ಸಮಾಜ ಸೇವೆಯಿಂದ ಹಿಂದೇ ಸರಿಯುವ ಗುಣ ನನ್ನಲ್ಲಿ ಇಲ್ಲ-ಸಮಾಜ ಸೇವಕ ಸಿ.ಮುನಿರಾಜು

ಭಾಗ್ಯನಗರ: ಆದಿ ಅನಾದಿ ಕಾಲದಿಂದಲೂ ನಮ್ಮ ಹಿಂದೂಗಳ ಗಣೇಶ್ ಚತುರ್ಥಿ ಸಂಪ್ರದಾಯಕ ಹಬ್ಬವಾಗಿದ್ದು ಯುವಕರ ಉತ್ಸಾಹಕ್ಕಾಗಿ ಸುಮಾರು 5 ವರ್ಷಗಳಿಂದ ಪ್ರತಿಯೊಂದು ಗ್ರಾಮಕ್ಕೂ ಗಣೇಶ ಮೂರ್ತಿಗಳ ವಿತರಣೆ ಮಾಡಲಾಗುತ್ತಿದೆ ಎಂದು ಸಮಾಜ ಸೇವಕ ಹಾಗು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದ್ದಾರೆ.
ಪಟ್ಟಣದ ಹೊರವಲಯದ ಟಿ.ಬಿ.ಕ್ರಾಸ್‌ನಲ್ಲಿರುವ ಗೃಹ ಕಚೇರಿಯಲ್ಲಿ ಬಿಜೆಪಿ ಮುಖಂಡ ಸಿ.ಮುನಿರಾಜು ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕುಗಳ ನೂರಾರು ಯವಕರಿಗೆ ಗೌರಿ ಗಣೇಶ ಹಬ್ಬದ ಪ್ರಯುಕ್ತ 400 ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿತರಿಸಿ ಹಬ್ಬದ ಶುಭಾಷಯ ಕೋರಿ ಮಾತನಾಡಿ ಹಿಂದೂ ಯುವಕರಿಗೆ ಶಕ್ತಿ ಹಾಗೂ ಸ್ಪೂರ್ತಿಯನ್ನು ತುಂಬುವ ಕೆಲಸ ಗೌರಿ ಗಣೇಶ ಹಬ್ಬದಲ್ಲಿ ನಡೆಯುತ್ತದೆ. ಚುನಾವಣೆಯಲ್ಲಿ ಸೋತಷ್ಟಕ್ಕೆ ಸಮಾಜ ಸೇವೆಯಿಂದ ಹಿಂದೇ ಸರಿಯುವ ಗುಣ ನನ್ನಲ್ಲಿ ಇಲ್ಲ ಸದಾ ಕ್ಷೇತ್ರದ ಜನರ ಸೇವೆಯಲ್ಲಿ ನಿರತನಾಗಿ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ಈ ಕ್ಷೇತ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುತ್ತೇವೆ ಎಂದರು.
ಈ ಸಂಧರ್ಭದಲ್ಲಿ ಬಿಜೆಪಿ ಮಂಡಲಧ್ಯಕ್ಷ ಆರ್. ಪ್ರತಾಪ್,ಗುಡಿಬಂಡೆ ಬಿಜೆಪಿ ಮಂಡಲಧ್ಯಕ್ಷ ಗೆಂಗಿರೆಡ್ಡಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸುಧಾಕರ್ ರೆಡ್ಡಿ,ಬಿಜೆಪಿ ಮುಖಂಡರಾದ ಕೆ.ಟಿ.ವೀರಾಂಜಿನೇಯಲು,ಚಿನ್ನಪೂಜಪ್
What's Your Reaction?






