ವಿಶ್ವ ಬುಡಕಟ್ಟು ದಿನ ಆಚರಣೆ

ಇಂಡಿ: ಪಟ್ಟಣದ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಜಾನಪದ ಪರಿಷತ್ತು ತಾಲೂಕು ಘಟಕ ಇಂಡಿ ವತಿಯಿಂದ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಆಚರಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಜಾಪ ಅಧ್ಯಕ್ಷರಾದ ಪಿ.ಬಿ.ಅವಜಿಯವರು ವಹಿಸಿಕೊಂಡಿದ್ದರು, ಕಾರ್ಯಕ್ರಮದ ಉದ್ಘಾಟನೆಯನ್ನು ಇಂಡಿಯ ನೌಕರರ ಸಂಘದ ನಿರ್ದೇಶಕರಾದ ಎಸ್.ಆರ್ ಪಾಟೀಲ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ' ಭಾರತ ಹಲವಾರು ಸಂಸ್ಕೃತಿಗಳ ತವರು, ಆದಿವಾಸಿಗಳ ಸಂಸ್ಕೃತಿ, ಪರಂಪರೆಗೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ನಾವೆಲ್ಲರೂ ಗೌರವಿಸಬೇಕು ಎಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಪ್ರೊ: ರವಿ ಅರಳಿಯವರು' ಜಾಗತಿಕವಾಗಿ ಸ್ಥಳೀಯ ಸಮುದಾಯಗಳ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ, ಪರಂಪರೆ ಮತ್ತು ಕೊಡುಗೆಗಳನ್ನು ಗಮನದಲ್ಲಿಟ್ಟುಕೊಳ್ಳಲು ವಿಶ್ವದ ಸ್ಥಳೀಯ ಜನರ ಅಂತರಾಷ್ಟ್ರೀಯ ದಿನವೂ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ, ಆದಿವಾಸಿ ಜನರು ಜಾಗತಿಕ ಜನಸಂಖ್ಯೆ ಐದು ಪ್ರತಿಶತಕ್ಕಿಂತ ಕಡಿಮೆ ಇದ್ದರೂ ಅವರ ವಿಶ್ವದ ಬಡಜನರಲ್ಲಿ 15 ಪ್ರತಿಶತದ ಪಾಲಿನಲ್ಲಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿ.ಬಿ.ಅವಜಿಯವರು ಆದಿವಾಸಿ ಜನರ ಯೋಗ ಕ್ಷೇಮ ಘನತೆ ಮತ್ತು ಒಳಗೊಳ್ಳುವಿಕೆಯನ್ನು ಖಚಿತ ಪಡಿಸಿಕೊಳ್ಳಲು ಸರಕಾರಗಳು ಸಂಸ್ಥೆಗಳು ಮತ್ತು ಸಮಾಜಗಳ ನಡುವಿನ ಸಹಯೋಗದ ಅಗತ್ಯವನ್ನು ಈ ದಿನಾಚರಣೆಯು ಎತ್ತಿ ತೋರಿಸುತ್ತದೆ ಎಂದರು.ಮುಖ್ಯ ಅತಿಥಿಗಳಾಗಿ ಸಿದ್ದು ಅರಳಗುಂಡಗಿ, ಮಲ್ಲಿಕಾರ್ಜುನ ನೇದಲಗಿ,ಜಟ್ಟೆಪ್ಪ ಮಾದರ,ಅಶೋಕ ಹೊಸಮನಿ,ಸಾಗರ ಮಾನೆ ಹಾಗೂ ಸಂಗಡಿಗರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು, ಈ ಸಂದರ್ಭದಲ್ಲಿ ಶಾಲೆಯ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಭಾಗವಹಿಸಿದ್ದರು,
ಶ್ರೀಮತಿ ಬಿ.ಸಿ.ಭಗವಂತಗೌಡರ ನಿರೂಪಿಸಿದರು,ಜಟ್ಟೆಪ್ಪ ಮಾದರ ವಂದಿಸಿದರು.
What's Your Reaction?






