ವಕೀಲರ ಮೇಲೆ ಪ್ರಕರಣ ದಾಖಲುಮಾಡಿರುದನ್ನು ಖಂಡಿಸಿ ಕಲಾಪ ಬಹಿಸ್ಕರಿಸಿದ ಬಾಗೇಪಲ್ಲಿ ವಕೀಲರ ಸಂಘ

ವಕೀಲರ ಮೇಲೆ ಪ್ರಕರಣ ದಾಖಲುಮಾಡಿರುದನ್ನು ಖಂಡಿಸಿ ಕಲಾಪ ಬಹಿಸ್ಕರಿಸಿದ ಬಾಗೇಪಲ್ಲಿ ವಕೀಲರ ಸಂಘ

ವಕೀಲರ ಮೇಲೆ ಪ್ರಕರಣ ದಾಖಲುಮಾಡಿರುದನ್ನು ಖಂಡಿಸಿ ಕಲಾಪ ಬಹಿಸ್ಕರಿಸಿದ ಬಾಗೇಪಲ್ಲಿ ವಕೀಲರ ಸಂಘ

ಬಾಗೇಪಲ್ಲಿ: ರಾಮನಗರ ವಕೀಲರ ಸಂಘದ 45 ಮಂದಿ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಐಜೂರು ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ತನ್ವೀರ್ ಹುಸೇನ್ ಅಮಾನತಿಗೆ ಆಗ್ರಹಿಸಿ ನ್ಯಾಯಾಲಯದ ಕಲಾಪ ಬಹಿಸ್ಕರಿಸಿ ಪ್ರತಿಭಟನೆಗೆ ಬಾಗೇಪಲ್ಲಿ ವಕೀಲರ ಸಂಘದಿಂದ ಬೆಂಬಲ ಸೂಚಿಸಿದ್ದಾರೆ. ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಆರೋಪಿಸಿರುವ ಬಾಗೇಪಲ್ಲಿ ವಕೀಲರ ಸಂಘ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದೆ. ರಾಮನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಹಿನ್ನೆಲೆಯಲ್ಲಿ 45 ವಕೀಲರ ಮೇಲೆ ರಾಮನಗರ ಪೊಲೀಸರು ಮೊಕದ್ದಮೆ ದಾಖಲಿಸಿರುವುದನ್ನು ಬಾಗೇಪಲ್ಲಿ ವಕೀಲರು ಖಂಡಿಸಿದ್ದಾರೆ. ವಕೀಲರ ಮೇಲೆ ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ ಬಾಗೇಪಲ್ಲಿ ನ್ಯಾಯಾಲಯದ ಕಲಾಪಗಳನ್ನು ವಕೀಲರು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದಾರೆ. ರಾಮನಗರದ ವಕೀಲ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ, ಪೊಲೀಸರ ನಿಲವು ಖಂಡಿಸಿ ಬಾಗೇಪಲ್ಲಿ ವಕೀಲರ ಸಂಘ ಕೂಡ ನಿರ್ಣಯ ಕೈಗೊಂಡಿದೆ. ವಕೀಲರ ವಿರುದ್ಧದ ಮೊಕದ್ದಮೆಯನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಬೀಳಬೇಕೆಂದು ವಕೀಲರ ಸಂಘದ ಅಧ್ಯಕ್ಷ ಎ.ನಂಜುಂಡಪ್ಪ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ವಕೀಲರ ಸಂಘದ ,ಉಪಾಧ್ಯಕ್ಷ ರಾಮಂಜಿನೆಯ,ಕಾರ್ಯದರ್ಶಿ ಎನ್.ಪ್ರಸನ್ನ ಕುಮಾರ್,ಖoಜಾಚಿ ಎ.ಮಂಜುನಾಥ್, ಹಿರಿಯ ವಕೀಲರಾದ ಸುಧಾಕರ್,ಫಾಯಾಜ್ ಪಾಷ,ಚಂದ್ರ ಶೇಖರ್,ಚಾಂದ್ ಪಾಷ,ವೆಂಕಟ ನಾರಯಣ,ಸೇರಿದಂತೆ ಇತರೆ ವಕೀಲರು ಇದ್ದರು.