ಫೆಬ್ರುವರಿ 25 ರಿಂದ ಮಾರ್ಚ್ 3 ರವರೆಗೆ ಢವಳಗಿ ಶ್ರೀ ಮಡಿವಾಳೇಶ್ವರರ ಅದ್ದೂರಿ ಜಾತ್ರೆ

Feb 22, 2026 - 09:28
Feb 22, 2026 - 09:55
 0  26
ಫೆಬ್ರುವರಿ 25 ರಿಂದ ಮಾರ್ಚ್ 3 ರವರೆಗೆ ಢವಳಗಿ ಶ್ರೀ ಮಡಿವಾಳೇಶ್ವರರ ಅದ್ದೂರಿ ಜಾತ್ರೆ

ಮುದ್ದೇಬಿಹಾಳ:- ತಾಲೂಕಿನ ಢವಳಗಿ ಗ್ರಾಮದ ಆರಾಧ್ಯ ದೇವರಾದ ಶ್ರೀ ಮಡಿವಾಳೇಶ್ವರರ 519ನೇ ಜಾತ್ರೆ ಮಹೋತ್ಸವವು ಫ 25 ಮಾರ್ಚ 3ರ ವರೆಗೆ ಬಹಳ ಅದ್ದೂರಿಯಾಗಿ ನೆರವೇರುತ್ತದೆ. ಫೆಬ್ರುವರಿ 15ರಿಂದ ಫೆಬ್ರುವರಿ 25ರ ವರೆಗೆ ಶಿರಹಟ್ಟಿ ಜಗದ್ಗುರು ಶ್ರೀ ಫಕೀರೇಶ್ವರ ಮಹಾಪುರಾಣ ಸಾಗುವುದು. ಫೆಬ್ರುವರಿ22 ರವಿವಾರದಂದು ಪ್ರಪ್ರಥಮ ವಾಗಿ ಉಚಿತ ಆರೋಗ್ಯ ಮತ್ತು ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಫೆ.25. ಬುಧವಾರದಂದು ಸಾಯಂಕಾಲ 4 ಗಂಟೆಗೆ ಗ್ರಾಮದ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯದಿಂದ ತುರಃಪುರದ ಶೂನ್ಯ ಸಿಂಹಾಸನಾಧೀಶ್ವರ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳು ಶ್ರೀ ಜ.ಫಕೀರೇಶ್ವರ ಸಂಸ್ಥಾನ ಮಠ ಶಿರಹಟ್ಟಿ ಅವರ ಅದ್ಧೂರಿ ಜೋಡು ಪಲ್ಲಕ್ಕಿ ಮಹೋತ್ಸವದ ಮೆರವಣಿಗೆ ಜರುಗುವುದು. ನಂತರ ಸಂಜೆ 7 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಧರ್ಮಸಭೆ, ಧ್ವನಿ ಸುರುಳಿ ಬಿಡುಗಡೆ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ನಡೆಯುವುದು. ಫೆ.26 ರಂದು ಭವ್ಯ ರಥೋತ್ಸವ ಜರುಗುವುದು. ಅಂದೆ ರಾತ್ರಿ 10 ಗಂಟೆಗೆ ಲಕ್ಷ್ಮೇಶ್ವರ ಕಲಾ ತಂಡದಿಂದ ಮಗ ಹೋದರು ಮಾಂಗಲ್ಯ ಬೇಕು ಎನ್ನುವ ಸುಂದರ ಸಾಮಾಜಿಕ ನಾಟಕ ಜರುಗುವುದು.

 

   ಫೆ.27 ಶುಕ್ರವಾರದಂದು ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆ ಇರುತ್ತದೆ. ಪ್ರಥಮ ಮತ್ತು ದ್ವೀತಿಯ ಬಹುಮಾನವಾಗಿ ಎರಡು ಬೈಕ್ ಇರುತ್ತದೆ. ಒಟ್ಟು 15 ಬಹುಮಾನಗಳು ಆಯೋಜಿಸಲಾಗಿದೆ.ಫೆ 28 ಶನಿವಾರದಂದು ಜಾನುವಾರು ಗಳ ಪ್ರದರ್ಶನ ಜೋಡೆತ್ತುಗಳಿಂದ ಭಾರವಾದ ಕಲ್ಲು ಜಗ್ಗುವ ಸ್ಪರ್ಧೆಗೆ ಒಟ್ಟು 4 ಬಹುಮಾನ ಇರುತ್ತದೆ. ಮಾರ್ಚ್ 1 ರವಿವಾರದಂದು ನಡೆಯುವ ಎತ್ತುಗಳಿಂದ ದಿಂಡು ಬಡಿಯುವ ಸ್ಪರ್ಧೆಗೆ ಒಟ್ಟು 5 ಬಹುಮಾನಗಳು ಇರುತ್ತದೆ. ಮಾರ್ಚ್ 2 ಸೋಮವಾರದಂದು ದೇಹದಾಡ್ಯ೯ ಸ್ಪರ್ಧೆಗಳಾದ ಭಾರವಾದ ಗುಂಡು ಎತ್ತುವುದು, ಭಾರವಾದ ಚೀಲ ಎತ್ತುವುದು, ಭಾರವಾದ ಸಂಗ್ರಾಣಿ ಕಲ್ಲು ಎತ್ತುವುದು ಮತ್ತು ಸಂಗ್ರಾಣಿ ಒತ್ತುಗಲ್ಲ ಸ್ಪರ್ಧೆ ಇರುತ್ತದೆ. ಎಲ್ಲಾ ಸ್ಪರ್ಧೆಗಳಿಗೆ ತಲಟ ಮೂರು ಬಹುಮಾನಗಳು ಇರುವುದು. ಮಾರ್ಚ್ 3 ಮಂಗಳವಾರದಂದು ಪುಟ್ಟಿಗಾಡಿ ರೇಸ್ ಸ್ಪರ್ಧೆ ಒಟ್ಟು 5 ಬಹುಮಾನಗಳು ಇರುತ್ತದೆ. ನಂತರ ಸಾಯಂಕಾಲ ಕಳಸ ಇಳಿಸುವುದು ಮತ್ತು ಹಂಪಾಕೊಡುವುದರೊಂದಿಗೆ ಜಾತ್ರಾ ಮಹೋತ್ಸವವು ಸಂಪನ್ನಗೋಳ್ಳುವುದು.ಹಾಗೂ ಹೆಚ್ಚಿನ ಮಾಹಿತಿಗಾಗಿ 7022553097 ಮತ್ತು 8296687744 ಈ ಸಂಖ್ಯೆಗೆ ಕರೆ ಮಾಡಬಹುದು ಎಂದು ದೇವಸ್ಥಾನದ ಧರ್ಮಾಧಿಕಾರಿಯಾದ ಪೂಜ್ಯ ಶ್ರೀ ಘನಮಠೇಶ್ವರ ಸ್ವಾಮೀಜಿ ಗದ್ದುಗೆಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0
suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022., Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ 08041505268 ಸಂಚಾರಿ ವಾಣಿ 9686665456