ಭಾಗ್ಯನಗರದ ಕಿಚ್ಚು ಹೋರಾಟಗಳ ಹುಚ್ಚು-ಸ್ವಾಭಿಮಾನಿ ಬಣದ ಅಧ್ಯಕ್ಷ ಬಿಟಿಸಿ ಸೀನಾ

Jul 3, 2025 - 18:07
 0  4
ಭಾಗ್ಯನಗರದ ಕಿಚ್ಚು ಹೋರಾಟಗಳ ಹುಚ್ಚು-ಸ್ವಾಭಿಮಾನಿ ಬಣದ ಅಧ್ಯಕ್ಷ ಬಿಟಿಸಿ ಸೀನಾ

ಭಾಗ್ಯನಗರ: ಪಟ್ಟಣದ ಪುರಸಭೆ ವಾಣಿಜ್ಯ ಮಳಿಗೆಗಳ ಮುಂಭಾಗ ಬಳಿ ಇರುವ ಧ್ವಜದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ ವತಿಯಿಂದ ನಂದಿ ಬೆಟ್ಟದಲ್ಲಿ  ನಡೆದ ಸಚಿವ ಸಂಪುಟದಲ್ಲಿ  ರಾಜ್ಯ ಸರ್ಕಾರ ಬಾಗೇಪಲ್ಲಿ ಹೆಸರು ಭಾಗ್ಯನಗರ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ತಾಲೂಕು ಘಟಕ ವತಿಯಿಂದ ಪಟಾಕಿಗಳನ್ನು ಸಿಡಿಸಿ ಸಿಹಿಗಳನ್ನು ಹಂಚಿ ಭಾಗ್ಯನಗರ ಘೋಷಣೆಗಳು ಕೂಗಿದರು ನಂತರ  ತಾಲ್ಲೂಕು ಅಧ್ಯಕ್ಷ ಬಿಟಿಸಿ ಸೀನಾ ಮಾತನಾಡಿ ಬಾಗೇಪಲ್ಲಿ  ಹೆಸರನ್ನು ಭಾಗ್ಯನಗರ ಮಾಡಲು ಸುಮಾರು ಹೋರಾಟಗಳನ್ನು ಮಾಡಿ ಈ ದಿನ ಭಾಗ್ಯನಗರವನ್ನು ಪಡೆದಿದ್ದೇವೆ ಹಾಗೂ ಸುಮಾರು 35 ವರ್ಷಗಳ ಹಿಂದೆ  ಕನ್ನಡ ಕಳಾಸಂಘ ವತಿಯಿಂದ ಆಯೋಜನೆ ಮಾಡಿರುವ ಕಾರ್ಯಕ್ರಮದಲ್ಲಿ  ದಿವಂಗತ ಡಾಕ್ಟರ್  ರಾಜ್ ಕುಮಾರ್ ರವರು ಬಾಗೇಪಲ್ಲಿ ಭಾಗ್ಯನಗರ ಎಂದು ಘೋಷಣೆ ಕೂಗಿದರು, ದಿವಂಗತ ಜಿ. ಚಂದ್ರಶೇಖರ್ ರವರು ಈ ಹೋರಾಟವನ್ನು ಮುಂದುವರಿಸಿದ್ದು ಭಾಗ್ಯನಗರದ ಹೋರಾಟದ ಕಿಚ್ಚು ಬಿಟಿಸಿ ಸೀನ ಅವರ ನೇತೃತ್ವದಲ್ಲಿ ಹೋರಾಟಕ್ಕೆ ವೇಗವನ್ನು ಪಡೆದು  ಪ್ರಗತಿಪರ, ಕನ್ನಡ ಪರ ಸಂಘಟನೆಗಳ ಸಮಿಶ್ರ ಕೂಗುನಿಂದ ಜನ ಮೆಚ್ಚಿನ ನಾಯಕರು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕರು ಶ್ರೀ ಎಸ್ ಎನ್ ಸುಬ್ಬಾರೆಡ್ಡಿರವರು ಸರ್ಕಾರದ ಮೇಲೆ ಒತ್ತಡವನ್ನು ತಂದು ಈ ದಿನ ಸಿದ್ದರಾಮಯ್ಯ ರವರಿಂದ ಘೋಷಣೆಯನ್ನು ಮಾಡಿಸುತ್ತಿರುವಂತಹ ಶ್ರೀ ಎಸ್ ಎನ್ ಸುಬ್ಬಾರೆಡ್ಡಿ ರವರಿಗೆ ಅಭಿನಂದನೆಗಳು ಸಲ್ಲಿಸಿ ಭಾಗ್ಯನಗರ ಆಗಲು ಸಹಕರಿಸಿದ ವಿವಿಧ ಪ್ರಗತಿಪರ ಸಂಘಟನೆಗಳಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ತಾಲೂಕು ಅಧ್ಯಕ್ಷರು ಬಿಟಿಸಿ ಸೀನ, ಉಪಾಧ್ಯಕ್ಷರು ಜಬಿವುಲ್ಲಾ, ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷರು ಡಿ ಎನ್ ಕೃಷ್ಣಾರೆಡ್ಡಿ , ಪುರಸಭೆ ಅಧ್ಯಕ್ಷರು ಎ ಶ್ರೀನಿವಾಸ್, ಪುರಸಭೆ ಸದಸ್ಯರು ಶ್ರೀನಿವಾಸ್ ರೆಡ್ಡಿ , ಹಾಗೂ ಮನ್ಸೂರ್, ದ್ವಿಚಕ್ರ ವಾಹನ ರಿಪೇರಿಗಾರರಾದ ಅಧ್ಯಕ್ಷರು ಜಾವೀದ್ , ಸೆಂಟ್ರಿಂಗ್ ಕೆಲಸಗಾರರ ಅಧ್ಯಕ್ಷರು ನೂರ್ ಭಾಷಾ, ನಿವೃತ್ತ ಪೊಲೀಸ್ ಸಾದಪ್ಪ, ನಗರ ಘಟಕ ಅಧ್ಯಕ್ಷರು ಸುಧಾಕರ್, ಕವಿ ವಲಿ ಬಾಷಾ, ನಿವೃತ್ತ ಶಿಕ್ಷಕರು ರಾಮಕೃಷ್ಣ ರೆಡ್ಡಿ, ಚಿತ್ರಾವತಿ ಸಂಘದ ಮಾಲೀಕರು ಹಾಗೂ ಚಾಲಕರು ಮತ್ತಿತರರು ಉಪಸ್ಥಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456