ವನಸಿರಿ ಪೌಂಡೇಷನ್ ನಿಂದ ಸಸಿ ನೆಟ್ಟು ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅಮ್ಮನವರ ಹುಟ್ಟುಹಬ್ಬ ಆಚರಣೆ

Jun 30, 2025 - 16:44
 0  3
ವನಸಿರಿ ಪೌಂಡೇಷನ್ ನಿಂದ ಸಸಿ ನೆಟ್ಟು ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅಮ್ಮನವರ ಹುಟ್ಟುಹಬ್ಬ ಆಚರಣೆ
ಸಿಂಧನೂರು ತಾಲೂಕಿನ ಬಿ ಆರ್ ಕ್ಯಾಂಪ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪದ್ಮ ಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕಅಮ್ಮನವರ 114 ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ವನಸಿರಿ ಪೌಂಡೇಷನ್ (ರಿ)ರಾಯಚೂರು ರಾಜ್ಯ ಘಟಕದ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
 ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಸಿಗಳು ನೆಡುವ ಮೂಲಕ ಸಾಲುಮರದ ತಿಮ್ಮಕ್ಕ ಅಮ್ಮನವರ ಹುಟ್ಟು ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಿ ಪರಿಸರ ರಕ್ಷಣೆ ಬಗ್ಗೆ ಶಾಲೆಯ ವಿದ್ಯಾರ್ಥಿಗಳ ಮನವರಿಕೆ ಹಾಗೂ ಅವರಿಗೆ ತಿಳುವಳಿಕೆ ನೀಡುವ ಮೂಲಕ ಆಚರಣೆ ಮಾಡಿದರು.ನಂತರ ವಿದ್ಯಾರ್ಥಿಗಳೆಲ್ಲರೂ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರ ಕೈಯಲ್ಲಿ ಹಿಡಿದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ಶಿಕ್ಷಣ ಪ್ರೇಮಿ ಮಹೇಶ ರೆಡ್ದಿ ಅವರು ಶಾಲೆಗೆ ತಟ್ಟೆ ಲೋಟ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಶಾಲೆಯ ಮುಖ್ಯ ಗುರುಗಳು ಅಶೋಕ ಗಾಜಿ, ವನಸಿರಿ ಪೌಂಡೇಷನ್ ಸದಸ್ಯ ರಂಜಾನ್ ಸಾಬ್,ಸುಂದರೇಶ ಶಿಕ್ಷಕರು,ಮಲ್ಲಿಕಾರ್ಜುನ ಶಿಕ್ಷಕರು,ಅತಿಥಿ ಶಿಕ್ಷಕರು ಶ್ರಿಮತಿ ರೇಣುಕಾ,ಶ್ರೀಮತಿ ಅಯ್ಯಮ್ಮ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0