8 ಕೋಟಿ ರೂ ವೆಚ್ಚದಲ್ಲಿ ಸಂತೆಮರಹಳ್ಳಿ ಬಸ್ ನಿಲ್ದಾಣ ಮಾಡಲು : ಸಚಿವ ರಾಮಲಿಂಗರೆಡ್ಡಿ ಭರವಸೆ
ಚಾಮರಾಜನಗರ : ತಾಲೋಕಿನ ಸಂತೆಮರಹಳ್ಳಿ ಹೋಬಳಿ ಕೇಂದ್ರವಾಗಿದ್ದರೂ ಇಂದಿಗೂ ಬಸ್ ನಿಲ್ದಾಣವಿಲ್ಲದೆ ಇರುವುದರಿಂದ ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ ಸಂತೆಮರಹಳ್ಳಿ ಬಸ್ ನಿಲ್ದಾಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದರು.
ಬೆಳಗಾವಿ ಅಧಿವೇಶನದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿಯವರ ಜೊತೆಗೆ ಬಸ್ ನಿಲ್ದಾಣದ ಬಗ್ಗೆ ಪ್ರಸ್ತಾಪಿಸಿ , ಸಂತೆಮರಹಳ್ಳಿ ಸರ್ವೆ ನಂಬರ್ 134/3 ರಲ್ಲಿ ಒಂದು ಎಕ್ಕರೆ ಜಮೀನಿನಲ್ಲಿ ಸಾರಿಗೆ ನಿಗಮ ಬಸ್ ನಿಲ್ದಾಣ ನಿರ್ಮಾಣ ಮಾಡುವ ದೃಷ್ಟಿಯಿಂದ ಚೆರ್ಚೆ ನಡೆಸಿದ್ದಾರೆ.
ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಮಿಸಲಿಟ್ಟ ಜಾಗವನ್ನು ಖಾಸಗಿ ವ್ಯಕ್ತಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ವಿಳಂಭವಾಗಿತ್ತು. ಈಗ ಪ್ರಕರಣ ಇತ್ಯಾರ್ಥವಾಗಿದೆ ಎಂದವು ಈಗಾಗಲೇ ತಿಳಿಸಲಾಗಿದೆ,
ಸಂತೆಮರಹಳ್ಳಿ ಕೇಂದ್ರವಾಗಿರುವುದರಿಂದ ಸಾವಿರಾರು ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳಿಗೆ ಬಸ್ ನಿಲ್ದಾಣವಿಲ್ಲದೆ ಪರಡುವ ಸ್ಥಿತಿ ನಿರ್ಮಾಣವಾಗಿದೆ ಕೂಡಲೇ ನೂತನ ಬಸ್ ನಿಲ್ದಾಣಕ್ಕೆ ಅನುಧಾನ ನೀಡಬೇಕೆಂದು ಮನವಿ ಸಲ್ಲಿಸಿದರು.
ಇದಕ್ಕೆ ಪ್ರತಿಕ್ರಿಯಸಿದ ಸಚಿವ ರಾಮಲಿಂಗರೆಡ್ಡಿ ಸಂತೆಮರಹಳ್ಳಿಯಲ್ಲಿ ಬಸ್ ನಿಲ್ದಾಣ ಮಾಡುವ ಉದ್ದೇಶದಿಂದ 2023-24 ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ದರಪಟ್ಟಿ ದರದಂತೆ 8 ಕೋಟಿ ರೂ ಅನುದಾನ ನೀಡಲು ಭರವಸೆ ನೀಡಿದರು.
What's Your Reaction?
Like
2
Dislike
0
Love
0
Funny
0
Angry
0
Sad
0
Wow
0
