ರಾಜ್ಯ ಪೋಲಿಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿ: ತೇಜಸ್ವಿ

Sep 20, 2025 - 16:32
 0  5
ರಾಜ್ಯ ಪೋಲಿಸ್ ದೂರು ಪ್ರಾಧಿಕಾರಕ್ಕೆ ದೂರು ನೀಡಿ: ತೇಜಸ್ವಿ

ಮೈಸೂರು: ರಾಜ್ಯದಲ್ಲಿನ ಪೋಲಿಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಕರ್ತವ್ಯ ಲೋಪ, ದುರ್ನಡತೆ, ಅವಾಚ್ಯ ಶಬ್ದ ಗಳಿಂದ ನಿಂದನೆ, ಹಲ್ಲೆ, ದೌರ್ಜನ್ಯ, ಬೆದರಿಕೆ, ಅಕ್ರಮ ಬಂಧನ ಇಂತವು ಕಂಡುಬಂದಲ್ಲಿ ಕರ್ನಾಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸ ಬಹುದಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ತಿಳಿಸಿದ್ದಾರೆ.

ಹೀಗೆಲ್ಲ ಅನ್ಯಾಯಕ್ಕೆ ಒಳಗಾದವರು ಭಯಪಡದೆ ನಿರ್ಭೀತಿಯಿಂದ ಕರ್ನಾಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರಕ್ಕೆ ದೂರು ಸಲ್ಲಿಸ ಬಹುದಾಗಿದೆ ಎಂದು ಅವರು ಸಲಹೆ ನೀಡಿದ್ದರೆ ದೂರುಗಳನ್ನು ಇದ್ದರೆ ಕರ್ನಾಟಕ ರಾಜ್ಯ ಪೋಲಿಸ್ ದೂರುಗಳ ಪ್ರಾಧಿಕಾರ ೩ನೇ ಮಹಡಿ ವಿಶ್ವೇಶ್ವರಯ್ಯ ಮುಖ್ಯ ಗೋಪುರ ಡಾ|| ಅಂಬೇಡ್ಕರ್ ವೀಧಿ, ಬೆಂಗಳೂರು ೫೬೦೦೦೧ ಕಳಿಸುವ ಮೂಲಕ ಅಥವಾ ಕಛೇರಿಗೆ ಖುದ್ದಾಗಿ ಅಥವಾ ಕಛೇರಿಯ ಈಮೇಲ್ ವಿಳಾಸ sspco@karnataka.gov.in ಕ್ಕೆ ಸಲ್ಲಿಸಬಹುದಾಗಿದೆ ಎಂದು ತೇಜಸ್ವಿ ತಿಳಿಸಿದ್ದಾರೆ.

ಪ್ರಕರಣ ಸ್ಥಿತಿಗತಿಗಳ ಬಗ್ಗೆ ತಿಳಿಯಲು ಕಚೇರಿಯ ದೂರವಾಣಿ ಸಂಖ್ಯೆ ೦೮೨೨೮೬೮೩೦೨, ೦೮೦೨೨೮೬೮೩೦೩, ಗಳಿಗೆ ಕರೆಮಾಡಿ ತಿಳಿಯಬಹುದಾಗಿದೆ. ಯಾವುದೇ ಭಯವಿಲ್ಲದೆ ಪೋಲಿಸರಿಂದ ಅನ್ಯಾಯಕ್ಕೆ ಒಳಗಾದವರು ಪೋಲಿಸ್ ದೂರುಗಳ ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ಪಡೆಯಬಹುದಾಗಿದೆ ಎಂದು ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0