಿ ಸನ್ಮಾನಿಸಲಾಯಿತ್ತು

ಚನ್ನರಾಯಪಟ್ಟಣ: ರಾಯರ ರಂಗ ಮಂದಿರದ ವತಿಯಿಂದ ಕರಾಟೆ ಪಟು ಸಿದ್ದಾರ್ಥ್ ಎಂ ಚಕ್ರವರ್ತಿರವರನ್ನು ಗೌರವಿಸಿ ಸನ್ಮಾನಿಸಲಾಯಿತ್ತು.
ಪಟ್ಟಣದ ಗಾಂಧಿ ವೃತ್ತದಲ್ಲಿರುವ ಶ್ರೀ ರಾಯರ ರಂಗಮಂದಿರದಲ್ಲಿ ಪತ್ರಕರ್ತರಾದ ಐ ಕೆ ಮಂಜುನಾಥ್ ಮತ್ತು ಶ್ರೀಮತಿ ಎ ವೈ ಸರಿತಾರವರ ಸುಪುತ್ರ ಹಾಗೂ ಶ್ರೀ ವಿವೇಕಾನಂದ ಅಂತರಾಷ್ಟ್ರೀಯ 6ನೇ ತರಗತಿಯ ವಿದ್ಯಾರ್ಥಿಯಾದ ಸಿದ್ದಾರ್ಥ್ ಚಕ್ರವರ್ತಿಯವರು ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪ್ರಶಸ್ತಿ ವಿಜೇತರಾದ ಹಿನ್ನೆಲೆಯಲ್ಲಿ ರಾಯರ ರಂಗಮಂದಿರದಿಂದ ಸನ್ಮಾನಿಸಿ ಗೌರವಿಸಲಾಯಿತು.
ಚನ್ನರಾಯಪಟ್ಟಣ ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ ಕೆ ಪ್ರಕಾಶ್ ಮಾತನಾಡಿ ಕರಾಟೆ ಪಟು ಸಿದ್ದಾರ್ಥ್ ಎಂ ಚಕ್ರವರ್ತಿಯು ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದು ಪೋಷಕರಿಗೆ ಹಾಗೂ ಶಾಲೆಗೆ ಮತ್ತು ಚನ್ನರಾಯಪಟ್ಟಣಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು. ಇಂತಹ ಪ್ರತಿಭಾವಂತ ಕ್ರೀಡಾಪಟುವಿಗೆ ಸನ್ಮಾನಿಸಿ ಗೌರವಿಸುತ್ತಿರುವುದು ನಮಗೆ ತುಂಬಾ ಸಂತೋಷವನ್ನುಂಟು ಮಾಡಿದೆ ಎಂದರು. ಇದೇ ಸಂದರ್ಭದಲ್ಲಿ ರಾಯರ ರಂಗಮಂದಿರದ ಮುಖ್ಯಸ್ಥರಾದ ಎಂ ಕೆ ಪ್ರಕಾಶ್, ಕೆ ಆರ್ ಅನಿತಾ, ಪಿ ಸ್ವಾತಿ ಸೇರಿದಂತೆ ಇತರರು ಹಾಜರಿದ್ದರು.
What's Your Reaction?






