ಶ್ರೀರಾಮ ಮಂದಿರಕ್ಕೆ ಚಿನ್ನದ ನಾಡಿನ ಕೊಡುಗೆ

ಶ್ರೀರಾಮ ಮಂದಿರಕ್ಕೆ ಚಿನ್ನದ ನಾಡಿನ ಕೊಡುಗೆ

ಶ್ರೀರಾಮ ಮಂದಿರಕ್ಕೆ ಚಿನ್ನದ ನಾಡಿನ ಕೊಡುಗೆ

ಕೆಜಿಎಫ್: ಅಯೋಧ್ಯ ರಾಮಮಂದಿರ ನಿರ್ಮಾಣದಲ್ಲಿ ಕೆಜಿಎಫ್ ಎನ್ ಐ ಆರ್ ಎಂ ವಿಜ್ಞಾನಿಗಳು ಮಹತ್ವವಾದ ಪಾತ್ರ ವಹಿಸಿರುವುದು ಜಿಲ್ಲೆಗೆ ಹಾಗೂ ರಾಜ್ಯದ ಹಿರಿಮೆಯನ್ನು ಹೆಚ್ಚುವಂತೆ ಮಾಡಿದೆ. ರಾಮಮಂದಿರ ಹಾಗೂ ರಾಮಲಲ್ಲಾ ಪ್ರತಿಯೊಂದು ಕಲ್ಲಿನ ಗುಣಮಟ್ಟವನ್ನು  ಪರೀಕ್ಷಿಸಿ ಪ್ರಮಾಣಿಕರಿಸುವ ಜವಾಬ್ದಾರಿಯನ್ನು ಕೆಜಿಎಫ್ ವಿಜ್ಞಾನಿಗಳು ನಿರ್ವಹಿಸಿದ್ದು. ಕೆಜಿಎಫ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ರಾಕ್ ಮೆಕಾನಿಕ್ (ಎನ್ ಐ ಆರ್ ಎಂ) ಸಂಸ್ಥೆಯ ಪ್ರಮುಖ ಪಾತ್ರವಹಿಸಿದೆ. ಅದರಲ್ಲಿಯೂ ಪ್ರಮುಖವಾಗಿ ಮಂದಿರ ನಿರ್ಮಾಣಕ್ಕೆ ಬಳಸಿದಂತಹ ಪ್ರತಿಯೊಂದು ಕಲ್ಲನ್ನು ಪರೀಕ್ಷೆಯು ಜವಾಬ್ದಾರಿಯನ್ನು ಕನ್ನಡಿಗರು ಎನ್ಐಆರ್‌ಎಂ ಪ್ರಧಾನ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ. ಎ ರಾಜನ್ ಬಾಬು ವಹಿಸಿಕೊಂಡಿದ್ದು ಮತ್ತೊಂದು ಹಿರಿಮೆಯ ಸಂಗತಿ. ರಾಜನ್ ನೇತೃತ್ವದ ತಂಡದಲ್ಲಿ  ಏಂಜಲ್ ವಿಕ್ಟರ್. ಡಿ.ಪ್ರಶಾಂತ್ ಕುಮಾರ್ ಆರ್.ಪ್ರಭು. ಹಾಗೂ ಎಸ್ ಬಾಬು ಅವರು ಕೆಲಸ ಮಾಡಿದ್ದು. ಮಂದಿರ ರಚನೆ ಮತ್ತು ವಿನ್ಯಾಸದಲ್ಲಿ ತಮ್ಮದೇ ಆದಂತಹ ಪಾತ್ರವನ್ನು ನಿರ್ವಹಿಸಿದ್ದಾರೆ. 

ಕೆಜಿಎಫ್ ನಲ್ಲಿದೆ ಅತ್ಯುತ್ತಮ ಲ್ಯಾಬ್! : ಕಲ್ಲುಗಳ ಪರೀಕ್ಷೆಗೆ ಇಡೀ ದಕ್ಷಿಣ ಏಷ್ಯಾದಲ್ಲಿಯೇ ಅತ್ಯುತ್ತಮ ಗುಣಮಟ್ಟದ ಲ್ಯಾಬ್ ಕೆಜಿಎಫ್ನಲ್ಲಿದೆ ಎಂಬುದು ಜಿಲ್ಲೆಯ ಪಾಲಿನ ಹೆಮ್ಮೆಯ ವಿಷಯವಾಗಿದ್ದು. ಮಂದಿರ ನಿರ್ಮಾಣ ಕಾರ್ಯಕ್ಕೆ ವಿವಿಧ ಮಾದರಿಯ ಸುಮಾರು ಒಂದು ಲಕ್ಷಕ್ಕೂ ಅಧಿಕ ಕಲ್ಲುಗಳನ್ನು ಪರೀಕ್ಷೆಗೆ ಒಳಪಡಿಸಿ ಅಂತಿಮವಾಗಿ ಕಲ್ಲುಗಳ ಆಯ್ಕೆ ಮಾಡಿ ರಾಮಮಂದಿರ ನಿರ್ಮಿಸಲಾಗಿದೆ. ಕಲ್ಲುಗಳ ಪರಿಶೀಗಾಗಿಯೇ ಸುಮಾರು 8.24 ಕೋಟಿ ರೂ ವೆಚ್ಚ ಮಾಡಲಾಗಿದೆ ಎನ್ನಲಾಗುತ್ತಿದೆ.: ಮೂರು ಮಾದರಿ ಕಲ್ಲುಗಳ ಬಳಕೆ: ಅದರಂತೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಮೂರು ಮಾದರಿಯ ಕಲ್ಲುಗಳನ್ನು ಬಳಕೆ ಮಾಡಲಾಗಿದ್ದು. ತಳಪಾಯಕ್ಕೆ ಗ್ರಾನೈಟ್ ಮಾದರಿ ಕಲ್ಲು. ಸೂಪರ್ ಕಲ್ಲ್ಚರ್ ಕಲ್ಲುಗಳನ್ನು ಕಾಲಂಗಳು. ಕಾರ್ವಿಂಗ್ .ಭೀಮ್ಸ್ ಗಳಿಗೆ ಮತ್ತು ಡೆಕೋರೇಟಿವ್ ಕಲ್ಲುಗಳನ್ನು ದೇವಾಲಯಕ್ಕೆ ಅಂದವನ್ನು ನೀಡಲು ಬಳಸಲಾಗಿದೆ ಎಂದು ರಾಜನ್ ಬಾಬು ತಿಳಿಸಿದ್ದಾರೆ.