ಅಮೃತ್ 2 ಯೋಜನೆಯಡಿ ಕ್ಷೇತ್ರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸರ್ಕಾರಗಳ ಅಸ್ತು

ಭಾಗ್ಯನಗರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ರಾಜ್ಯದ ಒಂದುವರೆ ವರ್ಷದಲ್ಲಿ 14 ಸಾವಿರ ಕೋಟಿ ರೂಪಾಯಿಗಳನ್ನು ನಗರದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ಕಾಮಗಾರಿಕೆಗಳಿಗೆ ಖರ್ಚು ಮಾಡಲಾಗಿದೆ ಎಂದು ನಗರ ಅಭಿವೃದ್ಧಿ ಸಚಿವ ಬಿಎಸ್ ಸುರೇಶ್ ತಿಳಿಸಿದ್ದಾರೆ.
ಅದರಂತೆ ಗುಡಿಬಂಡೆ ಮತ್ತು ಭಾಗ್ಯನಗರಕ್ಕೆ ಅಮೃತ್ 2 ಯೋಜನೆ ಅಡಿಯಲ್ಲಿ ಶಾಸಕ ಸುಬ್ಬಾರೆಡ್ಡಿ ನೇತೃತ್ವದಲ್ಲಿ ಗುದ್ದಲಿ ಪೂಜೆಯನ್ನು ನಿರ್ವಹಿಸಲಾಯಿತು, ಇನ್ನು ಮನೆ ಮನೆಗೆ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿಯಾಗಲಿದೆ ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು ಬಗ್ಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ಇನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ ನಮ್ಮ ಕ್ಷೇತ್ರದ ಭಾಗ್ಯನಗರಕ್ಕೆ ಮತ್ತು ಗುಡಬಂಡೆ ತಲಕುಗಳಿಗೆ ಅಮೃತ್ 2 ಯೋಜನೆ ಕುಡಿಯುವ ನೀರಿನ ಮುಖಾಂತರ ಮನೆ ಮನೆಗೆ ಅವಕಾಶ ಕಲ್ಪಿಸಲಾಗಿದೆ.ಹಾಗೂ ನೂತನ ಚೇಳೂರು ತಾಲ್ಲೂಕು ಆಡಳಿತ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಿದ ರಾಜ್ಯ ಸರ್ಕಾರಕ್ಕೆ ನಾನು ಆಭಾರಿಯಾಗಿ ಕೃತಜ್ಞತೆ ಸಲ್ಲಿಸುತ್ತೇನೆ.
ಅಮೃತ್ 2 ಯೋಜನೆ ಕಾಮಗಾರಿಕೆಗೆ ಆಗಮಿಸಿದ ಸಚಿವ ಬಿಎಸ್ ಸುರೇಶ್, ಉಸ್ತುವರಿ ಸಚಿವ ಎಂಸಿ ಸುಧಾಕರ್, ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಸಂಸದರಾದ ಡಾ ಕೆ ಸುಧಾಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು ತಿಳಿಸುತ್ತೇನೆ ಎಂದು ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ಈ ಸಂಧರ್ಭದಲ್ಲಿ ಸಚಿವ ಡಾ!ಎಂ.ಸಿ.ಸುಧಾಕರ್, ಸಂಸದ ಡಾ!ಕೆ.ಸುಧಾಕರ್,ಜಿಲ್ಲಾಧಿಕಾರಿ ಪಿ.ಎನ್.
ರವೀಂದ್ರ,ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ವೈ. ನವೀನ್ ಭಟ್,ಕಾಂಗ್ರೇಸ್ ಜಿಲ್ಲಾಧ್ಯಕ್ಷ ಕೇಶವರೆಡ್ಡಿ,ಪುರಸಭೆ ಅಧ್ಯಕ್ಷ ಎ. ಶ್ರೀನಿವಾಸ್,ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಎಸ್. ನರೇಂದ್ರ,ಪುರಸಭೆ ಉಪಾಧ್ಯಕ್ಷೆ ಸುಜಾತ ನರಸಿಂಹ ನಾಯ್ಡು,ತಹಸೀಲ್ದಾರ್ ಮನಿಷಾ ಮಹೇಶ್ ಪತ್ರಿ,ತಾಲ್ಲೂಕು ಪಂಚಾಯಿತಿ ಇಒ. ರಮೇಶ್,ಪಿ ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ,ಕೆ
. ಡಿ. ಪಿ. ಸದಸ್ಯ ಪಿ. ಮಂಜುನಾಥ್ ರೆಡ್ಡಿ, ಸದಸ್ಯ ಬಿ.ವಿ.ವೆಂಕಟರಮಣ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ! ಎ.ವಿ.ಪೂಜಪ್ಪ,ಪುರಸಭೆ ಮುಖ್ಯಧಿಕಾರಿ ಶ್ರೀನಿವಾಸ್, ಸದಸ್ಯ ಎ.ನಂಜುಂಡಪ್ಪ,ಎಸ್.ಟಿ.ಡಿ. ಮೂರ್ತಿ, ಗಡ್ಡಮ್ ರಮೇಶ್ ಸೇರಿದಂತೆ ಮತ್ತಿತರರು ಇದ್ದರು...
What's Your Reaction?






