ಸರಕಾರಿ ಶಾಲೆಗಳ ವಾತಾವರಣ ಸುಗಂಧವಾಗಿರಲು ಗಿಡ ಮರಗಳನ್ನು ಬೆಳಸಬೇಕು

ಸಿಂಧನೂರು:ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರೈತರನಗರ ಕ್ಯಾಂಪ್ ಈ ಶಾಲೆಯ ಆವರಣದಲ್ಲಿ ಇರುವ ಗಿಡಮರಗಳಲ್ಲಿ ನೂರಾರು ಬಾತುಕೋಳಿಗಳು ವಾಸಮಾಡಿ ದಿನನಿತ್ಯ ಹೊಲಸು ಮಾಡಿ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬಿರುತ್ತಿವೆ.ಇದರಿಂದ ಅಲ್ಲಿನ ಸ್ಥಳೀಯರು ಗಿಡಮರಗಳನ್ನು ಕಡಿಯಲು ಮುಂದಾದಾಗ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಭೇಟಿ ನೀಡಿ ಗಿಡಮರಗಳನ್ನು ಕಡಿಯುವುದನ್ನು ನಿಲ್ಲಿಸಿದರು.ಇದಕ್ಕೆ ಪರಿಹಾರೋಪಯವಾಗಿ ಕೂಡಲೇ ಅರಣ್ಯ ಅಧಿಕಾರಿಗಳು,ಅರೋಗ್ಯ ಅಧಿಕಾರಿಗಳು ಸ್ಥಳಕ್ಕೆಭೇಟಿ ನೀಡಿ ಮಕ್ಕಳ ಮೇಲೆ ಬೀರುವ ದುಷ್ಪರಿಣಾಮಗಳನ್ನು ತಡೆಯಬೇಕು ಎಂದು ಮನವಿ ಮಾಡಿಕೊಂಡರು. ಶಾಲೆಯ ಆವರಣದಲ್ಲಿ ಇರುವ ಗಿಡಮರಗಳಲ್ಲಿ ಇರುವ ನೂರರು ಬಾತು ಕೋಳಿಗಳು ದಿನನಿತ್ಯ ವಾಸಮಾಡಿ ವಾತಾವರಣವವನ್ನು ಕಲುಷಿತ ಮಾಡಿವೆ.ಇಲ್ಲಿನ ವಾತಾವರಣ ದುಷ್ಪರಿಣಾಮ ಬೀರುವ ಜೊತೆಗೆ ದುರ್ವಾಸನೆ ಬೀರುತ್ತಿವೆ ಎಂದು ಅಲ್ಲಿನ ಸ್ಥಳೀಯರು ಗಿಡಮರಗಳನ್ನು ಕಡಿಯಲು ಮುಂದಾದಾಗ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಭೇಟಿ ನೀಡಿ ಗಿಡಮರಗಳನ್ನು ಕಡಿಯುವುದನ್ನು ನಿಲ್ಲಿಸಿದರು. ನಂತರ ಇದಕ್ಕೆ ಪರಿಹಾರ ಕಂಡುಕೊಳ್ಳಲು ಅವರು ರಾಯಚೂರು ಜಿಲ್ಲಾ ಪ್ರಾದೇಶಿಕ ಅರಣ್ಯವಲಯದ ಅಧಿಕಾರಿಗಳಿಗೆ ಮಾತನಾಡಿ ಶಾಲೆಯ ಮಕ್ಕಳಿಗೆ ಬಹಳಷ್ಟು ತೊಂದ್ರೆ ಆಗುತಾ ಇದೆ ಇದರಿಂದ ಸ್ಥಳೀಯರು ಗಿಡಗಳನ್ನು ಕಡಿಯಲು ಮುಂದಾಗಿದ್ದಾರೆ ಎಂದೂ ಹೇಳಿದಾಗ ಆ ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿದರು.ನಂತರ ತಾಲೂಕ ಪಂಚಾಯತ ಅಧಿಕಾರಿಗಳಿಗೆ ಮಾತಾಡಿ ಶಾಲೆ ಆವರಣ ತುಂಬಾ ಬೀಚಿಂಗ್ ಪೌಡರ್ ಹಾಕಿದ್ದಾರೆ.ನಂತರ ತಾಲೂಕ ಅಸ್ಪತ್ರೆಯ THO ಮಾತಾಡಿ ಪಕ್ಷಿಗಳಿಂದ ಇತರ ಆಗಿದೆ ಹೇಳಿದ ತಕ್ಷಣ ಆ ಸ್ಥಳಕ್ಕೆ ಡಾಕ್ಟರ್, ಹಾಗು ಸಿಬ್ಬಂದಿ ಬೇಟಿ ಕೊಟ್ಟು ಮಕ್ಕಳಿಗೆ ಸ್ಯಾನಿಟೈಜರ್ ಸಾಬೂನ್,ಕೊಟ್ಟುರು. ಸರಕಾರಿ ಶಾಲೆಯ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಮುಖ್ಯ,ಸರಕಾರಿ ಶಾಲೆಗಳ ವಾತಾವರಣ ಸುಗಂಧವಾಗಿರಲು ಗಿಡ ಮರಗಳನ್ನು ಬೆಳಸಬೇಕು ಎಂದರು. ನನ್ನ ಮನವಿಗೆ ಸ್ಪಂದಸಿದ ಪ್ರಾದೇಶಿಕ ಅರಣ್ಯ ಅಧಿಕಾರಿಗಳು,ತಾಲೂಕ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳಿಗೆ,ತಾಲೂಕು ಪಂಚಾಯತ್ ಅಧಿಕಾರಿಗಳಿಗೆ,ಗ್ರಾಮ ಪಂಚಾಯತ್ ಪಿಡಿಒ,ಗ್ರಾಮ ಪಂಚಾಯತ ಭೂತ್ತಲದಿನ್ನಿ ಪಿಡಿಒ ಮತ್ತು ಅಧಿಕಾರಿಗಳು ಹಾಗೂ ರೈತನಗರ ಕ್ಯಾಂಪ್ ಗ್ರಾಮ ಪಂಚಾಯತಿ ಸದಸ್ಯರಿಗೆ, ಶಾಲೆಯ SDMC ಅಧ್ಯಕ್ಷರಿಗೆ,ಊರಿನ ಮುಖಂಡರಿಗೆ, ಶಾಲೆಯ ಮುಖ್ಯ ಗುರುಗಳಿಗೇ ಅಮರೇಗೌಡ ಮಲ್ಲಾಪುರ ಅವರು ಹೃದಯ ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.
What's Your Reaction?






