ಸಾಮಾಜಿಕ ಕಾರ್ಯಕರ್ತ ಎಚ್ ಎಂ ಶಿವಕುಮಾರ್ 50 ನೇ ವರ್ಷದ ಹುಟ್ಟುಹಬ್ಬ ಆಚರಣೆ
ಸಂತೆಮರಹಳ್ಳಿ: ಸಾಮಾಜಿಕ ಕಾರ್ಯಕರ್ತ ಗ್ರಾಮ ಪಂಚಾಯ್ತಿ ಸದಸ್ಯ ಎಚ್ ಎಂ ಶಿವಕುಮಾರ್ ಹುಟ್ಟುಹಬ್ಬವನ್ನು ಸರಳವಾಗಿ ಶಾಲೆಯ ವಿದ್ಯಾರ್ಥಿಗಳೊಂದಿಗೆ ಆಚರಣೆ ಮಾಡಲಾಯಿತು.
ಇಲ್ಲಿನ ಗಿಲ್ ಪ್ರೈಡ್ ಶಾಲೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆಗೆ ಸೇರಿ ಸರಳವಾಗಿ ಸಿಹಿ ಹಂಚುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿ ಹುಟ್ಟುಹಬ್ಬ ಕೇವಲ ಆಡಂಬರವಾಗಿ ಮಾಡಬಾರದು ಆರ್ಥಿಕ ಹಿನ್ನೆಡೆಯಾಗಬಹುದು ಇದರಿಂದ ಹುಟ್ಟುಹಬ್ಬಕ್ಕೆ ಕೆಲವರು ದುಂದು ವೆಚ್ಚ ಮಾಡಿ ಆಚರಣೆ ಮಾಡುವುದು ಇತ್ತೀಚಿನ ದಿನಗಳಲ್ಲಿ ಜಾಸ್ತಿಯಾಗಿದೆ ಇದಕ್ಕೆ ಕಡಿವಾಣ ಹಾಕಲು ಸರಳವಾಗಿ ಆಚರಣೆ ಮಾಡಲಾಗಿದೆ ಎಂದರು.
ಹಾಗಾಗಿ ಈ ಬಾರಿ ಶಾಲೆ ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಆಚರಣೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆ ವ್ಯವಸ್ಥಾಪಕ ಮಲ್ಲೇಶ್ ಸೇರಿದಂತೆ ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
