ಪ್ರಜಾತತ್ವ ಮಾನವ ಹಕ್ಕುಗಳ ಪೌಂಡೇಶನ್ ಪದಾಧಿಕಾರಿಗಳ ಆಯ್ಕೆ: ನಾರಾಯಣ ರೆಡ್ಡಿ
ಬೇತಮಂಗಲ: ಕೆಜಿಎಫ್ ತಾಲೂಕು ಘಟಕ ಪದಾಧಿಕಾರಿಗಳ ಆಯ್ಕೆ ಪ್ರಜಾತತ್ವ ಮಾನವ ಹಕ್ಕುಗಳ ಪೌಂಡೇಶನ್ ಕೆಜಿಎಫ್ ತಾಲೂಕು ಪದಾಧಿಕಾರಿಗಳನ್ನು ಸಂಸ್ಥಾಪಕ ಅಧ್ಯಕ್ಷ ನಾರಾಯಣ ರೆಡ್ಡಿ ಆಯ್ಕೆ ಮಾಡಿದರು.
ಪಟ್ಟಣದ ಬಳಿಯ ಕ್ಯಾಸಂಬಳ್ಳಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಮಾತನಾಡಿದ ಅವರು, ನಮಗೆ ಯಾವುದೇ ರಾಜಕೀಯ ವ್ಯಕ್ತಿಗಳ ಹಾಗೂ ಅಧಿಕಾರಿಗಳ ಬಗ್ಗೆ ದ್ವೇಷವಿಲ್ಲ ಪ್ರತಿಯೊಬ್ಬ ಪ್ರಜೆಗೂ ಸಮಾನ ರೀತಿಯಲ್ಲಿ ಸೌಲಭ್ಯ ದೊರೆಯಬೇಕು ಎಂಬ ಆಶಯದೊಂದಿಗೆ ಸಂಘಟನೆ ಸ್ಥಾಪಿಸಲಾಗಿದೆ ಎಂದರು.
ಎಲ್ಲಿ ಅನ್ಯಾಯ ಆಗಿದಿಯೋ ಅಲ್ಲಿ ನಮ್ಮ ಸಂಘಟನೆ ಮುಂದೆ ಇರುತ್ತದೆ. ಭ್ರಷ್ಟಾಚಾರಿಗಳ ವಿರುದ್ಧ ಹೋರಾಟ ನಡೆಸುತ್ತೇವೆ. ಕೇರಳ, ಕರ್ನಾಟಕ , ತಮಿಳು ನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 6 ಸಾವಿರಕ್ಕೂ ಅಧಿಕ ಮಂದಿ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದೆ ಎಂದರು.
ಈ ಸಭೆಯಲ್ಲಿ ಸಂಸ್ಥಾಪನಾ ಅಧ್ಯಕ್ಷರಾದ ನಾರಾಯಣ ರೆಡ್ಡಿ ಅವರು ಹಾಗೂ ರಾಜ್ಯ ಪದಾಧಿಕಾರಿ ರಾಷ್ಟ್ರೀಯ ಪದಾಧಿಕಾರಿಗಳಾ ಉಮೇಶ್ ಕೆ. ಸಿ, ರಾಷ್ಟ್ರೀಯ ಮಹಿಳಾ ಪದಾಧಿಕಾರಿಗಳಾದ ಮಂಜುಳಾ ಬಿ,ಕೆ , ಹಾಗೂ ರಾಜ್ಯ ಮಹಿಳಾ ಅಧ್ಯಕ್ಷರಾದ ಆಶಾ ಮುರಳಿ ಅವರ ನೇತೃತ್ವದಲ್ಲಿ ಕೆಜಿಎಫ್ ತಾಲೂಕು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಾಡಲಾಯಿತು.
ನೂತನ ಪದಾಧಿಕಾರಿಗಳು: ತಾಲೂಕು ಅಧ್ಯಕ್ಷಾಗಿ ಪ್ರಸನ್ನ ಕುಮಾರ್,ತಾಲೂಕು ಕಾರ್ಯಧ್ಯಕ್ಷರು ರಾಜೇಂದ್ರ ಪ್ರಸಾದ್, ತಾಲೂಕು ಬೋರ್ಡ್ ಕಮಿಟಿ ಅಧ್ಯಕ್ಷರು ಚಲುವರಾಜು,ತಾಲೂಕು ಯುವ ಅಧ್ಯಕ್ಷ ರವಿನಾಯ್ದು,ತಾಲೂಕು ಯುವ
ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದೇವರಾಜ್ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಭೆಯಲ್ಲಿ ಸದಸ್ಯರಾದ ಗುರುವಾ ರೆಡ್ಡಿ, ಪ್ರಶಾಂತ್ ರೆಡ್ಡಿ,ಪ್ರಭಾಕರ್ ರೆಡ್ಡಿ, ಆನಂದ ಆಚಾರ್, ಅಶ್ವತ್ಥ್ ನಾರಾಯಣ ರೆಡ್ಡಿ, ರಾಮಕೃಷ್ಣ, ಶಿವು,ಮನೋಹರ್, ಹರೀಶ್,ಸುಬ್ರಮಣಿ, ಸುರೇಶ್ ಕುಮಾರ್ ಜಗನ್ನಾಥ್ ರೆಡ್ಡಿ, ಪ್ರವೀಣ್, ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ 01 ಬೇತಮಂಗಲ ಬಳಿಯ ಕ್ಯಾಸಂಬಳ್ಳಿಯಲ್ಲಿ ಪ್ರಜಾತತ್ವ ಮಾನವ ಹಕ್ಕುಗಳ ಪೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ನಾರಾಯಣ ರೆಡ್ಡಿ ನೇತೃತ್ವದಲ್ಲಿ ಕೆಜಿಎಫ್ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
What's Your Reaction?
Like
2
Dislike
0
Love
1
Funny
0
Angry
0
Sad
0
Wow
0
