ಶೋಭೆಯಲ್ಲ

ಹಿರಿಯ ನಟ ಕಮಲಹಾಸನ್ ರವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆಯನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ದಿನಕ್ಕೊಬ್ಬರು ಕನ್ನಡದ ಬಗ್ಗೆ ಅವಮಾನಿಸುತ್ತಿರುವುದು ತುಂಬಾ ಬೇಸರದ ಸಂಗತಿ. ತಮಿಳಿನಿಂದ ಕನ್ನಡ ಹುಟ್ಟಿದ್ದೇ ಆದರೆ ಅದು ಹೇಗೆ ಎಂಬ ಸಂಶೋಧನೆಯನ್ನು ಕಮಲಹಾಸನ್ ಅವರು ನಿರೂಪಿಸಲಿ. ಅದು ಬಿಟ್ಟು ಪುಕ್ಕಟೆ ಪ್ರಚಾರ ಪಡೆಯಲು ಹೀಗೆ ಮಾಡುವುದು ಸರಿಯಲ್ಲ. ಇದು ಖಂಡನೀಯ. ಅವರ ಹಿರಿತನಕ್ಕೆ ಇದು ಶೋಭೆ ತರುವುದಿಲ್ಲ.
ಉದಂತ ಶಿವಕುಮಾರ
ಅಧ್ಯಕ್ಷರು
ಕನ್ನಡ ಸಾಹಿತ್ಯ ಪರಿಷತ್ತು
ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ
ಬೆಂಗಳೂರು
What's Your Reaction?






