ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಿದ ಸಚಿವ ಸಂತೋಷ್ ಲಾಡ್

ಚಾಮರಾಜನಗರ: ಇಲ್ಲಿನ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ, ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ, ಸಾಮಾಜಿಕ ಭದ್ರತಾ ಮಂಡಳಿ ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಇವರ ಸಮ್ಮಿಶ್ರ ಆಶ್ರಯದಲ್ಲಿ ಚಾಮರಾಜನಗರ ಜಿಲ್ಲಾ ವಿವಿಧ ಅಸಂಘಟಿತ ವರ್ಗಗಳ ಕಾರ್ಮಿಕ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ ದೇಶದಲ್ಲಿ 80ರಷ್ಟು ಜನರು ದೂರದಲ್ಲಿ ಅಸಂಘಟಿತ ಕಾರ್ಮಿಕರಿದ್ದಾರೆ ರಾಜ್ಯದಲ್ಲಿ 73 ಜನರು ನೋಂದಣಿ ಮಾಡಿಕೊಂಡಿದ್ದಾರೆ ಇವರೆಲ್ಲರ ಕಲ್ಯಾಣಕ್ಕೆ ಸರ್ಕಾರ ಬದ್ಧವಾಗಿರುವುದಾಗಿ ಕಾರ್ಮಿಕ ಸಚಿವರು ತಿಳಿಸಿದರು. ಈ ಬಾರಿ ಸಣ್ಣ ವೃತ್ತಿಯಲ್ಲಿರುವ 91 ಸಮಾಜದ ಜನರಿಗೆ ಸ್ಮಾರ್ಟ್ ಕಾರ್ಡ್ ನೀಡಲಾಗುತ್ತಿದೆ ಡೀಸೆಲ್ ಪೆಟ್ರೋಲ್ ಬೆಲೆ 50 ಪೈಸೆ ಸಸ್ ಹೆಚ್ಚಿಸಿ ಅದನ್ನು ಕಾರ್ಮಿಕರ ಕಲ್ಯಾಣಕ್ಕೆ ನೀಡಬೇಕು ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು ೫ ಲಕ್ಷ ವಿಮಾನ ನೀಡಬೇಕು ವರ್ಷಕ್ಕೆ 4.78 ಲಕ್ಷ ಅಪಘಾತ ಸಂಭವಿಸುತ್ತಿದ್ದು 1.76 ಲಕ್ಷ ಜನರು ಮೃತಪಡುತ್ತಿದ್ದಾರೆ ಹೀಗಾಗಿ ಅಪಘಾತ ತಡೆಯಲು ಕ್ರಮವಹಿಸಬೇಕು ಎಂದರು. ಐದು ವರ್ಷಕ್ಕೆ ಸರ್ಕಾರ ಮೂರು ಲಕ್ಷ ಕೋಟಿ ಗ್ಯಾರಂಟಿ ಯೋಜನೆ ಎ ಖರ್ಚು ಮಾಡುತ್ತಿದ್ದು ಅಸಾದಿಪ ಕಾರ್ಯಕ್ರಮದಲ್ಲಿ ಎಸ್ಸಿ ಎಸ್ಟಿ ಮಕ್ಕಳಿಗೆ ಕೆಲಸ ನೀಡುವವರಿಗೆ 7500 ವರೆಗೆ ನೆರವು ನೀಡಲಾಗುತ್ತಿದೆ ಹೊರಗುತ್ತಿಗೆ ನೌಕರರಿಗೆ ಸೊಸೈಟಿ ಮೂಲಕ ಕಾರ್ಯನಿರ್ವಹಿಸಲಿದ್ದು ಸಮಸ್ಯೆ ತಪ್ಪಲಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಸತ್ಯ ಯೋಜನೆ ಗೃಹ ಯೋಜನೆ ಭಾಗ್ಯಲಕ್ಷ್ಮಿ ಯೋಜನೆ ನಮ್ಮ ರಾಜ್ಯದ ಕೋಟ್ಯಂತರ ಹೆಣ್ಣು ಮಕ್ಕಳಿಗೆ ಅನುಕೂಲ ಮಾಡಲಾಗಿದೆ ಎಸ್ಸಿ ಎಸ್ಟಿ ಮಕ್ಕಳಿಗೆ ಆಶಾ ದೀಪ ಕಾರ್ಯಕ್ರಮವನ್ನು ಜಾರಿ ಮಾಡಲಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಸೊಸೈಟಿ ಮಾಡಿ ನೋಂದಾಯಿಸಿ ಸರ್ಕಾರ ವರದಿ ಕೊಡಬೇಕು ಈ ಬಗ್ಗೆ ಪ್ರಧಾನಿಯವರು ಏಕೆ ಮಾತನಾಡುತ್ತಿಲ್ಲ ಅವರನ್ನು ಕಂಡರೆ ಮೋದಿ ಅವರಿಗೆ ಭಯಾನ ಎಂದು ಪ್ರಶ್ನೆ ಮಾಡಿದರು ಆದರೆ ಈ ಬಗ್ಗೆ ನಾವು ಪ್ರಶ್ನೆ ಮಾಡಿದರೆ ಕಾಂಗ್ರೆಸ್ಸಿನವರು ಪಾಕಿಸ್ತಾನ ಪರ ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ನಂತರ ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ ನಮ್ಮ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೂ ಉದ್ಯೋಗ ಕೊಡುವ ದೂರ ದೃಷ್ಟಿಯಿಂದ ಚಾಮರಾಜನಗರ ಕೈಗಾರಿಕಾ ಪ್ರದೇಶವನ್ನು ಮಾಡಬೇಕೆಂದು ಪಟ್ಟಿ ಹಿಡಿದು ನಾನು ಈ ಭಾಗದಲ್ಲಿ ಕೈಗಾರಿಕಾ ಪ್ರದೇಶ ಮಾಡಿಸಿದೆ ಚಾಮರಾಜನಗರ ದಲ್ಲಿ ಹೆಚ್ಚು ಭೂಮಿ ಸಿಗುತ್ತದೆ ಎಂಬ ಕಾರಣಕ್ಕಾಗಿ ಇಲ್ಲೇ ಕೈಗಾರಿಕಾ ಪ್ರದೇಶ ಮಾಡಿಸಿದೆ ಈ ಈ ಭಾಗದ 10 ಸಾವಿರಕ್ಕೂ ಹೆಚ್ಚು ಜನರಿಗೆ ಅಸಂಘಟಿತ ಕಾರ್ಮಿಕರಿಗೆ ಉದ್ಯೋಗ ಲಭಿಸಿತು ಎಂದರು. ಈ ಸಂದರ್ಭದಲ್ಲಿ ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್, ಕೊಳ್ಳೇಗಾಲ್ ಶಾಸಕ ಎಆರ್ ಪಿ ಕೃಷ್ಣಮೂರ್ತಿ , ಕಾಡ ಅಧ್ಯಕ್ಷ ಮರಿಸ್ವಾಮಿ, ಅಹಮದ್ ಆಸ್ಕರ್, ಜಿಲ್ಲಾಧಿಕಾರಿ ಶಿಲ್ಪನಾಗು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ ಟಿ ಕವಿತಾ, ಜಿಲ್ಲಾ ಪಂಚಾಯತ್ ಸಿಇಓ ಮೋನಾ ರೋತ್ ಉಪಸ್ಥಿತರಿದ್ದರು.
What's Your Reaction?






