ಕೆಜಿಎಫ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಕುಂದು ಕೊರತೆಗಳ ಸಭೆ

ಕೆಜಿಎಫ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಕುಂದು ಕೊರತೆಗಳ ಸಭೆ

ಕೆಜಿಎಫ್ ನಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಕುಂದು ಕೊರತೆಗಳ ಸಭೆ

ಕೆಜಿಎಫ್: ಕೆಜಿಎಫ್ ನಗರದ ನಗರಸಭೆ ಆವರಣದಲ್ಲಿ ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ ಪಿ ಉಮೇಶ್ ರವರ ನೇತೃತ್ವದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಭೆಯನ್ನು ಆಯೋಜನೆ ಮಾಡಲಾಗಿತ್ತು. ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಅರ್ಜಿಗಳನ್ನು ಅಧಿಕಾರಿಗಳಿಗೆ ನೀಡಿದರು. ಸಭೆಯಲ್ಲಿ ಒಟ್ಟು 23 ದೂರಗಳು ಬಂದಿದ್ದು, ಕಂದಾಯ ಇಲಾಖೆ 13, ಸಮಾಜ ಕಲ್ಯಾಣ ಇಲಾಖೆ 2, ನಗರಸಭೆ 1 ಗಣಿ ಭೂ ವಿಜ್ಞಾನ ಇಲಾಖೆ 2 ಇತರೆ 1 ಒಟ್ಟು 23 ದೂರಗಳು ಬಂದಿದ್ದು, ಇದರಲ್ಲಿ ಬಹುದಿನಗಳಿಂದ ಸಮಸ್ಯೆ ಬಗೆಹರಿಯದ ಕೇಸ್ ಗಳನ್ನು ಫಾರಂ 1/2 ಲೋಕಾಯುಕ್ತ ಮೇಲಾಧಿಕಾರಿ ಗಳಿಗೆ ಕಳುಹಿಸಿದ್ದು.  ಹಿಂದಿನ ಸಭೆಯಲ್ಲಿ 22 ದೂರುಗಳು ಬಂದಿದ್ದು. ಇದರಲ್ಲಿ 20 ದೂರುಗಳು ಪರಿಹಾರ ಆಗಿದ್ದು 2 ದೂರು ಗಳನ್ನು ಪರಂ 1.2 ಅಡಿಯಲ್ಲಿ ನಮ್ಮ ಮೇಲೆ ಅಧಿಕಾರಿಗಳಿಗೆ ಕಳುಹಿಸಿರುತ್ತೇವೆ ಎಂದರು. ಸಾರ್ವಜನಿಕರು ಕೆಲವು ಸರ್ಕಾರಿ ಇಲಾಖೆಗಳಲ್ಲಿ ಹೆಚ್ಚಿನ ಸಮಸ್ಯೆಗಳಿಗೆ ಎಂದು ಮಾತನಾಡುತ್ತಾರೆ. ಆದರೆ ಲೋಕಾಯುಕ್ತ ಇಲಾಖೆಯಿಂದ ಕುಂದು ಕೊರತೆಗಳ ಸಭೆಯನ್ನು ಆಯೋಜನೆ ಮಾಡಿದರೆ ಯಾರು ಸಹ ಮುಂದೆ ಬಂದು ದೂರು ನೀಡುವುದಿಲ್ಲ ಎಂದರು ಪ್ರತಿ ತಿಂಗಳಿಗೆ ಎರಡನೇ ಶನಿವಾರದಂದು ನಮ್ಮ ಕಚೇರಿಯಿಂದ ಕುಂದು ಕೊರತೆಗಳ ಸಭೆ ಆಯೋಜನೆ ಮಾಡುತ್ತೇವೆ. ಸಾರ್ವಜನಿಕರ ಸಮಸ್ಯೆಗಳಿದ್ದರೆ ನಮಗೆ ದೂರು ನೀಡಬಹುದು ಎಂದರು. ನಂತರ  ವಿವಿಧ ಇಲಾಖೆ ಅಧಿಕಾರಿಗಳನ್ನು ಉದ್ದೇಶ ಮಾತನಾಡಿದವರು. ತಮ್ಮ ಇಲಾಖೆಗಳಲ್ಲಿ ಸಾರ್ವಜನಿಕರು ಆಗಮಿಸಿ ತಮ್ಮ ಸಮಸ್ಯೆಗಳನ್ನು ತಿಳಿಸಿದ್ದಾರೆ ಅಧಿಕಾರಿಗಳಿಗೆ ಉಡಾಫೆ ಉತ್ತರ ನೀಡಬಾರದು. ಅವರನ್ನು  ಅಲೆದಾಡಿಸಬಾರದು. ಅದಕ್ಕೆ ಸೂಕ್ತವಾದ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ತಿಳಿಸಬೇಕು. ಕೆಲವು ನಾಗರಿಕರಲ್ಲಿ ಮಾಹಿತಿ ಕೊರತೆ  ಇರುವುದರಿಂದ. ಇಂಥವರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಸರ್ಕಾರಿ ಕೆಲಸ ದೇವರ ಕೆಲಸ ಕಚೇರಿಗಳಲ್ಲಿ ಸರೋಜನರಿಗೆ ತೊಂದರೆ ನೀಡದೆ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು ಇಲಾಖೆಯಲ್ಲಿ ಒಳ್ಳೆಯ ಹೆಸರು ಪಡೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಕಂದಾಯ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳ ಕಾಲುದಾರಿ  ಸಮಸ್ಯೆಗಳು. ಸರ್ವೆ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಬೇಕೆಂದು ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ನಾಗವೇಣಿ. ತಾಲೂಕು ಪಂಚಾಯತಿ ಇ ಓ ಮಂಜುನಾಥ  ಹರ್ತಿ. ನಗರಸಭೆ ಪೌರಾಯುಕ್ತರು ಪವನ್ ಕುಮಾರ್ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ರಾಜೇಶ್. ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.