ಫೆಬ್ರವರಿ 2 ರಿಂದ 18  "ಶ್ರೀ ಮಧ್ವ-ಪುರಂದರೋತ್ಸವ"

ಫೆಬ್ರವರಿ 2 ರಿಂದ 18  "ಶ್ರೀ ಮಧ್ವ-ಪುರಂದರೋತ್ಸವ"

ಫೆಬ್ರವರಿ 2 ರಿಂದ 18  "ಶ್ರೀ ಮಧ್ವ-ಪುರಂದರೋತ್ಸವ"

ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಫೆಬ್ರವರಿ 2 ರಿಂದ 18ರ ವರೆಗೆ  "ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ" ಹಾಗೂ  "ಮಧ್ವ ನವರಾತ್ರಿ ಉತ್ಸವ"ದ  ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :

ಶ್ರೀ ಪುರಂದರದಾಸ ಆರಾಧನೆ: 
ಫೆಬ್ರವರಿ 2 ರಿಂದ 9 ಪ್ರತಿದಿನ ಸಂಜೆ 6-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು:  ಫೆಬ್ರವರಿ 2: ಪರಮಪೂಜ್ಯ ಶ್ರೀ 1008 ಶ್ರೀ ಸುವಿದ್ಯೇಂದ್ರತೀರ್ಥ ಶ್ರೀಪಾದಂಗಳವರಿಂದ ಕಾರ್ಯಕ್ರಮದ ಉದ್ಘಾಟನೆ ಮತ್ತು ಆಶೀರ್ವಚನ. ಫೆಬ್ರವರಿ 3: ನಾಡಿನ ಹೆಸರಾಂತ ಕಲಾವಿದರುಗಳಾದ ವಿದ್ವಾನ್ ಶ್ರೀ ಅನಂತಕುಲಕರ್ಣಿ, ವಿದ್ವಾನ್ ಶ್ರೀ ರಾಯಚೂರು ಶೇಷಗಿರಿದಾಸ್, ವಿದುಷಿ ಶ್ರೀಮತಿ ದಿವ್ಯಾ ಗಿರಿಧರ್, ವಿದುಷಿ ಶ್ರೀಮತಿ ಭಾರ್ಗವಿ ಗುಡಿ ಮತ್ತು ಸಂಗಡಿಗರಿಂದ "ದಾಸರ ಪದಗಳ ಅಂತ್ಯಾಕ್ಷರಿ", ಫೆಬ್ರವರಿ 4 : ನಾದಸ್ವಾದ ಸಂಸ್ಥೆಯ ಶ್ರೀ ಶ್ರೀವತ್ಸ ಕಶ್ಯಪ್ ಮತ್ತು ಸಂಗಡಿಗರಿಂದ "ಕರ್ನಾಟಕ ವಾದ್ಯ ಸಂಗೀತ", ಫೆಬ್ರವರಿ 5 : ಶ್ರೀಮತಿ ಚಾಂದನಿ ಗರ್ತಿಕೆರೆ ಮತ್ತು ಸಂಗಡಿಗರಿಂದ "ಹರಿದಾಸ ಮಂಜರಿ", ಫೆಬ್ರವರಿ 6 : ರಾಯಚೂರಿನ ವಿದ್ವಾನ್ ಸಿ.ಎನ್. ರಾಘವೇಂದ್ರ ಮತ್ತು ಸಂಗಡಿಗರಿಂದ "ಹರಿಭಜನ್", ಫೆಬ್ರವರಿ 7: ವಿದ್ವಾನ್ ಶಂಕರ ಶ್ಯಾನುಭಾಗ್ ಮತ್ತು ಸಂಗಡಿಗರಿಂದ "ಹರಿದಾಸ ವೈಭವ", ಫೆಬ್ರವರಿ 8 : ಶ್ರೀಮತಿ ಸುಷ್ಮಾ ಶ್ರೇಯಸ್ ಮತ್ತು ಸಂಗಡಿಗರಿಂದ "ಹರಿದಾಸ ಝೇಂಕಾರ", ಫೆಬ್ರವರಿ 9 : ಪ್ರವಚನ ; ಶ್ರೀ ಆನಂದತೀರ್ಥಾಚಾರ್ಯ ಮಾಳಗಿ ಇವರಿಂದ ವಿಷಯ: ಶ್ರೀ ಪುರಂದರದಾಸರ ಪದಗಳ ವೈಶಿಷ್ಟ್ಯ".

"ಮಧ್ವ ನವರಾತ್ರಿ ಉತ್ಸವ" 
ಫೆಬ್ರವರಿ 10 ರಿಂದ 18 ಪ್ರತಿದಿನ ಸಂಜೆ 7-00 ಗಂಟೆಗೆ ಧಾರ್ಮಿಕ ಪ್ರವಚನ ನೀಡುವ ಪ್ರವಚನಕಾರರು : ಮಧ್ವ ಶಾಸ್ತ್ರ ಸಂಪನ್ನರುಗಳಾದ ಶ್ರೀ ದ್ವೈಪಾಯನಾಚಾರ್, ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ, ಶ್ರೀ ಮರುತಾಚಾರ್, ಶ್ರೀ ಖೇಡಾ ವೇದವ್ಯಾಸಾಚಾರ್, ಡಾ|| ವಿನಾಯಕಾಚಾರ್, ಶ್ರೀ ಅಜಯಾಚಾರ್, ಶ್ರೀ ಆದ್ವಾನಿ ವೆಂಕಟೇಶ ಕುಲಕರ್ಣಿ, ಶ್ರೀ ವಾಸುದೇವಾಚಾರ್ ಸತ್ತಿಗೇರಿ, ಶ್ರೀ ಕಲ್ಯಾ ಶ್ರೀಕಾಂತಾಚಾರ್ಯ ಇವರುಗಳಿಂದ ಧಾರ್ಮಿಕ ಪ್ರವಚನ ಏರ್ಪಡಿಸಿದೆ. ಮೇಲ್ಕಂಡ ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿ ಹರಿ ವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಶ್ರೀ ಮಠದ ಗೌರವ ಕಾರ್ಯದರ್ಶಿಗಳಾದ ಶ್ರೀ ನರಹರಿ ರಾವ್ ವಿನಂತಿಸಿದ್ದಾರೆ.