ಥಗ್ ಲೈಫ್ ಚಿತ್ರ ತಿರಸ್ಕರಿಸುವಂತೆ ಜನತೆಗೆ ತೇಜಸ್ವಿ ಮನವಿ

ಮೈಸೂರು: ಕನ್ನಡ ಭಾಷೆ ಬಗ್ಗೆ ಅಪಮಾನ ಮಾಡಿದ ತಮಿಳು ನಟ ಕಮಲ್ ಹಾಸನ್ ಅವರ ಥಗ್ ಲೈಫ್ ಚಿತ್ರವನ್ನು ಜನತೆ ಧಿಕ್ಕರಿಸಬೇಕು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಕೋರಿದ್ದಾರೆ
ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ರಾಜ್ಯದಲ್ಲಿ ಥಗ್ ಲೈಫ್ ಚಿತ್ರ ಬಿಡುಗಡೆ ಆಗುತ್ತಿದೆ.
ಕಮಲ್ ಹಾಸನ್ ನಟಿಸಿ ನಿರ್ಮಿಸಿರುವ ಥಗ್ ಲೈಫ್ ಸಿನಿಮಾವನ್ನು ರಾಜ್ಯದ ಜನತೆ ವಿಕ್ಷಿಸ ಬಾರದು ಎಂದು ತೇಜಸ್ವಿ ಮನವಿ ಮಾಡಿದ್ದಾರೆ.
ಕನ್ನಡ ಭಾಷೆ ವಿಚಾರದಲ್ಲಿ ಮಾತನಾಡಿ ಕನ್ನಡಿಗರ, ಕನ್ನಡ ಪರ ಸಂಘಟನೆಗಳ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿದ್ದರೂ ಕನ್ನಡಿಗರ ಕ್ಷಮೆಯಾಚನೆ ಮಾಡದೆ ಕಮಲ್ ಹಾಸನ್ ಉದ್ಧಟತನ ತೋರಿದ್ದಾರೆ.
ಚಿತ್ರದ ಬಿಡುಗಡೆಗಾಗಿ ಹೈ ಕೋರ್ಟ್ ಮೊರೆ ಹೋಗಿದ್ದ ಕಮಲ್ ಹಾಸನ್ ಹೈ ಕೋರ್ಟ್ ನ ನ್ಯಾಯಾಧೀಶ ರಿಂದಲೂ ಕೂಡ ಛೀಮಾರಿ ಹಾಕಿಸಿ ಕೊಂಡಿದ್ದರು.
ಈಗ ಸುಪ್ರೀಂ ಕೋರ್ಟ್ ಆದೇಶದಂತೆ ಕರ್ನಾಟಕ ರಾಜ್ಯದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಯಾಗುತ್ತಿದೆ.
ಈಗಾಗಲೇ ತಮಿಳುನಾಡಿನಲ್ಲಿ ಬಿಡುಗಡೆ ಆಗಿರುವ ಥಗ್ ಲೈಫ್ ಸಿನಿಮಾವನ್ನು ತಮಿಳು ನಾಡಿನ ಜನತೆ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.
ಕರ್ನಾಟಕ ರಾಜ್ಯ ಹೊರತು ಪಡಿಸಿ ದೇಶದಾದ್ಯಂತ ಬಿಡುಗಡೆ ಆಗಿರುವ ಥಗ್ ಲೈಫ್ ಸಿನಿಮಾ ಸಂಪೂರ್ಣ ನೆಲಕಚ್ಚಿದೆ ಎಂದು ತೇಜಸ್ವಿ ನಾಗಲಿಂಗಸ್ವಾಮಿ ತಿಳಿಸಿದ್ದಾರೆ.
ಆದ ಕಾರಣ ಕನ್ನಡ ಭಾಷೆಗೆ ಕನ್ನಡಿಗರಿಗೆ ಅಪಮಾನ ಮಾಡಿರುವ ಕಮಲ್ ಹಾಸನ್ ರ ಚಲನಚಿತ್ರ ವನ್ನು ರಾಜ್ಯದ ಜನತೆ ತಿರಸ್ಕರಿಸಬೇಕು ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ.
What's Your Reaction?






