ಶ್ರೀ ರಾಯರ ಸೇವಾ ಕೇಂದ್ರ ಉದ್ಘಾಟಿಸಿದ ಶ್ರೀಮತಿ ಕುಸುಮ ಬಾಲಕೃಷ್ಣ

Oct 4, 2025 - 13:32
 0  4
ಶ್ರೀ ರಾಯರ ಸೇವಾ ಕೇಂದ್ರ ಉದ್ಘಾಟಿಸಿದ ಶ್ರೀಮತಿ ಕುಸುಮ ಬಾಲಕೃಷ್ಣ

ಚನ್ನರಾಯಪಟ್ಟಣದ ಗಾಂಧಿ ವೃತ್ತದಲ್ಲಿರುವ   ರಾಯರ ರಂಗಮಂದಿರದ  ಮುಂಭಾಗದಲ್ಲಿ ಸಾರ್ವಜನಿಕರ ಸೇವೆಗಾಗಿ  ಡಿಜಿಟಲ್ ಕೇಂದ್ರವನ್ನು  ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀಮತಿ ಕುಸುಮ ಬಾಲಕೃಷ್ಣ  ಜನರು ಬೇರೆಬೇರೆ ದೇವಸ್ಥಾನಗಳಿಗೆ ಹೋಗಿ ಬರಲು  ಹಾಗೂ ಡಿಜಿಟಲ್ ಕೆಲಸಗಳಿಗೆ  ಅಲೆದಾಡುವ ಬದಲು  ಒಂದೇ ಜಾಗದಲ್ಲಿ ಎಲ್ಲಾ ಕೆಲಸಗಳನ್ನು ಮಾಡಿಕೊಡಲು ಶ್ರೀ ರಾಯರ ಸೇವಾ ಕೇಂದ್ರವನ್ನು  ತೆರೆದಿರುವುದು  ಸಾರ್ವಜನಿಕರಿಗೆ ಸಂಪೂರ್ಣವಾಗಿ  ಉಪಯೋಗವಾಗಲಿ ಎಂದರು.

 ರಾಯರ ಸೇವಾ ಕೇಂದ್ರದಲ್ಲಿ ಎಲ್ಲಾ ಮಾದರಿಯ ಡಿಜಿಟಲ್ ಕೆಲಸಗಳು ಹಾಗೂ ಭಾರತ ದೇಶದ ಯಾವುದೇ ದೇವಾಲಯಗಳಿಗಾಗಲಿ  ರೂಮ್ ಬುಕಿಂಗ್ , ಫ್ಲೈಟ್ ಬುಕ್ಕಿಂಗ್, ಸೇರಿದಂತೆ ಎಲ್ಲಾ ರೀತಿಯ ಕೆಲಸಗಳನ್ನು  ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು ಎಂದು ರಾಯರ ರಂಗಮಂದಿರದ  ಮುಖ್ಯಸ್ಥರಾದ  ಪ್ರಕಾಶ್ ಭಾರದ್ವಾಜ್ ತಿಳಿಸಿದರು. ಇದೇ ಸಂದರ್ಭದಲ್ಲಿ  ಕೆಂಪೇಗೌಡ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಆನಂದ್ ಕಾಳೆನಹಳ್ಳಿ, ಟಿಎಪಿಎಂಎಸ್ ಅಧ್ಯಕ್ಷರಾದ ಅನಿಲ್ ಮರಗೂರು, ಶ್ರೀಮತಿ ಅನಿತಾ ಪ್ರಕಾಶ್, ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0