ಅಕ್ಷರ ದಾಸೋಹ ಬಿಸಿ ಊಟದಲ್ಲಿ ಹುಳು: ಶಿಕ್ಷಕರನ್ನ ತರಾಟೆಗೆ ತಗೆದುಕೊಂಡು ಗ್ರಾಮಸ್ಥರು
ಮೈಸೂರು: ನಂಜನಗೂಡು ತಾಲೋಕಿನ ಚಿಕ್ಕ ಹೊಮ್ಮಾಹಾಗೂ ದೊಡ್ಡ ಹೊಮ್ಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳ ಊಟದ ಅಕ್ಕಿಯಲ್ಲಿ ಹುಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಾಲೆ ಮುಖ್ಯ ಶಿಕ್ಷಕರನ್ನು ಹಿಗ್ಗಾ ಮೊಗ್ಗಾ ತರಾಟೆಗೆ ತಗೆದುಕೊಂಡ ಪೋಷಕರು ಹಾಗೂ ಗ್ರಾಮದ ಸಾರ್ವಜನಿಕರು.
ಎರಡು ಗ್ರಾಮಕ್ಕೆ ಒಂದೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಿಸಿ ಊಟದಲ್ಲಿ ಹುಳು ಬಿದ್ದಿರುವ ಅಕ್ಕಿಯನ್ನೇ ಅಡುಗೆ ಮಾಡಿ ನೀಡುವುದು ಖಂಡನೀಯ ಎಂದು ಅಲ್ಲಿನ ಗ್ರಾ ಪಂ ಸದಸ್ಯರು ಹಾಗೂ ಗ್ರಾಮಸ್ಥರು ಆರೋಪ ಮಾಡಿದ್ದಾರೆ
ಈ ವಿಚಾರದ ಆಡಳಿತ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷರ ಗಮನಕ್ಕೆ ಬಾರದೆ ಹುಳು ಬಿದ್ದಿರುವ ಅಕ್ಕಿಯನ್ನೇ ಅಡುಗೆ ಮಾಡಿ ಮಕ್ಕಳಿಗೆ ನೀಡುವುದು ದುರಂತ ಅಲ್ಲವೇ ಎಂದು ಶಾಲೆ ಆಡಳಿತ ಮಂಡಳಿ ಅಧ್ಯಕ್ಷರು ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯಲ್ಲಿ ಅಕ್ಕಿ ದಾಸ್ತಾನು ಇದ್ದರೂ, ನಮಗೆ ಸರ್ಕಾರದಿಂದ ಅಕ್ಕಿ ದಾಸ್ತಾನು ಬಂದಿಲ್ಲ ಎಂದು ಸುಳ್ಳು ಹೇಳಿ ಪಕ್ಕದ ದಾಸನೂರು ಗ್ರಾಮಕ್ಕೆ ಅಕ್ಕಿ ಮಾರಾಟ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.
ಕೂಡಲೇ ಸಂಬಂಧ ಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯ ಕ್ರಮ ಜರುಗಿಸಬೇಕೆಂದು ಎಂದು ಒತ್ತಾಯ ಮಾಡಿದ್ದಾರೆ.
ಈ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಹಾಗೂ ಪೋಷಕರು ಸೇರಿದಂತೆ ಗ್ರಾ ಪಂ ಸದಸ್ಯರು ಇದ್ದರು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
