21 ಜೆಎಲ್ಆರ್ 01 ಜಾತಿಗಣತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಿ: ಶಾಸಕ ಬಿ.ದೇವೇಂದ್ರಪ್ಪ

Sep 22, 2025 - 12:17
 0  4
21 ಜೆಎಲ್ಆರ್ 01 ಜಾತಿಗಣತಿ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ನಮೂದಿಸಿ: ಶಾಸಕ ಬಿ.ದೇವೇಂದ್ರಪ್ಪ

ಜಗಳೂರು ಸುದ್ದಿ: ಇದೇ ತಿಂಗಳು 22 ರಿಂದ ಅ.7ರವರೆಗೆ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಜಾತಿಗಣತಿಯಲ್ಲಿ ತಾಲ್ಲೂಕಿನ ನಾಯಕ ಸಮಾಜದವರು ಜಾತಿಗಣತಿಯಲ್ಲಿ 9 ಮತ್ತು 11 ರಲ್ಲಿ ನಾಯಕ ಎಂದು  ನಮೂದಿಸಬೇಕು ಎಂದು ಶಾಸಕ ಬಿ ದೇವೇಂದ್ರಪ್ಪ ಹೇಳಿದರು.

ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕಿನ ನಾಯಕ ಸಮಾಜದಿಂದ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ವಿದ್ಯಾವಂತ ಯುವಕರ ತಂಡಗಳನ್ನು ರಚಿಸಿ  ಧ್ವನಿವರ್ಧಕಗಳೊಂದಿಗೆ ಕರಪತ್ರಗಳನ್ನು ಹಂಚುವ ಮೂಲಕ ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಗಳಿಗೆ ಹೋಗಿಜಾಗೃತಿಮೂಡಿಸಲಾಗುವುದು.

ಜಾತಿಗಣತಿಯಲ್ಲಿ ಸ್ವಲ್ಪ ನಿರ್ಲಕ್ಷ್ಯವಹಿಸಿದರೆ ವಿವಿಧ ಕ್ಷೇತ್ರಗಳಲ್ಲಿ ಸರ್ಕಾರಿ ಸೌಲಭ್ಯಗಳಿಂದ ಎಲ್ಲರೂ ವಂಚಿತರಾಗಬಹುದು.ಪಕ್ಷಾತೀತವಾಗಿ ಜಾತಿಗಣತಿ ಸಮೀಕ್ಷೆಯಲ್ಲಿ ಸಹಕರಿಸಬೇಕು ಎಂದುಮನವಿ ಮಾಡಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ ನಮ್ಮ ನಾಯಕ ಸಮಾಜದ ಮೂಲಕಸುಬುಗಳಾದ  ಪಶುಪಾಲನೆ,ಕುರಿಸಾಕಾಣಿಕೆ,ವ್ಯವಸಾಯ ಅವಲಂಬಿತರು ಆಯಾ ವೃತ್ತಿಯನ್ನು  ಸ್ಪಷ್ಟವಾಗಿ ಬರೆಸಬೇಕು.1976 ರ ಹಾವನೂರು ವರದಿಯನ್ವಯ ತಾಲ್ಲೂಕಿನ ನಾಯಕಸಮುದಾಯದವರಿಗೆ ಜಾತಿಗಣತಿ ಕಲಂನಲ್ಲಿ 10 ಅನ್ವಯ ಆಗುವುದಿಲ್ಲ. ನಮ್ಮ ಜಾತಿಯ 38/2 ಕ್ರಮಸಂಖ್ಯೆಯಂತೆ ಕಲಂ 9 ಮತ್ತು 11 ರಲ್ಲಿ ನಾಯಕ ಎಂದು ಮಾತ್ರ ಬರೆಸಬೇಕು. ಬೇರೆಬೇರೆ ಜಿಲ್ಲೆಗಳಲ್ಲಿ ಉಪಜಾತಿಗಳನ್ನು ನಮೂದಿಸಿ ಎಸ್ ಟಿ ಜಾತಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ ಗೊಂದಲಬೇಡ ಎಂದು ಸ್ಪಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಜಿ.ಪಂ‌ ಮಾಜಿ ಸದಸ್ಯ ಕೆ.ಪಿ.ಪಾಲಯ್ಯ,ನಾಯಕಸಮಾಜದ ತಾಲ್ಲೂಕು ಅಧ್ಯಕ್ಷನಾಗರಾಜ್,ಮುಖಂಡರಾದ, ಸೂರಲಿಂಗಪ್ಪ, ಮಾರಪ್ಪ, ಡಾ.ಪಾಲಾಕ್ಷಿ,ಕಾನನಕಟ್ಟೆತಿಪ್ಪೇಸ್ವಾಮಿ,ಓಬಣ್ಣ,ಡಿ ಆರ್ ಹನುಮಂತಪ್ಪ,ವಕೀಲ ಓಬಳೇಶ್ ವಕೀಲ ರುದ್ರೇಶ್,ಸಣ್ಣ ಓಬಣ್ಣ,ಲೋಕೇಶ್, ರೇವಣ್ಣ,ರಾಜಣ್ಣ,ಸಿದ್ದಪ್ಪ,ನಾಗರಾಜ್,ಪರಮೇಶ್,ಸೇರಿದಂತೆ ನಾಯಕ ಸಮಾಜದ ಮುಖಂಡರು ಇದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0