ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಎನ್. ಎಸ್. ಎಸ್ ಶಿಬಿರ ಆಯೋಜನೆ

ಬೇತಮಂಗಲ: ಸಮೀಪದ ವೆಂಗಸಂದ್ರ ಗ್ರಾಪಂ ವ್ಯಾಪ್ತಿಯ ಗೋಪೆನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸುಂದರಪಾಳ್ಯ ವಿದ್ಯಾರ್ಥಿಗಳ ವತಿಯಿಂದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.
ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯು ಕಾಲೇಜು ಮಟ್ಟದ ವಿದ್ಯಾರ್ಥಿಗಳಲ್ಲಿ ಪ್ರತಿಯೊಂದು ಹಂತದಲ್ಲೂ ಬದಲಾವಣೆ ತರುತ್ತದೆ. ಸ್ವಯಂ ಸೇವಕರು ಶ್ರಮದ ಮಹತ್ವ ಅರಿತು ಗೌರವ ನೀಡುವುದನ್ನು ಕಲಿಯುತ್ತಾರೆ ಎಂದು ಕಾಲೇಜು ಪ್ರಾದ್ಯಪಕರು ತಿಳಿಸಿದರು.
ವಿದ್ಯಾರ್ಥಿಗಳು ಕಲಿಕಾ ಹಂತದಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಆಗಲೇ ಸಮಾಜದಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಶಿಬಿರಾರ್ಥಿಗಳು ಗ್ರಾಮದಲ್ಲಿ ಬೆಳಗ್ಗಿನಿಂದ ಚರಂಡಿ. ಕಸದ ಗುಂಡಿಗಳು. ಸೇರಿದಂತೆ ಹಲುವು ಕಡೆ ಗ್ರಾಮದ ಸ್ವಚ್ಛತೆ ಯನ್ನು ಕಾಪಾಡುವಲ್ಲಿ ತೊಡಗಿದ್ದರು ಶ್ರಮದಾನ ಮುಗಿದ ಮೇಲೆ ಸಾಯಂಕಾಲ ಗ್ರಾಮದಲ್ಲಿ ಸಾರ್ವಜನಿಕರನ್ನು ಮನೋರಂಜಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಡಾ. ಸಂತೋಷ್ ಮಿಶ್ರ. ಮಂಜುನಾಥ್, ಸಂಜೀವ್, ಗೋವಿಂದ್ ಗೌಡ, ಗೋಪಾಲ್ ಕೃಷ್ಣ, ದೇವರಾಜ್, ಸೋಮಶೇಖರ್, ಮುರಳಿಧರ್, ರಾಜೇಶ್, ಪೃಥ್ವಿ, ರಾಘವೇಂದ್ರ, ಮಂಜುನಾಥ್, ಅನಿತಾ ಹಜಿರಾ, ಸೇರಿದಂತೆ ಶಿಬಿರಾರ್ಥಿಗಳು ಸಾರ್ವಜನಿಕರು ಹಾಗೂ ಗ್ರಾಮಸ್ಥರು ಇದ್ದರು.
What's Your Reaction?






