ರಸ್ತೆ ಸುರಕ್ಷತಾ ಸಪ್ತಾಹದ ಜಾಗೃತಿ ಕಾರ್ಯಕ್ರಮ

ರಸ್ತೆ ಸುರಕ್ಷತಾ ಸಪ್ತಾಹದ ಜಾಗೃತಿ ಕಾರ್ಯಕ್ರಮ

ರಸ್ತೆ ಸುರಕ್ಷತಾ ಸಪ್ತಾಹದ ಜಾಗೃತಿ ಕಾರ್ಯಕ್ರಮ

ಕೆಜಿಎಫ್ : ಕೆ.ಜಿ.ಎಫ್ ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಜಾಗೃತಿ ಮೂಡಿಸಲು ಬೃಹತ್ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೆಜಿಎಫ್ ಪೊಲೀಸ್ ಜಿಲ್ಲೆಯ 2024ನೇ ಸಾಲಿನ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಅಂಗವಾಗಿ, ಕೆಜಿಎಫ್ ನಗರ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮೀಣ ಪ್ರದೇಶಗಳಲ್ಲಿನ ಶಾಲಾ, ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ರಸ್ತೆ ಸುರಕ್ಷತೆಯ ಕುರಿತು ಜನಜಾಗೃತಿ ಕಾರ್ಯಕ್ರಮಗಳು ನಡೆಯಿತು. ಕೆಜಿಎಫ್‌ನ ಗೋಣಮಾಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪಿಎಸ್‌ಐ ಬಿ.ಮಂಜುನಾಥ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. ಸುಗಮ ಸಂಚಾರ, ರಸ್ತೆ ಸುರಕ್ಷತೆ, ಅಪಘಾತಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪ್ರಸ್ತುತ ಅಪಘಾತಗಳನ್ನು ತಡೆಗಟ್ಟಲು ಸಾರ್ವಜನಿಕರು ಮುನ್ನೆಚ್ಚರಿಕೆಯ ಮೂಲಕ ಸಹಕಾರ ನೀಡುವುದು ಅತ್ಯವಶ್ಯಕವಾಗಿದೆಯೆಂದರು. ಸಂಚಾರಿ ನಿಯಮಗಳನ್ನು ಪಾಲಿಸಲು ಈಗಿನ ಯುವಜನತೆಯು ಬಹಳಷ್ಟು ಸಹಕಾರ ನೀಡಬೇಕು, ಅದರಲ್ಲೂ ವಿದ್ಯಾರ್ಥಿಗಳು ತಪ್ಪದೇ ಸಂಚಾರಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವಂತೆ ಕರೆ ನೀಡಿದರು. ನಂತರ ಆಂಡ್ರಸನ್‌ಪೇಟೆ, ಬಸ್‌ನಿಲ್ದಾಣ, ಆಟೋ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮದಲ್ಲಿಯೂ ಪಿಎಸ್‌ಐ ಮಂಜುನಾಥ ಅವರು ಮಾತನಾಡಿ, ಜಾಗೃತಿ ಮೂಡಿಸಿದರು. ಉರಿಗಾಂ ಪೊಲೀಸ್ ಠಾಣೆಯ ಗಣಿಗಾರಿಕೆ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆಯ ಕುರಿತು ಪಿಎಸ್‌ಐ ಗುರುರಾಜ ಚಿಂತಕಲ್ ಅವರು ಮಾತನಾಡಿ, ರಸ್ತೆ ಸುರಕ್ಷತೆಯು ಬಹಳ ಮುಖ್ಯವಾಗಿದ್ದು, ಅದು ಜೀವಗಳನ್ನು ಉಳಿಸುತ್ತದೆ, ರಸ್ತೆ ನಿಯಮಗಳ ಅನುಸರಣೆ ಮತ್ತು ಎಚ್ಚರಿಕೆಯು ಅಪಘಾತಗಳನ್ನು ತಡೆಯುತ್ತದೆ ಮತ್ತು ಪ್ರತಿಯೊಬ್ಬರನ್ನು ಸುರಕ್ಷತವಾಗಿರಿಸುತ್ತದೆ. ರಸ್ತೆಯಲ್ಲಿ ನಮ್ಮನ್ನು ಮತ್ತು ಇತರರನ್ನು ರಕ್ಷಿಸಿಕೊಳ್ಳಲು ಸುರಕ್ಷತಾ ನಿಯಮಗಳ ಪಾಲನೆ ಅತ್ಯಗತ್ಯವೆಂದರು. ಬೆಮೆಲ್‌ನಗರ ಪಿಎಸ್‌ಐ ವಿದ್ಯಾಶ್ರೀ ಅವರು ಆಲದಮರದ ಬಳಿ ಆಟೋ ಚಾಲಕರುಗಳನ್ನು ಮಾತನಾಡಿ, ರಸ್ತೆ ಸುರಕ್ಷತೆ ನಿಯಮಗಳನ್ನು ಅನುಸರಿಸಲು ಕರೆ ನೀಡಿದರು. ಆಟೋ ಚಾಲನೆ ಮಾಡುವಾಗ ಪೋನ್ ಬಳಕೆ ಮಾಡದಂತೆ, ಶಾಲಾ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕರೆದುಕೊಂಡೊಗದAತೆ ತಿಳಿ ಹೇಳಿದರು. ಕ್ಯಾಸಂಬಳ್ಳಿಯಲ್ಲಿ ಬೇತಮಂಗಲ ಸಿಪಿಐ ಸುರೇಶ್‌ರಾಜು, ಪಿಎಸ್‌ಐ ಶ್ಯಾಮಲಾ, ದೇವರಾಜ್ ಅವರುಗಳ ನೇತೃತ್ವದಲ್ಲಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಕ್ಯಾಸಂಬಳ್ಳಿ ಮುಖ್ಯರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ವಾಹನದಲ್ಲಿ ಸಂಚರಿಸಿದ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ನೀಡಿ, ರೋಸ್ ಹೂವನ್ನು ನೀಡಿ, ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಾಲನೆ ಮಾಡುವಂತೆ ಕರೆ ನೀಡಿದರು. ರಸ್ತೆ ಸುರಕ್ಷತೆಗಾಗಿ ಅತಿವೇಗ ಮತ್ತು ಕುಡಿದು ವಾಹನ ಚಲಾಯಿಸುವುದನ್ನು ತಪ್ಪಿಸಬೇಕು, ಪ್ರತಿಯೊಬ್ಬರೂ ಸಂಚಾರಿ ಸಿಗ್ನಲ್‌ಗಳನ್ನು ಗೌರವಿಸಬೇಕು ಮತ್ತು ರಸ್ತೆಯಲ್ಲಿ ಓಡಾಡುವವರನ್ನು ಪರಿಗಣಿಸಿ, ವಾಹನಗಳ ಚಾಲನೆ ಮಾಡುವಂತೆ ಕರೆ ನೀಡಿದರು. ಬಂಗಾರಪೇಟೆ ಪಟ್ಟಣದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಪೊಲೀಸ್ ಸಬ್‌ಇನ್ಸ್ಪೆಕ್ಟರ್ ಎಸ್.ವಿ.ರಾಜಣ್ಣ ಮತ್ತಿತರರು ಸಂಚಾರಿ ನಿಯಮಗಳ
ಪಾಲನೆಯ ಕುರಿತು ಜನಜಾಗೃತಿಯನ್ನು ಮೂಡಿಸಿದರು. ಸಂಚಾರಿ ನಿಯಮಗಳ ಪಾಲಿಸಿ, ಅಮೂಲ್ಯ ಜೀವಗಳನ್ನು ಉಳಿಸಬೇಕೆಂದು ಕರೆ ನೀಡಿದರು. ಶಾಲಾ, ಕಾಲೇಜು ಭೋಧಕರು, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಪೊಲೀಸ್ ಅಧಿಕಾರಿಗಳು, ನಾಗರೀಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.ಆಟೋ   ನಿಲ್ದಾಣ, ಬಸ್‌ನಿಲ್ದಾಣ, ವೃತ್ತಗಳು, ಮಾರುಕಟ್ಟೆಯ ಜನಸಂದಣಿಯ ಸಾರ್ವಜನಿಕ ಸ್ಥಳಗಳಲ್ಲಿ ಜನಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಯಿತು.