ಕಲ್ಪುರ ಹಾಲು  ಉತ್ಪಾದಕರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ   

Sep 5, 2025 - 10:52
 0  8
ಕಲ್ಪುರ ಹಾಲು  ಉತ್ಪಾದಕರ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ   

ಚಾಮರಾಜನಗರ: ತಾಲೋಕಿನ ಕಲ್ಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮಿತ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದಲ್ಲಿ ಆಯೋಜನೆ ಮಾಡಲಾಯಿತು.

 ಈ ವೇಳೆಯಲ್ಲಿಕುದೇರು ಚಾಮುಲ್  ನಿರ್ದೇಶಕ ಸದಾಶಿವಮೂರ್ತಿ ಮಾತನಾಡಿ  ಹಾಲು ಒಕ್ಕೂಟದಲ್ಲಿ ಬರುವಂತಹ ಸೌಲಭ್ಯಗಳನ್ನ ಸದುಪಯೋಗ ಪಡಿಸಿಕೊಳ್ಳುವಲ್ಲಿ ರೈತರು ಮುಂದಾಗಬೇಕು ಎಂದು ಸಲಹೆ ನೀಡಿದರು.

 ಜಂತುಹುಳುಗಳಿಗೆ ನೀಡುವ ಔಷಧಿಗಳನ್ನು ಸಬ್ಸಿಡಿ ದರದಲ್ಲಿ ಹಾಲು ಚಾಮರಾಜನಗರ ಹಾಲು ಒಕ್ಕೂಟದಿಂದ ನೀಡಿ ಹಾಲಿನ ಏರಿಕೆ ಹಾಗೂ ಗುಣ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕು ಎಂದರು. 

ಪ್ರತಿವರ್ಷ ಜೋಳ ನೀಡುವುದರ ಮುಕಾಂತರ ಮೇವಿನ ಕೊರತೆ ನಿಗಿಸುವಲ್ಲಿ ಒಕ್ಕೂಟ ರೈತರ  ಬೆನ್ನೆಲುಬಾಗಿ ನಿಂತಿದೆ ಎಂದರು. ತಮಿಳುನಾಡಿಗೆ 11 ಸಾವಿರ ಸೇರಿದಂತೆ ಕೇರಳ ರಾಜ್ಯಕ್ಕೆ 25 ಸಾವಿರ ನಂದಿನಿ ಹಾಲು ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು ಎಂದರು.

 ರೈತರು ನೀಡುವ ಗುಣ ಮಟ್ಟದ  ಹಾಲಿನ ಉತ್ಪಾದನೆಯಿಂದ ಒಕ್ಕೂಟದ ಅಭಿವೃದ್ಧಿಯಾಗುತ್ತದೆ ಎಂದರು. 

ಈ ಸಂದರ್ಭದಲ್ಲಿ ಚಾಮುಲ್ ನಿರ್ದೇಶಕ ಎಚ್ ಎಸ್ ಬಸವರಾಜ್, ಕಲ್ಪುರ ಹಾಲು ಒಕ್ಕೂಟದ ಅಧ್ಯಕ್ಷ ನಾಗಪ್ಪ, ಉಪಾಧ್ಯಕ್ಷ ಮಹದೇವ್ ಶೆಟ್ಟಿ, ಚಾಮುಲ್ ಸಹಾಯಕ ವ್ಯವಸ್ಥಾಪಕ ಡಾ ಅಮರ್, ವಿಸ್ತರಣಾಧಿಕಾರಿ ನಾಗೇಶ್,  ನಿರ್ದೇಶಕರಾದ ಬಸವಣ್ಣ, ಗುರುಸ್ವಾಮಪ್ಪ, ಚಿನ್ನಸ್ವಾಮಿ, ಮಹದೇವಪ್ಪ , ನಾಗೇಶ್, ಮರಿಸ್ವಾಮಿ, ಕಮಲಮ್ಮ, ನಾಗಮ್ಮ ಹಾಗೂ ಮುಖ್ಯ ಕಾರ್ಯನಿರ್ವಾಹಕ ಬಿ ಸ್ವಾಮಿ, ಸಿಬ್ಬಂದಿಗಳಾದ ಕೆಂಪಣ್ಣ, ಶಿವ ಸ್ವಾಮಿ, ಲೋಕೇಶ್,ಉಮೇಶ್ ಹಾಗೂ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು, ರೈತರು ಹಾಜರಿದ್ದರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0