ರೈತ ಬದಕು ಮರೆತಿದ್ದೆ ನಗ್ನ ಸತ್ಯ..

ರೈತ ಬದಕು ಮರೆತಿದ್ದೆ ನಗ್ನ ಸತ್ಯ..

ವ್ಯವಸಾಯ ವ್ಯವಸಾಯ ವ್ಯವಸಾಯ.......
ಮನೆಮಕ್ಕಳೆಲ್ಲರ ಸಹಾಯ ಇದ್ದರೆ ಸಾಧ್ಯವಷ್ಟೇ ವ್ಯವಸಾಯ.
ಅದಕ್ಕೆ ಇದನ್ನು ಆರಂಭ ಎಂದು ಕರೆಯುತ್ತಾರೆ, ನೀವು ಎಷ್ಟುಕಾಲ ದುಡಿದರೂ ಅಂತ್ಯ ಎನ್ನುವುದೇ ಇಲ್ಲ.
ಕಾಯಕವೇ ಕೈಲಾಸ ಅಂತಾರೆ ಕೆಲವೊಮ್ಮೆ ಹೊಟ್ಟೆ ತುಂಬಾ ಅನ್ನ ಮಾತ್ರ ಸಿಗ್ತದೆ, ಹಾಕಿದ ಬಂಡವಾಳ ಸಾಲಗಾರರಿಗೆ ಮನೆ ಹಾದಿ ತೋರುತ್ತದೆ.

ಏನೇ ಇರ್ಲಿ ರೈತ ಒಬ್ಬ ತ್ಯಾಗಿ, ಅವನೊಬ್ಬ ತಪಸ್ವಿ, ಅವನೊಬ್ಬ ಯೋಗಿ . ಹಣ ಬರಲಿ / ಬರದಿರಲಿ ಕೊನೆಯವರೆಗೂ ಅದೇ ತನ್ನ ವೃತ್ತಿ ಎಂದು ನಿತ್ಯ ನಿರಂತರ ದುಡಿಯುವ ಯೋಗಿ. ರೈತ ಕುಟುಂಬಗಳ ತಾಳ್ಮೆಗೆ ಸಹನೆಗೆ ಹಾಗು ಅವರ ಅವಿರತ ಪರಿಶ್ರಮಕ್ಕೆ  ಕೋಟಿ ನಮನಗಳು.

ಅಸಲಿ ವಿಷಯ ಏನಪ್ಪಾ ಅಂದ್ರೆ..
ದುಡಿಯಲು ರೈತಾಪಿ ವರ್ಗ ಇದೆ.
ಫಸಲು ಕೊಡಲು ಭೂತಾಯಿ ಇದ್ದಾಳೆ.
ಆಗಾಗ ಮಳೆರಾಯ ಕೈ ಕೊಡುತ್ತಾನೆ.

ಆಳುವ ಸರ್ಕಾರಗಳು ಯಾಕೆ ರೈತರ ಬದುಕಿಗೆ ಒಂದು ಉತ್ತಮ ಹಾದಿ ರೂಪಿಸಬಾರದು.
ಜಗತ್ತಿಗೆ ಜನಸಂಖ್ಯೆಯಲ್ಲಿ ಮುಂದೆ ನಿಲ್ಲುವ ದೇಶ ಆಹಾರೋತ್ಪನ್ನಗಳಿಗೆ ನೆರೆ ದೇಶಗಳ ಕಡೆ ನೋಡಿದರೆ.
ಭಾರತ ವೇಗದ ಜಗತ್ತಿನಲ್ಲಿ ಮುನ್ನುಗ್ಗಲು ಸಾದ್ಯವೇ...

ಪ್ರಪಂಚದ ಬಹು ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ದೇಶದಲ್ಲಿಗ ಚುನಾವಣ ಸಂಭ್ರಮ..
ಆದರೆ ಯಾರೊಬ್ಬರ ಬಾಯಲ್ಲೂ ರೈತ ಬದುಕಿನ ಬೇಗುದಿಗೆ ನಾಂದಿ ಹಾಡುವ ಯೋಜನೆಗಳು ಹೊರಬರುತ್ತಿಲ್ಲವಲ್ಲ.

ಬರಿದಾಗಿಹ ರೈತನ ಬದುಕು ಹಸಿರಾಗಿಸಿ ????
ಆಸೆ ಅಮಿಷಗಳ ತೋರಿ ಯಾಮಾರಿಸಿ ಬದುಕಿನ ಸಂಕೋಲೆಗಳಲ್ಲಿ ಕೊಲ್ಲದಿರಿ.