ಕೆಸರು ಗದ್ದೆಯಂತಾದ ಕಿಕ್ಕೇರಿ ಅಮಾನಿ ಕೆರೆ ಏರಿ ದುರಸ್ತಿ ಪಡಿಸಿಸುವಂತೆ ಸಾರ್ವಜನಿಕರಿಂದ ಹಿಡಿ ಶಾಪ

ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಇಂದ ಸೊಳ್ಳೇಪುರ, ಕಳ್ಳನಕೆರೆ, ಕುಂದೂರು, ಗ್ರಾಮಗಳಿಗೆ ಸಂಪರ್ಕ ಹೊಂದಿರುವ ಕಿಕ್ಕೇರಿ ಅಮಾನಿಕೆರೆ ಏರಿ ಮೇಲೆ ದಿನ ನಿತ್ಯ ಶಾಲ ಮತ್ತು ಕಾಲೇಜು ಮಕ್ಕಳು, ಶಾಲಾ ವಾಹನಗಳು, ಹಾಲಿನ ವಾಹನ ಸೇರಿದಂತೆ ಬೈಕ್ ಸಾವಾರರು ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದಾರೆ ಆದರೆ ಅಮಾನಿ ಕೆರೆ ಏರಿಯ ತುಂಬಾ ಹೊಂಡಗಳು ಬಿದ್ದಿದೆ ಜೊತೆಗೆ ಏರಿಯ ಬದಿಯಲ್ಲಿ ಬೆಳೆದು ನಿಂತಿರುವ ಜಂಗಲ್ ಇಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ
ಕಳೆದ ಒಂದರೆಡು ತಿಂಗಳ ಹಿಂದೆ ಹೇಮಾವತಿ ಇಲಾಖೆ ಇಂದ ಜಂಗಲ್ ಕ್ಲೀನ್ ಮಾಡುವುದಾಗಿ ಕಿಕ್ಕೇರಿ ಕೆರೆ ಕೋಡಿ ಸಮೀಪ ಮಾತ್ರ ನೆಪಕ್ಕೆ 20 ಮೀಟರ್ ಅಷ್ಟು ಜಂಗಲ್ ಕ್ಲೀನ್ ಮಾಡಿ ಸಂಪೂರ್ಣವಾಗಿ ಜಂಗಲ್ ಕ್ಲೀನ್ ಮಾಡಿದ್ದೇವೆ ಎಂದು ಹೇಮಾವತಿ ಇಲಾಖೆಯ ಅಧಿಕಾರಿಗಳು ಶಾಮೀಲ ಆಗಿ ಬಿಲ್ ಪಡೆದುಕೊಂಡಿದ್ದಾರೆ ಎಂದು ಸೊಳ್ಳೇಪುರ ಗ್ರಾಮಸ್ಥರು ಆರೋಪಿಸಿದ್ರು
ದೊಡ್ಡ ಅಮಾನಿಕೆರೆ ಮಳೆ ಬಂದ್ರೆ ಸಾಕು ಕೆರೆ ಏರಿ ಕೆಸರಿನ ಗದ್ದೆಯಾಗಿ ಬದಲಾಗುತ್ತದೆ. 1.5 ಕಿಲೋಮೀಟರ್ ಇರವರು ಕೆರೆ ಏರಿಯ ಎರಡು ಬದಿ ತಡೆಗೋಡೆ ನಿರ್ಮಾಣವಾಗಿಲ್ಲ. ಕೆಸರಿನ ರಸ್ತೆಯಲ್ಲಿ ಸರ್ಕಸ್ ಮಾಡಿಕೊಂಡು ವಾಹನ ಚಾಲನೆ ಮಾಡಬೇಕಾದ ಸ್ಥಿತಿ ವಾಹನ ಸವಾರರಿಗೆ ಎದುರಾಗಿದೆ. ಒಂದು ವೇಳೆ ಅಯ ತಪ್ಪಿ ಬಿದ್ದರೆ ಪ್ರಾಣಕ್ಕೆ ಕುತ್ತು. ಮಳೆ ಬಂದರೆ ಕೆರೆ ಏರಿಯ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಈ ಏರಿ ಮೇಲೆ ಹಲವು ಶಾಲಾ ವಾಹನಗಳು ಸಂಚರಿಸುತ್ತವೆ. ಹಾಗಾಗಿ ಅನಾಹುತ ನಡೆಯುವ ಮುನ್ನ ಜನಪ್ರತಿನಿಧಿಗಳು, ಮತ್ತು ಸಂಬಂದ್ದ ಪಟ್ಟ ಹೇಮಾವತಿ ಇಲಾಖೆ ಕೂಡಲೇ ಕೆರೆ ಏರಿಯನ್ನು ದುರಸ್ತಿ ಪಡಿಸಿ ರಸ್ತೆಗೆ ಡಾಂಬರೀಕರಣ ಮಾಡಬೇಕು ಎನ್ನುವುದು ಸ್ಥಳೀಯ ಸೊಳ್ಳೇಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ....
What's Your Reaction?






