ಕರುನಾಡು ಯುವಜನ ವೇದಿಕೆಯ ಸಾಮಾನ್ಯ ಸಭೆ

ಕರುನಾಡು ಯುವಜನ ವೇದಿಕೆಯ ಸಾಮಾನ್ಯ ಸಭೆ

ಕರುನಾಡು ಯುವಜನ ವೇದಿಕೆಯ ಸಾಮಾನ್ಯ ಸಭೆ

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರುನಾಡು ಯುವಜನ ವೇದಿಕೆಯ ರಾಜ್ಯಧ್ಯಕ್ಷರಾದ ಟಿ.ಸಿ.ಶ್ರೀನಿವಾಸ್ ರವರ ಆದೇಶದಂತೆ ಹಾಗೂ ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್ ರವರ ಮಾರ್ಗದರ್ಶನದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ಜಿಲ್ಲಾಧ್ಯಕ್ಷರಾದ ಎಸ್.ರವಿ, ತಾಲ್ಲೂಕು ಅಧ್ಯಕ್ಷರಾದ ಯುವರಾಜ್ ರವರ ನೇತೃತ್ವದಲ್ಲಿ ಸಾಮಾನ್ಯ ಸಭೆಯನ್ನು ನೆಡೆಸಲಾಗಿತು. ತಾಲೂಕಿನ ಸಾರ್ವಜನಿಕರು ಸಂಘಟನೆಗೆ ಮನವಿ ಮೂಲಕ ತಮ್ಮ ಸಮಸ್ಯೆಗಳನ್ನು ತಿಳಿಸಿದರೇ ಕಾನೂನು ಚೌಕಟ್ಟಿನಲ್ಲಿ ಇದ್ದರೆ ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಜೊತೆ ಚರ್ಚಿಸಿ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಂಘಟನೆಯ ಆಗು-ಹೋಗುಗಳ ಬಗ್ಗೆ ಜಿಲ್ಲಾಧ್ಯಕ್ಷರಾದ ಎಸ್.ರವಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಲೋಕೇಶ್.ವಿ, ರಾಜ್ಯ ಮಾಧ್ಯಮ ಸಲಹೆಗಾರರಾದ ಪ್ರತಾಪ್, ಜಿಲ್ಲಾ ಗೌರವಾಧ್ಯಕ್ಷರಾದ ಕೆಬಿಸಿ ಮಂಜುನಾಥ್,ಜಿಲ್ಲಾಧ್ಯಕ್ಷರು ಎಸ್.ರವಿ,ಜಿಲ್ಲಾ ಉಪಾಧ್ಯಕ್ಷರಾದ ಮಂಜುನಾಥ್.ಹೆಚ್.ಕೆ, ಜಿಲ್ಲಾ ಉಪಾಧ್ಯಕ್ಷರಾದ ಜಿ.ಪಿ.ರಾಜು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷರಾದ ಯುವರಾಜ್, ಸಂಘಟನಾ ಕಾರ್ಯದರ್ಶಿ ದಿನೇಶ್, ಸುಂದರೇಶ್, ಪ್ರಮೋದ್, ಹರೀಶ್, ವಿನೋದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.