ಅನುಪಮ ಸೇವಾ ಶಿಕ್ಷಕ ರತ್ನ ಪ್ರಶಸ್ತಿ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಚೂಡಪ್ಪ ಮುತ್ತಿನ

ಅನುಪಮ ಸೇವಾ ಶಿಕ್ಷಕ ರತ್ನ ಪ್ರಶಸ್ತಿ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಚೂಡಪ್ಪ ಮುತ್ತಿನ

Jan 29, 2024 - 12:58
 0  3
ಅನುಪಮ ಸೇವಾ ಶಿಕ್ಷಕ ರತ್ನ ಪ್ರಶಸ್ತಿ ಸ್ವೀಕರಿಸಿದ ಮುಖ್ಯೋಪಾಧ್ಯಾಯ ಚೂಡಪ್ಪ ಮುತ್ತಿನ

ಮುದ್ದೇಬಿಹಾಳ: ತಾಲೂಕಿನ ಅಗಸಬಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾದ ಚೂಡಪ್ಪ ಪದ್ಮರಾಜ ಮುತ್ತಿನ ಅವರಿಗೆ ಜನೆವರಿ 27 ಶನಿವಾರದಂದು ಪಟ್ಟಣದ ಎ ಪಿ ಎಮ್ ಸಿ ಯಲ್ಲಿರುವ ಕರ್ನಾಟಕ ಅರ್ಬನ್ ಬ್ಯಾಂಕ್ ಸಭಾ ಭವನದಲ್ಲಿ ನಡೆದ ನೂತನ ಜಿಪಿಟಿ ಶಿಕ್ಷಕರ ಸ್ವಾಗತ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಾಗಾರ, ಹಾಗೂ  ಅನುಪಮಾ ಸೇವಾ ಶಿಕ್ಷಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ   ಇವರಿಗೆ ಪರಮಪೂಜ್ಯ ಶ್ರೀ ಚೆನ್ನವೀರ ದೇವರು ಸಂಸ್ಥಾನ ಹೀರೆಮಠ ಕುಂಟೋಜಿ ಅವರ ನೇತೃತ್ವದಲ್ಲಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದರು. ಇದೆ ವೇಳೆಯಲ್ಲಿ ಸಂಘದ ಅಧ್ಯಕ್ಷರಾದ ಶಿವಾನಂದ ಎನ್ ಬೇಲಾಳ, ಬಿ ಎಚ್ ಮುದ್ನೂರ, ಎಸ್ ಡಿ ಗಾಂಜಿ ಉಪ ನಿರ್ದೇಶಕರು ಬೆಳಗಾವಿ, ಬಿ ಎಸ್ ಸಾವಳಗಿ ತಾಲೂಕು ಶಿಕ್ಷಣಾಧಿಕಾರಿ ಮುದ್ದೇಬಿಹಾಳ, ಯು ಬಿ ಧರಿಕಾರ, ಬಿ ಎಸ್ ಚಲವಾದಿ,ಟಿ ಪಿ ಮುತ್ತಿನ, ಪಲ್ಲವಿ ಗಣಾಚಾರಿ, ಸೇರಿದಂತೆ ಮತ್ತಿತ್ತರು ಇದ್ದರು.

What's Your Reaction?

like

dislike

love

funny

angry

sad

wow