ಕಿಕ್ಕೇರಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಕೆ ಬಿ ಚಂದ್ರಶೇಖರ್ ರವರು ಅವಿರೋಧವಾಗಿ ಆಯ್ಕೆಯಾದ್ರು

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನ ತೆರವಾಗಿದ್ದ ಹಿನ್ನೆಲೆ ಇಂದು ಚುನಾವಣೆ ನಿಗದಿಯಾಗಿತ್ತು . ಅಧ್ಯಕ್ಷರ ಸ್ಥಾನ ಬಯಸಿ ಕೆ ಬಿ ಚಂದ್ರಶೇಖರ್ ರವರನ್ನು ಹೊರತು ಪಡಿಸಿ ಮತ್ಯಾರು ನಾಮ ಪತ್ರ ಸಲ್ಲಿಕೆ ಮಾಡದ ಹಿನ್ನೆಲೆ ಚುನಾವಣಾ ಅಧಿಕಾರಿ ಚಂದ್ರಶೇಖರ್ ರವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ರು..
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷರಾದ ಕೆ ಎಸ್ ಪ್ರಭಾಕರ್ ಮತ್ತು ರಾಜ್ಯ ಆರ್ ಟಿ ಓ ಸಂಘದ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ್ ರವರು ನೂತನ ಅಧ್ಯಕ್ಷರಾದ ಚಂದ್ರಶೇಖರ್ ರವರಿಗೆ ಸಿಹಿ ತಿನ್ನಿಸಿ ಶುಭ ಹಾರೈಸಿದ್ರು..
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಾಲಕೃಷ್ಣ ಮಾತನಾಡಿ ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಕುಡಿಯುವ ನೀರು, ಗ್ರಾಮಗಳ ಸ್ವಚತೆ, ಬೀದಿ ದೀಪ ಸೇರಿದಂತೆ ಗ್ರಾಮಗಳ ಮೂಲಭೂತ ಸೌಕರ್ಯಗಳ ಕಲ್ಪಿಸಿ ಗ್ರಾಮಗಳ ಅಭಿವೃದ್ಧಿ ಶ್ರಮಿಸುವಂತೆ ಸಲಹೆ ನೀಡಿದ್ರು.. ನೂನತ ಅಧ್ಯಕ್ಷ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ರು..
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ, ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ರಾಜೇಶ್, , ಪುಟ್ಟರಾಜು, ಕೆ ಆರ್ ಕೃಷ್ಣ, ಭಾರತಿ, ರೇಣುಕಮ್ಮ, ತಾಯಮ್ಮ ಮಾಜಿ ಉಪಾದ್ಯಕ್ಷರಾದ ಜ್ಯೋತಿ, ಸರಸ್ಪತಿ, ಜಯಲಕ್ಷ್ಮಿ, ಪದ್ಮಾವತಿ, ಪಿ.ಡಿ.ಓ ಚಲುವರಾಜು, ಲೆಕ್ಕಸಹಾಯಕ ವಾಸು, ಕಾರ್ಯದರ್ಶಿ ಪಾಪೇಗೌಡ, ಬಿಲ್ ಕಲೆಕ್ಟರ್ ಶ್ರೀಕಾಂತ್ ಸೇರಿದಂತೆ ಗ್ರಾಮದ ಮುಖಂಡರು, ಇದ್ದರು...
What's Your Reaction?






