ಅಕ್ರಮವಾಗಿ ಗೋವುಗಳು ಹಾಗೂ ಕರುಗಳ ಸಾಗಾಟ ತಡೆದ ಗ್ರಾಮಸ್ಥರು

ಅಕ್ರಮವಾಗಿ ಗೋವುಗಳು ಹಾಗೂ ಕರುಗಳ ಸಾಗಾಟ ತಡೆದ ಗ್ರಾಮಸ್ಥರು

ಅಕ್ರಮವಾಗಿ ಗೋವುಗಳು ಹಾಗೂ ಕರುಗಳ ಸಾಗಾಟ ತಡೆದ ಗ್ರಾಮಸ್ಥರು

ಇಂಡಿ:ತಾಲೂಕಿನ ಹಿರೆಬೇವನೂರು ಗ್ರಾಮದಲ್ಲಿ ಮಧ್ಯರಾತ್ರಿ ಈ  ಘಟನೆ ನಡೆದಿದೆ. ನೆರೆಯ ಮಹಾರಾಷ್ಟçದ ಅಕ್ಕಲಕೋಟದಿಂದ ಅಗರಖೇಡ ಮಾರ್ಗವಾಗಿ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣಕ್ಕೆ ಸಾಗಾಟ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಬುಲೆರೋ ಪಿಕ್ ಅಪ್ ಗೂಡ್ಸ್ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ಹಸುಗಳು ಹಾಗೂ ಕರುಗಳು, 110 ಕ್ಕೂ ಹೆಚ್ಚು ಆಕಳು ಹಾಗೂ ಕರುಗಳು ರಕ್ಷಣೆ ಮಾಡಿದ ಹಿರೆಬೇವನೂರು ಗ್ರಾಮದ ಜನರು, ಮದ್ಯರಾತ್ರಿ ಆಕಳು ಹಾಗೂ ಕರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವೇಳೆ ತಡೆದಿದ್ದಾರೆ. ಜನರು ವಾಹನಗಳನ್ನು ತಡೆಯುತ್ತಿದ್ದಂತೆ ಎರಡು ವಾಹನಗಳ ಚಾಲಕರು ಪರಾರಿ ಜನರ ಕೈಗೆ ಸಿಕ್ಕಿ ಬಿದ್ದ ಓರ್ವ ಚಾಲಕ ಮೂರು ವಾಹನಗಳಲ್ಲಿದ್ದ ಆಕಳು ಹಾಗೂ ಕರುಗಳನ್ನು  ವಾಹನಗಳಲ್ಲಿ ಕಟ್ಟಲಾಗಿತ್ತು. ಮೂರು ವಾಹನಗಳಲ್ಲಿ  ಆಕಳು ಹಾಗೂ ಕರುಗಳನ್ನು ಹಾಕಿದ್ದರು. ಈ ವಿಷಯವನ್ನು ಇಂಡಿ ಗ್ರಾಮೀಣ ಪೊಲೀಸ್ ಠಾಣೆಗೆ ಮಾಹಿತಿ ಗ್ರಾಮಸ್ಥರು ನೀಡಿದರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯ ಆಧಿಕಾರಿಗಳು ಹಾಗೂ ಸಿಬ್ಬಂದಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆಕಳು ಹಾಗೂ ಕರುಗಳನ್ನು ವಿಜಯಪುರದ ಗೋಶಾಲೆಗೆ ಪೊಲೀಸರು  ಕಳುಹಿಸಿದ್ದಾರೆ. ಈ ವೇಳೆ ವಾಹದಲ್ಲೇ ಮೃತಪಟ್ಟಿದ್ದ 1 ಆಕಳು ಹಾಗೂ 11 ಕರುಗಳ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆಯಲ್ಲಿ ಇತರೆ ಮಾಹಿತಿ ತಿಳಿದು ಬರಬೇಕಿದೆ. ಆಕಳು ಹಾಗೂ ಕರುಗಳನ್ನು ಎಲ್ಲಿಂದ ಎಲ್ಲಿಗೆ ಹಾಗೂ ಯಾರಿಗೆ ಸಾಗಾಟ ಮಾಡುತ್ತಿದ್ದ ವಿಚಾರ ತನಿಖೆಯಿಂದ ಬಹಿರಂಗವಾಗಬೇಕಿದೆ. ಸ್ಥಳಕ್ಕೆ ಗ್ರಾಮೀಣ ಪಿಎಸ್ ಐ ಮಂಜುನಾಥ ಹುಲಕುಂದ,  ಸಿ.ಪಿ.ಐ ಸುನೀಲ ಪಾಟೀಲ ಭೇಟಿ ನೀಡಿದ್ದು ತನಿಖೆ ಮುಂದುವರೆದಿದೆ.