ಕೆ ಜಿ ಎಫ್ ನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ರೂಪಕಲಾ ಶಶಿಧರ್

Sep 5, 2025 - 15:58
 0  2
ಕೆ ಜಿ ಎಫ್ ನಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ರೂಪಕಲಾ ಶಶಿಧರ್

ಕೆಜಿಎಫ್: ನಗರದ ಮಾರಿಕೊಪ್ಪಮ್ ಚೆಲ್ಲಪ್ಪ ಲೈನ್ನಲ್ಲಿ ನಗರೋತ್ಥಾನ ನಾಲ್ಕು ಯೋಜನೆಯಲ್ಲಿ 7.5 ಕೋಟಿ ವೆಚ್ಚದಲ್ಲಿ ನಗರ ಪ್ರದೇಶದ ರಸ್ತೆ ಅಭಿವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕಿ ರೂಪಕಲಾ ಶಶಿಧರ್.

ನಂತರ ಮಾಧ್ಯಮದೊಂದಿಗೆ ಮಾತನಾಡಿ ನಗರ ಹಾಗೂ ಮೈನಿಂಗ್ ಪ್ರದೇಶ್ದಲ್ಲಿ   ಹಲವು ರಸ್ತೆಗಳು ಹಾಳಾಗಿದ್ದು, ವಾಹನ ಸವಾರರು ಸಾರ್ವಜನಿಕರು ಪರದಾಡುತ್ತಿದ್ದು, ಅತಿ ಶೀಘ್ರದಲ್ಲೇ ಅತಿ ಮುಖ್ಯವಾದ ರಸ್ತೆಗಳನ್ನು ನಿರ್ಮಿಸಿ ಕೊಡಲಾಗುವುದು ಎಂದರು. 

ಉರಿಗಾಂ ರೈಲ್ವೇ ಸೇತುವೆ ಬಗ್ಗೆ ಪ್ರಸ್ತಾಪಿಸಿದವರು. ಸೇತುವೆ ನಿರ್ಮಾಣ ಮಾಡಲು ನಾವು ಯಾವ ರೀತಿ ಬೇಕಾದರೂ ಸಹಕಾರ ನೀಡುತ್ತೇವೆ. ಯಾವ ಇಲಾಖೆ ತೊಂದರೆ ಪಡಿಸುತ್ತಿದೆ ಅದನ್ನು ಪರಿಶೀಲನೆ ಮಾಡಿ ಸಹಕಾರ ನೀಡುತ್ತೇವೆ. ಒಟ್ಟಾರೆಯಾಗಿ ಕ್ಷೇತ್ರ ಅಭಿವೃದ್ಧಿಗೆ ಸಂಸದ ಎಂ ಮಲ್ಲೇಶ್ ಬಾಬು ಜೊತೆ ನಿಲ್ಲುತ್ತೇನೆ ಎಂದರು. 

 ಕೊತ್ತೂರು ಗ್ರಾಮದಲ್ಲಿ ಶಾಲೆಯ ಕೊಠಡಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು. ಶಿಕ್ಷಣ ಇಲಾಖೆಯ ವತಿಯಿಂದ ಅತಿ ಹೆಚ್ಚು ಮಕ್ಕಳಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದು ಕೋಟಿ 80 ಲಕ್ಷ ವೆಚ್ಚ ದಲ್ಲಿ ತಾಲೂಕಿನ 15  ಶಾಲೆಗಳಲ್ಲಿ ಕೊಠಡಿಗಳು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು.

ಮಾರಿಕಪ್ಪಂ ಪಂಚಾಯತಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಒಂದು ಕೋಟಿ ಅನುದಾನದಲ್ಲಿ ಅತಿ ಹೆಚ್ಚು ಬಾಳಿಕೆ ಬರುವ ರೀತಿಯಲ್ಲಿ ನಿರ್ಮಿಸಿ ಕೊಡಲಾಗುವುದು. ಇಲ್ಲಿನ ಮುಖಂಡರ ಹಲವು ವರ್ಷಗಳ ಬೇಡಿಕೆ ಇದಾಗಿದೆ ಎಂದರು. 

ನಗರಸಭೆ ಸದಸ್ಯರು ರಮೇಶ್ ಜೈನ್ ಮಾತನಾಡಿ ಶಾಸಕರು ನಗರ ಗ್ರಾಮ ಎನ್ನದೆ ಎಲ್ಲಾ ಪ್ರದೇಶಗಳಲ್ಲಿ ರಸ್ತೆ ಚರಂಡಿ ಎಲ್ಲಾ ಮೂಲ ಸೌಕರ್ಯಗಳನ್ನು ಒದಗಿಸಿ ಕೊಳ್ಳುತ್ತಿದ್ದಾರೆ. ಇಂತಹ ಶಾಸಕರನ್ನು ಪಡೆಯಲು ನಾವು ಪುಣ್ಯರು. ಇವರ ಕಾರ್ಯಗಳು ಹೀಗೆ ಮುಂದುವರೆಯಲಿ ನಾವು ಸಹ ಮುಂದೆ ಬರುವ ಚುನಾವಣೆಯಲ್ಲಿ ಅವರ ಕೈ ಬಲಪಡಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ನಾವು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 
ಈ ಸಂದರ್ಭದಲ್ಲಿ ಮಾರಿಕೊಪ್ಪಂ ಪಂಚಾಯತಿ ಅಧ್ಯಕ್ಷರು ಶಂಕರ ರೆಡ್ಡಿ. ಮಾಜಿ ಅಧ್ಯಕ್ಷರು ಶಿವಪ್ಪ. ಮಾಜಿ ಅಧ್ಯಕ್ಷರ. ಪ್ರಸಾದ್ ರೆಡ್ಡಿ. ಮಾಜಿ ಉಪಾಧ್ಯಕ್ಷರು. ರಘು. ಎರಪ್ಪ. ಹಂಸ ವೇಣಿ. ಸದಸ್ಯರು ಗಣೇಶ್. ವಿಜಿ. ಏಕಾಂತ್. ಮುಖಂಡರು ಪುರುಷೋತ್ತಮ್ ರೆಡ್ಡಿ. ರಾಮಕೃಷ್ಣ ರೆಡ್ಡಿ. ಬಾಬು ರೆಡ್ಡಿ. ಜಯರಾಮರೆಡ್ಡಿ. ಪಿಡಿಒ ಜಗದೀಶ್. ಮುಖಂಡರು ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0