ವಿವೇಕ ಪೂರ್ಣಿಮ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯ

ಸಿಂಧನೂರು ನಗರದ ಬಪ್ಪುರ ರಸ್ತೆಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಅನಂತನ ಹುಣ್ಣಿಮೆಯ ಅಂಗವಾಗಿ ವಿವೇಕ ಪೂರ್ಣಿಮ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಶ್ರೀ ಅಮರೇಗೌಡ ಮಲ್ಲಾಪುರ, ಕರ್ನಾಟಕ ಪರಿಸರ ಪ್ರಶಸ್ತಿ ಪುರಸ್ಕೃತರು, & ಸಂಸ್ಥಾಪಕ ಅಧ್ಯಕ್ಷರು, ವನಸಿರಿ ಫೌಂಡೇಶನ್ ರಾಯಚೂರು ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಸಿ,ಸಸಿ ನೆಡುವುದರಿಂದಾಗುವ ಪ್ರಯೋಜನಗಳು & ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.ನಂತರ ಪೂಜ್ಯ ಸ್ವಾಮೀಜಿಯವರಿಗೆ ವನಸಿರಿ ಫೌಂಡೇಶನ್ ವತಿಯಿಂದ ಹೂವಿನ ಸಸಿಗಳನ್ನು ನೀಡಿದರು.
ಕಾರ್ಯಕ್ರಮದ ಅತಿಥಿಗಳಾದ ಶ್ರೀ ಮಲ್ಲಪ್ಪ ಬಿ ಅಧ್ಯಕ್ಷರು,ಸಿ.ತಾ.ಪ್ರಾ. ಶಾಲಾ ಶಿ.ಪ.ಸ.ಸಂಘ & ಮುಖ್ಯ ಗುರುಗಳು,ಸ.ಹಿ.ಪ್ರಾ.ಶಾಲೆ ಕನಕನಗರ ಸಿಂಧನೂರು ಇವರು ಸ್ವಾಮಿ ವಿವೇಕಾನಂದರ ಆದರ್ಶಗಳ ಕುರಿತು ಮಾತನಾಡಿದರು.
" ಭಜನ ಸಂದ್ಯಾ" ಕಾರ್ಯಕ್ರಮವನ್ನು ಶ್ರೀಯೀಮ್ಮಳ್ಳ ಪದ್ಮರಾಜು ಚೌಧರಿ ಗುರುಗಳು ಪಗಡದಿನ್ನಿ ಕ್ಯಾಂಪ್ & ಸಂಗಡಿಗರು ಬಹಳ ಶ್ರದ್ಧಾ ಭಕ್ತಿಯಿಂದ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ & ಅಧ್ಯಕ್ಷತೆಯನ್ನು ವಹಿಸಿದ್ದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಸದಾನಂದ ಮಹಾರಾಜ್ ರವರ ಆಶೀರ್ವದಿಸಿದರು.ಕಳಕಪ್ಪ ಗಡಾದ ಅವರು ನಿರೂಪಣೆ ಮಾಡಿದರು.ನಂತರ ಮಹಾಪ್ರಸಾದ ನೆರವೇರಿತು.
ಈ ಸಂಧರ್ಭದಲ್ಲಿ ಸ್ವಾಮಿ ವಿವೇಕಾನಂದ ಆಶ್ರಮದ ಸರ್ವ ಭಕ್ತಾಧಿಗಳು ಉಪಸ್ಥಿತರಿದ್ದರು.
What's Your Reaction?






