ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Feb 8, 2024 - 11:44
 0  4
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ
ಸ್ವಾಮಿ ವಿದ್ಯಾಸಂಸ್ಥೆ ಜೆ.ಪಿ ಸ್ಮಾರಕ ಸ್ವತಂತ್ರ ಪದವಿ ಪೂರ್ವ ಕಾಲೇಜು. 2023-24 ನೇ ಸಾಲಿನ ಸಮಾರೋಪ ಸಮಾರಂಭ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ. 

 ಜೆ.ಪಿ ಎಮ್. ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಿತು ನಡೆಯಿತು. ಚನ್ನಪಟ್ಟಣ ಸಮೀಪದ ಕೋಡಂಬಳ್ಳಿ ಗ್ರಾಮದ ಯೋಗ ಶಿಕ್ಷಕರ ತರಬೇತಿ ಕೆಎಂ ಶಿವಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿವೃತ್ತ ಪ್ರಾಂಶುಪಾಲರಾದ ಪುಟ್ಟಸ್ವಾಮಿ ರವರು ಮಾತನಾಡಿ. ಕಾಲೇಜಿನ ವಿದ್ಯಾರ್ಥಿಗಳು ಶಿಸ್ತು ಕಲಿಯಬೇಕು. ಒಳ್ಳೆಯ ಅಭ್ಯಾಸ ಮಾಡಿ. ಉನ್ನತ ಸ್ಥಾನಕ್ಕೆ ಹೋಗಬೇಕು. ವಿದ್ಯಾರ್ಥಿ ಜೀವನ ಮುಗಿದ ನಂತರ. ನೀವು ಯಾವುದೇ ಹುದ್ದೆಯಲ್ಲಿರಿ ನಾವು ಎದುರಿಗೆ ಸಿಕ್ಕಾಗ ಗುರುಗಳೇ ನಮಸ್ತೆ ಎಂದರೆ ಅದೇ ನಮಗೆ ನೀಡುವ ಗೌರವ. ನಿಮ್ಮ ತಂದೆ ತಾಯಿಯರ ಆಸೆ ನಮ್ಮ ಮಕ್ಕಳು ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗಬೇಕು ಎಂದು. ನಿಮ್ಮ ಮುಂದಿನ ಜೀವನ ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಒಳ್ಳೆಯ ಅಂಕ ಪಡೆದು ನಮ್ಮ ಕಾಲೇಜಿಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ತಿಳಿಸಿದರು. ಜೆಪಿಎಂ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ದೇವೇಗೌಡ ಮಾತನಾಡಿ. ನನ್ನ ವಿದ್ಯಾಭ್ಯಾಸ ಮುಗಿದ ನಂತರ ಹಲಗೂರಿನಲ್ಲಿ ಒಂದು ಕಾಲೇಜ್ ತೆರೆಯಬೇಕು ಎಂದು ನನ್ನ ಭಾವನೆಯಲ್ಲಿ ಕಂಡು. ನನಗೆ ಕೆಲಸ ಸಿಕ್ಕರೂ ಸಹ ನಾನು ಹೋಗಲಿಲ್ಲ. ನನಗೆ ನೆನಪಾಗುತ್ತದೆ ಕನಕಪುರ ರೂರಲ್ ಕಾಲೇಜ್ ವಿದ್ಯಾ ಸಂಸ್ಥೆಯ ಕರಿಯಪ್ಪನವರ ಮಾರ್ಗದಲ್ಲಿ ನಡೆಯಬೇಕು ಎಂದು ಭಾವಿಸಿ. ಸುಮಾರು 35 ವರ್ಷಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರವರು ಲೋಕೋಪಯೋಗಿ ಸಚಿವರಾಗಿದ್ದರು ಅವರನ್ನು ಭೇಟಿ ಮಾಡಿ ಕೇವಲ ಒಂದೇ ವಾರದಲ್ಲಿ. ಕಾಲೇಜು ಸ್ಥಾಪಿಸಿ. ಮೊದಲ ವರ್ಷವೇ 65 ವಿದ್ಯಾರ್ಥಿಗಳು ಸೇರಿದರು. ನಮ್ಮ ಕಾಲೇಜು ಪ್ರಾರಂಭವಾದಕ್ಕೂ ಮೊದಲು ಚೆನ್ನಪಟ್ಟಣ. ಕನಕಪುರ ಮಳವಳ್ಳಿ. ಗೆ ಹೋಗಬೇಕಿತ್ತು. ಹಳ್ಳಿಗಾಡಿನಲ್ಲಿ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳಿಸಲು ಹಿಂಜರಿಯುತ್ತಿದ್ದರು. ನಮ್ಮ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿಗಳು ಎಷ್ಟೋ ಮಂದಿ ಒಳ್ಳೆಯ ಹುದ್ದೆಯಲ್ಲಿದ್ದಾರೆ ಎಂದು ತಿಳಿಸಿದರು. ನಂತರ ಯೋಗ ಶಿಕ್ಷಕರಾದ ಶಿವಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಶವ .ನಿವೃತ್ತ ಪ್ರಾಂಶುಪಾಲರದ ಸ್ವಾಮಿ. ಕಾಲೇಜಿನ ಪ್ರಾಂಶುಪಾಲರಾದ ಮೀನಾಕ್ಷಿ. ಚಂದ್ರು. ಸುಯಲ್. ಜಯಂತಿ. ಹಾಜರಿದ್ದರು.

What's Your Reaction?

like

dislike

love

funny

angry

sad

wow