ಅ. 10ರಂದು ಅದಿತಿ ರಾವ್ ರಂಗ ಮಂಚ್ ಪ್ರವೇಶ, ಜೆಎಸ್ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ

Oct 7, 2025 - 13:02
 0  4
ಅ. 10ರಂದು ಅದಿತಿ ರಾವ್ ರಂಗ ಮಂಚ್ ಪ್ರವೇಶ, ಜೆಎಸ್ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ

ಬೆಂಗಳೂರು: ನಗರದ ಸಾಯಿ ಆರ್ಟ್ಸ್ ಇಂಟರ್ನ್ಯಾಷನಲ್ ಸಂಸ್ಥೆಯ ಗುರು ಶ್ವೇತಾ ವೆಂಕಟೇಶ್ ಅವರ ಶಿಷ್ಯೆ ಶ್ರೀಮತಿ ಅದಿತಿ. ವಿ .ರಾವ್ ಅವರು ಕಥಕ್ ರಂಗಮಂಚ ಪ್ರವೇಶಕ್ಕೆ ಸಿದ್ದರಾಗಿದ್ದಾರೆ.

ಅ.  10ರ ಸಂಜೆ 6ಕ್ಕೆ ಜಯನಗರ 8ನೇ ಬಡಾವಣೆಯ ಜೆಎಸ್ಎಸ್ ಸಭಾಂಗಣದಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ .
ಮುಖ್ಯ ಅತಿಥಿಗಳಾಗಿ ಐಸಿಸಿಆರ್ ಪ್ರಾದೇಶಿಕ ನಿರ್ದೇಶಕ  ಪ್ರದೀಪ್ ಕುಮಾರ್, ದ ಡಾನ್ಸ್ ಇಂಡಿಯಾ ಮ್ಯಾಗಜಿನ್ ಪ್ರಧಾನ ಸಂಪಾದಕ ಬಿ. ಆರ್. ವಿಕ್ರಂ ಕುಮಾರ್, ನೃತ್ಯ ವಿದುಷಿ ಸುಮಾ ಕೃಷ್ಣಮೂರ್ತಿ, ಕಥಕ್ ಕಲಾವಿದೆ ಮತ್ತು ನಟಿ ಮಾನಸ ಜೋಶಿ  ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಲೆಕ್ಕಪರಿಶೋಧಕರಾದ ವಿಶ್ವಾಸ ರಾವ್,  ಅಪರ್ಣ, ತಾಂತ್ರಿಕ ನಿರ್ದೇಶಕ ಸಾಯಿ ವೆಂಕಟೇಶ್ ಇತರರು ಉಪಸ್ಥಿತ ರಿರಲಿದ್ದಾರೆ.
ಗಾಯನದಲ್ಲಿ ವಿದ್ವಾನ್ ಶಂಕರ ಶಾನಭಾಗ್ ಪದಾಂತದಲ್ಲಿ ಗುರು ಶ್ವೇತಾ ವೆಂಕಟೇಶ್, ತಬಲಾದಲ್ಲಿ ಕಾರ್ತಿಕ್ ಭಟ್ , ಕೊಳಲು ವಾದನದಲ್ಲಿ ವಿದ್ವಾನ್ ಸಮೀರ ರಾವ್,  ಸೀತಾರ್ ವಾದನದಲ್ಲಿ ವಿದುಷಿ ಶ್ರುತಿ ಕಾಮತ್ ಸಹಕಾರ ನೀಡಲಿದ್ದಾರೆ.
ಕಲಾಸಕ್ತರು ಭಾಗವಹಿಸುವಂತೆ ಆಯೋಜಕರು ಕೋರಿದ್ದಾರೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0