ಕಣ್ಣೇಗಾಲ ಗ್ರಾಮದ ಶ್ರೀ ದುರ್ಗ ವರಮಹಾಲಕ್ಷ್ಮಿ ದೇವಾಲಯದ ಜಾತ್ರಾ ಮಹೋತ್ಸವ
ಸಂತೆಮರಹಳ್ಳಿ : ಸಮೀಪದ ಕಣ್ಣೆಗಾಲ ಗ್ರಾಮದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶ್ರೀ ದುರ್ಗಾ ವರ ಮಹಾಲಕ್ಷ್ಮಿ ಅಮ್ಮನವರ ದೇವಾಲಯದಲ್ಲಿ ಬಹಳ ವಿಜೃಂಭಣೆ ಜಾತ್ರಾ ಮಹೋತ್ಸವ ಜರಗಿತು.
ಶ್ರಾವಣ ಮಾಸದಲ್ಲಿ ನಡೆಯುವ ಮೂರನೇ ಶುಕ್ರವಾರದಂದು ಬಹಳ ವೈಶಿಷ್ಟ್ಯತೆ ಇರುವುದರಿಂದ ದೇವಿಗೆ
ಈ ಸಂದರ್ಭದಲ್ಲಿ ಪಂಚಾಮೃತ ಅರ್ಚನೆ, ರುದ್ರಾಭಿಷೇಕ, ಶಾಸ್ತ್ರ ನಾಮ ಸೇರಿದಂತೆ ಹಲವಾರು ಅರ್ಚನೆಗಳನ್ನು ಮಾಡಲಾಯಿತು.
ಬಹಳ ವಿಶಿಷ್ಟ ದೇವಾಲಯ ವಾಗಿರುವುದರಿಂದ ಅಕ್ಕಪಕ್ಕದ ಕ್ರಮಗಳಾದ ಕೆಂಪನಪುರ, ಸಿಂಗಂಪುರ,ಮಂಗಲದ ಹೊಸೂರು,ಹುಲ್ಲೆಪುರ ಸೇರಿದಂತೆ ಹತ್ತಾರು ಗ್ರಾಮಗಳಿಂದ 5 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಬಂದು ದೇವರ ದರ್ಶನ ಪಡೆಯುತ್ತಾರೆ.
ಕೇಳಿದ್ದನ್ನು ವರ ಕೊಡುವ ವರಮಹಾಲಕ್ಷ್ಮಿ ದೇವರ ದರ್ಶನ ಪಡೆಯಲು ಭಕ್ತಾದಿಗಳು ಸಾಲು ಸರದಿಯಲ್ಲಿ ನಿಂತು ದೇವಿ ದರ್ಶನ ಪಡೆಯುವುದು ಬಹಳ ವಿಶೇಷವಾಗಿತ್ತು.
ಈ ವೇಳೆಯಲ್ಲಿ ಸಾವಿರಾರು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
What's Your Reaction?
Like
1
Dislike
0
Love
0
Funny
0
Angry
0
Sad
0
Wow
0
