ಬಿಜೆಪಿ-ಗೆ ಕೈ-ತೀರಿಗೇಟು-ಕಾಂಗ್ರೆಸ್ ಮುಖಂಡರಿಂದ ಎಚ್ಚರಿಕೆಯ ಗಂಟೆ

ಭಾಗ್ಯನಗರ: ರಾಜಕೀಯ ಮಾಡಿದರೆ ಆರೋಗ್ಯಕರವಾಗಿರಬೇಕು ಅಸಹ್ಯವಾಗಿರಬಾರದು ನಿಮ್ಮ ಸುಳ್ಳು ಆರೋಪಗಳಿಗೆ,ನಕಲಿ ದಾಖಲೆಗಳಿಗೆ,ಹೆದರಿಕೆ ಬೆದರಿಕೆಗಳಿಗೆ,ಭಯಪಡುವ ವ್ಯಕ್ತಿ ಶಾಸಕ ಎಸ್, ಎನ್, ಸುಬ್ಬಾರೆಡ್ಡಿ ಅವರಲ್ಲ,ಅವರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ,ನೀವು ಅಭಿವೃದ್ಧಿ ಬಗ್ಗೆ ಮಾತನಾಡಿ ಅದು ಬಿಟ್ಟು ಕುತಂತ್ರ ಮಾಡಲು ಹೊರಟರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಮೂಹವೆ ಶಾಸಕರ ಬೆನ್ನಿಗೆ ನಿಲ್ಲುತ್ತದೆ ಎಂದು ಬಿಜೆಪಿ ಮುಖಂಡರಿಗೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಸ್.ನರೇಂದ್ರ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀವು ಬೇರೆ ಕಡೆಯಿಂದ ಬಂದು ಈ ಕ್ಷೇತ್ರದ ಜನೆತೆಯಲ್ಲಿ ಅಶಾಂತಿ ಉಂಟು ಮಾಡಲು ಹೊರಟಿರುವ ನೀವು ಶಾಸರ ಬಗ್ಗೆ ಮಾತನಾಡ್ತೀರಾ ,ನಿಮ್ಮ ಆಟ ಬೂಟಾಟಿಕೆಗಳು ಮುಗಿದ ಅಧ್ಯಯವಾಗಿದೆ,ಚುನಾವಣಾ ಸಂದರ್ಭದಲ್ಲಿ ಅಪ್ಡಿವೇಟ್ ಹಿಡಿದು ದೇಶ-ವಿದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಕೋರ್ಟ್ ಮೆಟ್ಟಿಲೇರಿರೋದು ನೀವು ನಿಮ್ಮ ನಾಯಕರು,ಅದು ನಿಮಗೆ ಬಿಟ್ಟಿದ್ದು.
(ಇ ಡಿ) ಜಾರಿ ನಿರ್ದೇಶನಾಲಯ ತನಿಖಾ ತಂಡ ಇರೋವುದೇ ತನಿಖೆ ಮಾಡಲು, ಅವರು ಕೆಲಸ ಅವರು ಮಾಡುತ್ತಾರೆ ಅದನ್ನು ನೀವು ವೈಭೀಕರಿಸಿ ಮಾಧ್ಯಮಗಳ ಮುಂದೆ ಮಾತನಾಡುವಾಗ ಸ್ವಲ್ಪ ಸಭ್ಯತೆಯಿಂದ ಮಾತನಾಡಿದರೆ ಒಳ್ಳೆಯದು ಇಲ್ಲಿದಿದ್ದರೆ ಅದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡುವ ಮೂಲಕ ಬಿಜೆಪಿ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಕೆಡಿಪಿ ಸದಸ್ಯ ಪಿ.ಮಂಜುನಾಥ ರೆಡ್ಡಿ ಮಾತನಾಡಿ ಆಡಳಿತ ಸರ್ಕಾರಕ್ಕೆ ಎಷ್ಟು ಅಧಿಕಾರ ಮತ್ತು ಜವಾಬ್ದಾರಿ ಇರತ್ತೋ, ಅಷ್ಟೇ ಅಧಿಕಾರ ಮತ್ತು ಜವಾಬ್ದಾರಿ ವಿರೋಧಪಕ್ಷಕ್ಕೂ ಸಹ ಇರುತ್ತೆ ಅದನ್ನು ಮೊದಲು ನೀವು ಆರ್ಥಿಸಿಕೊಳ್ಳಬೇಕು,ಅದು ಹೊರತುಪಡಿಸಿ ತಮ್ಮ ಮನ ಬಂದಂತೆ ಮಾತನಾಡಿದರೆ ಅದು ನಿಮಗೆ ಶೋಭೆ ತರುವುದಿಲ್ಲ ಅದನ್ನು ಗಮನದಲ್ಲಿಟ್ಟು, ಬಾಯಿಗೆ ಬಂದಂತೆ ಮಾತನಾಡುವುದು ಬಿಟ್ಟು ನಾಗರಿಕತೆಯಿಂದ ಮಾತನಾಡಿ ಜನ ನೋಡುತ್ತಿರುತ್ತಾರೆ ಅವರೇ ಅದಕ್ಕೆ ಉತ್ತರ ನೀಡುತ್ತಾರೆ ಮುಂದಿನ ದಿನಗಳಲ್ಲಿ ಮಲಬದ್ದನಂತೆ ಮಾತಾಡಿದರೆ ಅದರ ಪರಿಣಾಮ ಏನು ಎಂದು ಕಾಲವೇ ತೀರ್ಮಾನಿಸುತ್ತದೆ ಎಂದು ಬಿಜೆಪಿ ಮುಖಂಡರಿಗೆ ಟಾಂಗ್ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್,ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಪೋತುಶ್ರೀನಿವಾಸ್ ರೆಡ್ಡಿ,ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಡಾ! ಎ.ವಿ.ಪೂಜಪ್ಪ,ಮಾಜಿ ಸದಸ್ಯ ಬೂರಗಮಡಗು ನರಸಿಂಹಪ್ಪ,ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ಎಸ್. ರಮೇಶ್ ಬಾಬು,ಕೆ.ಆರ್. ನರೇಂದ್ರ,ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ, ಮಂಜುನಾಥ್,ಪುರಸಭೆ ಸದಸ್ಯ,ಎ.ನಂಜುಂಡಪ್ಪ,ಕಾಂಗ್ರೆಸ್ ಮುಖಂಡರಾದ ಸೋಮು, ಮನ್ಸೂರ್, ವೆಂಕಟೇಶ್ ಸೇರಿದಂತೆ ಮತ್ತಿತರರು ಇದ್ದರು...
What's Your Reaction?






