ಪವಾಡ ಪುರುಷ ಶ್ರೀಗುರುಮರುಳಸಿದ್ಧೇಶ್ವರಸ್ವಾಮಿಯ ಜಾತ್ರಮಹೋತ್ಸವ

ಪವಾಡ ಪುರುಷ ಶ್ರೀಗುರುಮರುಳಸಿದ್ಧೇಶ್ವರಸ್ವಾಮಿಯ ಜಾತ್ರಮಹೋತ್ಸವ

ಚಿಕ್ಕನಾಯಕನಹಳ್ಳಿ.ದಬ್ಬೇಘಟ್ಟ ಮಜರೆ ಕಲ್ಲೇನಹಳ್ಳಿಯ ಪವಾಡ ಪುರುಷ ಶ್ರೀಗುರುಮರುಳಸಿದ್ಧೇಶ್ವರಸ್ವಾಮಿಯ ಜಾತ್ರಮಹೋತ್ಸವವು ವಿಜೃಂಭಣೆಯಿಂದ ನೆಡೆಯಲಿದೆ. ಈ ತಿಂಗಳು ಏ.12ರಂದು ಶುಕ್ರವಾರ ಧ್ವಜರೋಹಣ ನೆರವೇರಿತು.ಏ.14ಹಾಗು 13ರಂದು ದೇವರ ಉತ್ಸವ ನೆಡೆಯಿತು ಏ.15 ಸೋಮವಾರರಂದು ಆರತಿ ಸೇವೆ ನೆಡೆಯಲಿದೆ ಏ.16 ಮಂಗಳವಾರ ಮದ್ಯಾಹ್ನ 1ಗಂಟೆಗೆ ಗಂಗಾಸ್ನಾನದೊಂದಿಗೆ ಅಗ್ನಿಕೊಂಡೋತ್ಸವವ ನೆಡೆಯುತ್ತದೆ ನಂತರ ಮಹಾ ಅನ್ನದಾಸೋಹ ನೆಡೆಯಲಿದೆ.ಏ.17ರಂದು ಬೆಳಿಗ್ಗೆ ಉತ್ಸವ ನೆಡೆಯಲಿದೆ. ಚರಿತ್ರೆ:ಕುಪ್ಪೂರು ಗದ್ದಿಗೆಯಲ್ಲಿ ಜೀವಸಮಾದಿ ಹೊಂದಿರುವ ಮರುಳಸಿದ್ಧರು ಚಿಕ್ಕಮಗಳೂರು ಜಿಲ್ಲೆಯ ಪಂಚನಹಳ್ಳಿ ಬಳಿ ಇರುವ ನಿಡುವಳ್ಳಿಯಲ್ಲಿ ಜನಿಸಿ ಗುರು ಧೀಕ್ಷೆಪಡೆದು ಹಿರೆಕಲ್ಲು ಬೆಟ್ಟದಲ್ಲಿ ಸಿದ್ಧೇಶ್ವರನ ಸನ್ನಿದಿಯಲ್ಲಿ ಉಗ್ರ ಸಪಸ್ಸನ್ನಮಾಡಿ  ಬಾಳೇಹೊನ್ನೂರಿನ ರಂಭಾಪುರಿಪೀಠˌಶ್ರೀ ಶೈಲ.ಉಜ್ಜಯನಿˌಕಾಶಿˌಹಾಗು ಕೇದಾರ ಸೇರಿದಂತೆ ಪಂಚಪೀಠಗಳ ದರ್ಶನಮಾಡುವಾಗ ಆಂದ್ರದಲ್ಲಿ ತುಂಬಿಹರಿಯುತ್ತಿದ್ದ ನದಿಯೊಂದು ಮರುಳಸಿದ್ದರು ಸಂಚರಿಸುವಾಗ ತಮ್ಮ ಪವಾಡದಲ್ಲಿ ಎರಡು ಭಾಗವಾಗಿ ನದಿಯು ದಾರಿಬಿಟ್ಟಿತಂತೆ. ಶ್ರೀಶೈಲದ ಭ್ರಮರಾಂಭಿಕೆ ಮಲ್ಲಿಕಾರ್ಜುನಸ್ವಾಮಿಯನ್ನು ಕುರಿತು ತಪಸ್ಸುಮಾಡಿ ಅನ್ನಪೂರ್ಣೇಶ್ವರಿಯನ್ನು ಒಲಿಸಿಕೊಂಡು ಅನ್ನದಾನಿ ಮರುಳಸದ್ಧರಾದರು. ಲೋಕಸಂಚಾರ ಕೈಗೊಂಡು ಚಿಕ್ಕನಾಯಕನಹಳ್ಳಿ ಹತ್ತಿರ ಸಂಚಾರದಲ್ಲಿದ್ದ ಮರುಳಸಿದ್ದರನ್ನು ದಬ್ಬೇಘಟ್ಟದ ಗ್ರಾಮದ ಜನರು ಮೊರೆಯಿಟ್ಟು ಊರಿನಲ್ಲಿ ಜನರಿಗೆ ಹಿಂಸೆಕೊಟ್ಟು ಕಾಡುತ್ತಿರುವ ಮಾರಿಯಿಂದ ರಕ್ಷಿಸಬೇಕೆಂದು ಪ್ರಾರ್ಥಿಸಿದಾಗ ಮರುಳಸಿದ್ದರು ಪುರಪ್ರವೇಶಮಾಡಿದಾಗ ಮಾರಿಯು ಅಬ್ಬರಿಸಿ ಸುಂಟರಗಾಳಿಯಂತೆ ಬಂದು ನಿಂತಳಂತೆ. ಆಗ ಮರುಳಸಿದ್ಧರು ಮಾರಿಗೆ ಬುದ್ದಿಹೇಳಿ ಊರುಬಿಡುವಂತೆ ಅಪ್ಪಣೆ ಮಾಡಿದರು ಕೇಳದ ಮಾರಿಯು ಹಠಹಿಡಿದು ತನ್ನ ಕಣ್ಣಿಂದ ಕೆಂಡದ ಉಂಡೆಗಳನ್ನು ಬೀರಿದಳಂತೆ ಶಾಂತಮೂರ್ತಿಯಾಗಿದ್ದ ಮರುಳಸಿದ್ದರು ತಮ್ಮಕಣ್ಣುನ್ನುಕೆಂಪಾಗಿಸಿ ಕೆಂಡದ ಉಂಡೆಗಳನ್ನು ಅಗಿದು ನುಂಗಿದರಂತೆ ಈ ಪವಾಡವನ್ನ ಕಂಡ ಮಾರಿಯು ಶರಣಾಗಿ ಗ್ರಾಮವನ್ನು ತೊರೆದಳಂತೆ ಎನ್ನುವ ಕಥಾ ಸಂಗತಿಯನ್ನ ಸಾಹಿತಿ  ದಿವಂಗತ ಡಾ.ಸಾ.ಶಿ.ಮರುಳಯ್ಯರವರು ಮರುಸಿದ್ಧೇಶ್ವರರ ಪುರಾಣತರಿತ್ರೆಯ ಗ್ರಂಥದಲ್ಲಿ ಉಲ್ಲೇಖಿಸಿದ್ದಾರೆ.ಪ್ರತೀ ವರ್ಷ ಈ ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಹರಮುನಿದರು ಗುರುಕಾಯ್ವನು ಎಂಬ ಪ್ರತೀತಿಯಲ್ಲಿ ಕಷ್ಟ ಸಮಸ್ಯೆಗಳ ನಿವಾರಣೆಗೆ ಭಕ್ತರು ಹರಕೆ ಹೊತ್ತು ಅಗ್ನಿಕೊಂಡದಲ್ಲಿ ಕೆಂಡವನ್ನು ತುಳಿದು ಭಕ್ತಿಯ ಪರಾಕಾಷ್ಟೆಯನ್ನು ಮೆರೆಯುತ್ತಾರೆ. ನಂಭಿಕೆ ಇಟ್ಟು ನೆಡೆದು ಕೊಳ್ಳುವ ಭಕ್ತರನ್ನು ಉದ್ಧರಿಸಿರುವ ಪವಾಡಗಳನ್ನ ಭಕ್ತರ ನುಡಿಯಲ್ಲಿ ಕೇಳಬಹುದಾಗಿದೆ. ಮರುಳಸಿದ್ಧರ ಮಹಿಮೆಯು ಭಕ್ತರನ್ನು ಆಕರ್ಶಿಸುತ್ತದೆ.