ಹಂಪಾಪುರ ರಾಮ ಮಂದಿರಕ್ಕೆ 25 ಸಾವಿರ ರೂ. ಕೊಡುಗೆ

ಮೈಸೂರು ಜಿಲ್ಲೆ ಕೆ. ಆರ್. ನಗರದ ಆದ್ಯಾತ್ಮಿಕ ಚಿಂತಕ, ಪ್ರಸಿದ್ಧ ಗಮಕಿ ಹಾಗೂ ಶೃಂಗೇರಿ ಮಠ ಮುದ್ರಾಧಿಕಾರಿ ಸಂತ ಸಚ್ಚಿದಾನಂದ
ದಾಸ್ ಅವರು ತಾಲೂಕಿನ ಹಂಪಾಪುರ ಗ್ರಾಮದ ಇತಿಹಾಸ ಪ್ರಸಿದ್ಧ ರಾಮ ಮಂದಿರಕ್ಕೆ 25 ಸಾವಿರ ರೂ. ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಚಿತ್ರದಲ್ಲಿ ಶ್ರೀಮತಿ ತಾರಾ ಸಚ್ಚಿ ದಾನಂದ ದಾಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಶ್ರೀಯುತ ಸಚ್ಚಿದಾ ನಂದ ದಾಸ್ ಅವರು ಶ್ರೀ ರಾಮಾ ನಂದಶ್ರಮದ ಮುಲಕ ಆದ್ಯಾತ್ಮಿಕ ಚಿಂತನೆಗಳನ್ನು ಯುವ ಜನಾಂಗಕ್ಕೆ ನೀಡುತ್ತಿದ್ದಾರೆ. ಅವರ ಆತ್ಮಕತೆ ಆತ್ಮರಾಮೋ ವಿಜಯತೇ ಈಗಾಗಲೇ ಪ್ರಕಟಗೊಂಡಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
What's Your Reaction?






